ಯಾದಗಿರಿ: 30 ವರ್ಷಗಳಿಂದ ಡಾಂಬರು ಕಾಣದ ರಸ್ತೆ, ರೈತರ ಸಂಚಾರಕ್ಕೆ ಸಂಕಷ್ಟ!

ಯಾದಗಿರಿ: ಮೂರು ದಶಕಗಳಿಂದ ಡಾಂಬರು ಕಾಣದ ರಸ್ತೆ  – ರೈತರ ಸಂಚಾರಕ್ಕೆ ನಿತ್ಯ ಸಂಕಷ್ಟ

ಯಾದಗಿರಿ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಹಾಗೂ ಶಹಾಪುರ ತಾಲೂಕಿನಲ್ಲಿ ರೈತರು & ಸಾರ್ವಜನಿಕರು ಕಳೆದ 30 ವರ್ಷಗಳಿಂದ ಒಂದೇ ರಸ್ತೆಯ ನೋವನ್ನು ಅನುಭವಿಸುತ್ತಿದ್ದಾರೆ. ತಿಪ್ಪನಹಳ್ಳಿ ಮಾರ್ಗವಾಗಿ ((via Thippanahalli) ಅನವಾರ, ಬೊಮ್ಮನಹಳ್ಳಿ (Bommanahalli), ಅಯ್ಯಾಳ K.T, ವಡಿಗೇರ, ಹಂಚಿನಾಳ (hanchinala) ಹಾಗೂ ಕಾಡಮಗೇರಾ (ಬಿ) ಮೂಲಕ ವಡಗೇರಿ ತಾಲೂಕಿಗೆ ಸಂಪರ್ಕ (Contact) ಕಲ್ಪಿಸುವ ಈ ರಸ್ತೆ ಕಳೆದ 30 ವರ್ಷಗಳಿಂದ (Asphalt) ಡಾಂಬರು ಕಾಣದೆ ಹದಗೆಟ್ಟಿದೆ.

WhatsApp Group Join Now
Telegram Group Join Now       

ಇದನ್ನೂ ಓದಿ: Udyogini Loan Scheme 2026: ಉದ್ಯೋಗಿನಿ ಯೋಜನೆ 2026 – ಮಹಿಳೆಯರಿಗೆ ₹3 ಲಕ್ಷ ಸಾಲ, ₹1.50 ಲಕ್ಷದವರೆಗೆ ಸಹಾಯಧನ!

ವಿಭೂತಹಳ್ಳಿ, ತಿಪ್ಪನಹಳ್ಳಿ, ಕನ್ಯಕೋಳೂರು ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳ ರೈತರು, ಕೃಷಿ ಕಾರ್ಮಿಕರು ಮತ್ತು ವಾಹನ ಸವಾರರು ಪ್ರತಿದಿನ ಅಪಾಯಕಾರಿ ಸ್ಥಿತಿಯಲ್ಲಿ ಸಂಚರಿಸುತ್ತಿದ್ದಾರೆ.

ಇದನ್ನೂ ಓದಿ: EPF Pension News Kannada: ₹1,000 ಕನಿಷ್ಠ ಪಿಂಚಣಿ ₹7,500ಕ್ಕೆ ಏರಿಕೆ? ಪಿಂಚಣಿದಾರರಿಗೆ ಮಹತ್ವದ ಅಪ್‌ಡೇಟ್

ಯಾದಗಿರಿ
ಯಾದಗಿರಿ

 

ರಸ್ತೆಯ ಪ್ರಾಮುಖ್ಯತೆ ಮತ್ತು ರೈತರ ನೋವು

ಈ ರಸ್ತೆ ಕೇವಲ ಸಂಪರ್ಕ ಮಾರ್ಗವಲ್ಲ. ಅದು ರೈತರ ಕೃಷಿ ಚಟುವಟಿಕೆಗಳಿಗೆ ಮುಖ್ಯ ಜೀವನಾಡಿ. ಜಮೀನಿಗೆ ಹೋಗಲು, ಬೆಳೆಗಳನ್ನು ಮಾರುಕಟ್ಟೆಗೆ ತಲುಪಿಸಲು, ಗೊಬ್ಬರ ಮತ್ತು ಬೀಜಗಳನ್ನು ತರಲು ರೈತರು ಈ ಮಾರ್ಗವನ್ನೇ ಅವಲಂಬಿಸಿದ್ದಾರೆ.

ಇದನ್ನೂ ಓದಿ: ಯಾದಗಿರಿ: ಹ್ಯಾಂಡ್ ಪಂಪ್ ಕೆಟ್ಟು 7 ದಿನ ಕಳೆದರೂ ರಿಪೇರಿ ಇಲ್ಲ, ನೀರಿಗಾಗಿ ಗ್ರಾಮಸ್ಥರ ಪರದಾಟ | ಕಾಡಮಗೇರ (ಬಿ)

WhatsApp Group Join Now
Telegram Group Join Now       

ಆದರೆ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು, ಮಣ್ಣಿನ ರಾಶಿಗಳು ಮತ್ತು ಅಸಮತಲ ಮೇಲ್ಮೈ ಇರುವುದರಿಂದ ವಾಹನಗಳು ಹಾನಿಯಾಗುತ್ತಿವೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ತುಂಬಿ ಅಪಾಯ ಇನ್ನಷ್ಟು ಹೆಚ್ಚಾಗುತ್ತದೆ. ರೈತರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ಇದನ್ನೂ ಓದಿ: ರೈತರೇ ಗಮನಿಸಿ! 2026-27ರ ಹಿಂಗಾರು ಬೆಳೆ ವಿಮೆ ನೋಂದಣಿ ಆರಂಭ, ಕೊನೆಯ ದಿನಾಂಕ ಇಲ್ಲಿದೆ | Rabi Crop Insurance 2026-27

ಕರ್ನಾಟಕ ಪ್ರಾಂತ ರೈತ ಸಂಘದ ಶಹಾಪುರ ತಾಲೂಕು ಸಮಿತಿ ಈ ವಿಷಯದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತಾಲೂಕು ಕಾರ್ಯದರ್ಶಿ ಭೀಮಣ್ಣ ರಸ್ತಾಪುರ ಅವರು, ಜಿಲ್ಲಾಧಿಕಾರಿಗಳು, ತಾಲೂಕು ದಂಡಾಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜನಪ್ರತಿನಿಧಿಗಳು & ಅಧಿಕಾರಿಗಳ (of officials) ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ (situation) ಮುಂದುವರಿದಿದೆ ಎಂದು ಅವರು ಆರೋಪಿಸಿದ್ದಾರೆ.

 

ಕಾಮಗಾರಿಯಲ್ಲಿ ಅವ್ಯವಹಾರದ ಆರೋಪ

ರೈತ ಸಂಘದವರು ಇನ್ನೊಂದು ಗಂಭೀರ ಆರೋಪವನ್ನೂ ಮಾಡಿದ್ದಾರೆ. ರಸ್ತೆ ಅಭಿವೃದ್ಧಿಗಾಗಿ ಜಿಲ್ಲಾ ಪಂಚಾಯಿತಿಯಿಂದ ₹25 ರಿಂದ ₹30 ಲಕ್ಷ ಮೊತ್ತದ ಕಾಮಗಾರಿಗೆ ಟೆಂಡರ್ ನೀಡಲಾಗಿತ್ತು. ಆದರೆ ಕೇವಲ 500 ಮೀಟರ್‌ವರೆಗೆ ((up to 500 meters only) ಮಾತ್ರ ಜಲ್ಲಿ ಹಾಕಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸದೆ (Unfinished) ಹಣವನ್ನು ದುರುಪಯೋಗ (Abuse) ಪಡಿಸಿಕೊಂಡಿರುವುದಾಗಿ ಅವರು ಆರೋಪ ಮಾಡಲಾಗುತ್ತಿದೆ ಹಾಗಾಗಿ ಶೀಘ್ರವೇ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸಂಬಂಧಪಟ್ಟ ಗುತ್ತಿಗೆದಾರರ ಪರವಾನಗಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ರೈತ ಸಂಘ ಒತ್ತಾಯಿಸಿದೆ.

 

ಹೋರಾಟದ ಎಚ್ಚರಿಕೆ

ರಸ್ತೆ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ (Seriously) ಪರಿಗಣಿಸಿ ಶೀಘ್ರ ದುರಸ್ತಿ ಕಾರ್ಯ ಅಥವಾ ರಿಪೇರಿ ಕೆಲಸ ಆರಂಭಿಸದಿದ್ದರೆ ರಸ್ತಾಪುರ (Rastapura) ಕಮಾನ್ ಸಮೀಪ ರಾಜ್ಯ ಹೆದ್ದಾರಿಯನ್ನು (Bandh) ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ (Farmers’ Association) ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ರೈತರು ಮತ್ತು ಗ್ರಾಮಸ್ಥರ ಸಂಚಾರಕ್ಕೆ & ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಹಾಗಾಗಿ ಕೂಡಲೇ ಈ ಸಮಸ್ಯೆಯನ್ನು ಇನ್ನಷ್ಟು ಕಾಲ ಮುಂದೂಡಲಾಗುವುದಿಲ್ಲ ಎಂದು ಅವರು ಮಾಹಿತಿ ತಿಳಿಸಿದ್ದಾರೆ

 

ಗ್ರಾಮೀಣ ಮೂಲಸೌಕರ್ಯದ ಅಗತ್ಯ

ಯಾದಗಿರಿ ಜಿಲ್ಲೆಗೆ ಒಳಪಡುವ ಗ್ರಾಮ ಮತ್ತು ತಾಲೂಕು ಪ್ರದೇಶಗಳು ಕೃಷಿ ಪ್ರಧಾನ ಪ್ರದೇಶಗಳಲ್ಲಿ ರಸ್ತೆಗಳು ಕೇವಲ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲ. ಅವು ರೈತರ ಆರ್ಥಿಕತೆ, ಶಿಕ್ಷಣ, ಆರೋಗ್ಯ ಮತ್ತು ಮಾರುಕಟ್ಟೆ ಸಂಪರ್ಕಕ್ಕೆ ನೇರವಾಗಿ ಸಂಬಂಧಿಸಿವೆ. ಮೂರು ದಶಕಗಳಿಂದ ಡಾಂಬರು ಕಾಣದ ರಸ್ತೆ ರೈತರ ವೆಚ್ಚವನ್ನು ಹೆಚ್ಚಿಸುತ್ತಿದೆ.

ವಾಹನ ದುರಸ್ತಿ (vehicle repair), ಸಮಯದ ನಷ್ಟ & ಅಪಘಾತದ ಅಪಾಯಗಳು (farmers) ರೈತರನ್ನು ಹೆಚ್ಚು ಹೊರೆಗೆ ತಳ್ಳುತ್ತಿವೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಈ ಸಮಸ್ಯೆಯನ್ನು ಆದ್ಯತೆಯ ಮೇಲೆ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು.

ರೈತರು ಈಗಲೂ ಆಶಾಭಾವನೆಯಲ್ಲಿದ್ದಾರೆ. ಜಿಲ್ಲಾಧಿಕಾರಿಗಳು (District Collectors) & ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬೇಗ ಪರಿಶೀಲಿಸಿ ಈ ದುರಸ್ತಿ ಕಾರ್ಯವನ್ನು ಆರಂಭಿಸಬೇಕು ಎಂದು ರೈತರು ಮತ್ತು ಗ್ರಾಮಸ್ಥರು ಅವರು ಆಗ್ರಹಿಸುತ್ತಿದ್ದಾರೆ.

ರಸ್ತೆ ದುರಸ್ತಿಯೊಂದಿಗೆ ಹಣದ ದುರುಪಯೋಗದ ಆರೋಪಗಳ ಬಗ್ಗೆಯೂ ಪಾರದರ್ಶಕ ತನಿಖೆ ನಡೆಸಬೇಕು. ಆಗ ಮಾತ್ರ ರೈತರ ನಂಬಿಕೆ ಮತ್ತು ಸರ್ಕಾರಿ ಯೋಜನೆಗಳ ಮೇಲಿನ ವಿಶ್ವಾಸ ಮತ್ತೆ ಮೂಡುವುದು.

ಯಾದಗಿರಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಇಂತಹ ಮೂಲಸೌಕರ್ಯ ಸಮಸ್ಯೆಗಳು ಮತ್ತೆ ಮತ್ತೆ ಮೇಲೆಬರುತ್ತಿವೆ. ರೈತರ ಜೀವನ & ಕೃಷಿ ಚಟುವಟಿಕೆಗಳಿಗೆ (for agricultural activities) ನೇರವಾಗಿ ಪರಿಣಾಮ  ಬೀರುತ್ತದೆ ಆದ್ದರಿಂದ ಈ ರಸ್ತೆ ಸಮಸ್ಯೆಯನ್ನು ಇನ್ನಷ್ಟು ಕಾಲ ನಿರ್ಲಕ್ಷಿಸುವುದು ಸೂಕ್ತವಲ್ಲ. ಬೇಗ ಸಂಬಂಧಪಟ್ಟ ಅಧಿಕಾರಿಗಳು (Officials) ತಕ್ಷಣ ಕ್ರಮ ಕ್ರಮ ಕೈಗೊಳ್ಳಬೇಕು ಎಂದು ರೈತರ ಸಂಕಷ್ಟಕ್ಕೆ ಅಂತ್ಯ ಹಾಡಬೇಕು.

Leave a Comment