SC Schemes 2026-27: ಪರಿಶಿಷ್ಟ ಜಾತಿಯವರಿಗೆ ಭೂ ಒಡೆತನ, ಗಂಗಾ ಕಲ್ಯಾಣ ಸೇರಿ ಹಲವು ಯೋಜನೆಗಳಿಗೆ ಅರ್ಜಿ ಆಹ್ವಾನ

SC Schemes 2026-27: ಪರಿಶಿಷ್ಟ ಜಾತಿ ಸಮುದಾಯಕ್ಕೆ ಭೂ ಒಡೆತನ, ಗಂಗಾ ಕಲ್ಯಾಣ ಮತ್ತು ಸ್ವಯಂ ಉದ್ಯೋಗ ಯೋಜನೆಗಳಿಗೆ ಅರ್ಜಿ ಆಹ್ವಾನ – ಕೊನೆಯ ದಿನಾಂಕ ನವೆಂಬರ್ 30

ಕರ್ನಾಟಕ ಸರ್ಕಾರದ ವತಿಯಿಂದ (Scheduled Caste) ಪರಿಶಿಷ್ಟ ಜಾತಿ ಸಮುದಾಯದ ಆರ್ಥಿಕ ಅಭಿವೃದ್ಧಿಗೆ 2026-2027ನೇ ಸಾಲಿನಲ್ಲಿ (various welfare schemes) ವಿವಿಧ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಅರ್ಜಿಗಳನ್ನು (applications) ಆಹ್ವಾನಿಸಲಾಗಿದೆ. ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿ, ಸಣ್ಣ ರೈತರಿಗೆ ನೀರಾವರಿ ಸೌಲಭ್ಯ, ಸ್ವಯಂ ಉದ್ಯೋಗ ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸಬಲೀಕರಣಕ್ಕೆ ಈ ಯೋಜನೆಗಳು ನೆರವು ನೀಡುತ್ತವೆ.

WhatsApp Group Join Now
Telegram Group Join Now       

ಇದನ್ನೂ ಓದಿ: ಬೆಳ್ಳಂದೂರಿನಲ್ಲಿ ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ: ಗಂಟೆಗಟ್ಟಲೆ ಕಾದು ಸುಸ್ತಾದ ಗ್ರಾಹಕರು

ಅರ್ಹ ಫಲಾನುಭವಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ನವೆಂಬರ್ 30, 2026. ಹಿಂದಿನ ವರ್ಷಗಳಲ್ಲಿ (2023-24, 2024-25 ಮತ್ತು 2025-26) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದವರು ಮತ್ತೆ ಅರ್ಜಿ ಹಾಕುವ ಅಗತ್ಯವಿಲ್ಲ.  

ಇದನ್ನೂ ಓದಿ: PM Kisan 24th Installment Date: ಪಿಎಂ ಕಿಸಾನ್ 24ನೇ ಕಂತಿನ ಹಣ ಯಾವಾಗ ಬರುತ್ತೆ? ರೈತರು ಈ ಕೆಲಸ ಮಾಡುವುದು ಕಡ್ಡಾಯ

SC Schemes 2026-27
SC Schemes 2026-27

 

ಈ ಯೋಜನೆಗಳ ಮುಖ್ಯ ಉದ್ದೇಶ.?

ಈ ಯೋಜನೆಗಳ ಮೂಲಕ ಪರಿಶಿಷ್ಟ ಜಾತಿ ಸಮುದಾಯದ ಅರ್ಹರಿಗೆ ಸಹಾಯಧನ, ಕಡಿಮೆ ಬಡ್ಡಿದರದ ಸಾಲ ಮತ್ತು ಕೃಷಿ ಹಾಗೂ ಉದ್ಯಮ ಆರಂಭಿಸಲು ಆರ್ಥಿಕ ಬೆಂಬಲ ಒದಗಿಸಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಭೂರಹಿತರು, ಸಣ್ಣ ರೈತರು, ಮಹಿಳೆಯರು ಮತ್ತು ಯುವಕರು ಈ ಅವಕಾಶವನ್ನು ಬಳಸಿಕೊಂಡು ಆತ್ಮನಿರ್ಭರರಾಗಬಹುದು.  

ಇದನ್ನೂ ಓದಿ: Udyogini Loan Scheme 2026: ಉದ್ಯೋಗಿನಿ ಯೋಜನೆ 2026 – ಮಹಿಳೆಯರಿಗೆ ₹3 ಲಕ್ಷ ಸಾಲ, ₹1.50 ಲಕ್ಷದವರೆಗೆ ಸಹಾಯಧನ!

WhatsApp Group Join Now
Telegram Group Join Now       

 

1. ಭೂ ಒಡೆತನ ಯೋಜನೆ 2026-27

ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಕೃಷಿ ಜಮೀನು ಖರೀದಿಸಿ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶ. ನಿಗದಿತ ಘಟಕ ವೆಚ್ಚದ (of fixed unit cost) ಆಧಾರದ ಮೇಲೆ ಸಹಾಯಧನ (Subsidy) & ಸಾಲದ ರೂಪದಲ್ಲಿ ನೆರವು ಸಿಗುತ್ತದೆ.

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ (Bangalore City), ಬೆಂಗಳೂರು ದಕ್ಷಿಣ (Bangalore South) ಮತ್ತು ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಗಳಲ್ಲಿ ಘಟಕ ವೆಚ್ಚ ₹25 ಲಕ್ಷದವರೆಗೆ. ಉಳಿದ ಜಿಲ್ಲೆಗಳಲ್ಲಿ ₹20 ಲಕ್ಷ. ಇದರಲ್ಲಿ 50% ಸಹಾಯಧನ ಮತ್ತು 50% ಸಾಲ. ಸಾಲಕ್ಕೆ ವಾರ್ಷಿಕ 4% ಬಡ್ಡಿದರ ಅನ್ವಯಿಸುತ್ತದೆ. ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಆದ್ಯತೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ಮೊದಲು ಜಮೀನು ಖರೀದಿ ಸಂಬಂಧಿತ ಷರತ್ತುಗಳು ಮತ್ತು ಅಗತ್ಯ ದಾಖಲೆಗಳನ್ನು ನಿಗಮದ ಕಚೇರಿಯಲ್ಲಿ ಖಚಿತಪಡಿಸಿಕೊಳ್ಳುವುದು ಅಗತ್ಯ.  

ಇದನ್ನೂ ಓದಿ: ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ 2026: ಸಣ್ಣ ರೈತರಿಗೆ ಟ್ರಾಕ್ಟರ್ ಬಾಡಿಗೆ ಸೌಲಭ್ಯ, ಅರ್ಜಿ ಸಲ್ಲಿಸುವುದು ಹೇಗೆ? | Mukhyamantri Negila Yogi Yojana 2026

 

2. ಗಂಗಾ ಕಲ್ಯಾಣ ಯೋಜನೆ 2026-27

ಸಣ್ಣ ಮತ್ತು ಅತಿಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಯಲ್ಲಿದೆ. ಅರ್ಹರ ಜಮೀನಿನಲ್ಲಿ ಕೊಳವೆಬಾವಿ ಕೊರೆದು, ಪಂಪ್‌ಸೆಟ್ ಅಳವಡಿಸಿ ಮತ್ತು ವಿದ್ಯುದ್ದೀಕರಣ ಮಾಡಿ ನೀರಾವರಿ ಒದಗಿಸಲಾಗುತ್ತದೆ.

1.20 – 5 ಎಕರೆ ವರೆಗೆ ಜಮೀನು ಹೊಂದಿರುವ ಫಲಾನುಭವಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಘಟಕ ವೆಚ್ಚ ₹4.75 ಲಕ್ಷ. ಉಳಿದ ಜಿಲ್ಲೆಗಳಲ್ಲಿ ₹3.75 ಲಕ್ಷ. ಇದರಲ್ಲಿ ₹50,000 ಸಾಲದ ಮೊತ್ತ ಸೇರಿದೆ. ಮಳೆಯನ್ನೇ ಅವಲಂಬಿಸಿರುವ ರೈತರಿಗೆ ಈ ಯೋಜನೆ ಕೃಷಿ ಉತ್ಪಾದಕತೆ ಹೆಚ್ಚಿಸಲು ಸಹಾಯ ಮಾಡುತ್ತದೆ.  

ಇದನ್ನೂ ಓದಿ: PM Surya Ghar Yojana: ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ಪಡೆಯುವುದು ಹೇಗೆ? ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

 

3. ಉದ್ಯಮಶೀಲತಾ ಅಭಿವೃದ್ಧಿ ಯೋಜನೆ (ಬ್ಯಾಂಕ್ ಸಹಯೋಗ)

ಸ್ವಂತ ಉದ್ಯಮ ಅಥವಾ ವ್ಯಾಪಾರ ಆರಂಭಿಸಲು ಬಯಸುವವರಿಗೆ ಬ್ಯಾಂಕ್ ಸಹಯೋಗದೊಂದಿಗೆ ಆರ್ಥಿಕ ನೆರವು ನೀಡಲಾಗುತ್ತದೆ.

ಸ್ವಾವಲಂಬಿ ಸಾರಥಿ ಯೋಜನೆ: ಸರಕು ವಾಹನ ಅಥವಾ ಹಳದಿ ಬೋರ್ಡ್ ಟ್ಯಾಕ್ಸಿ ಖರೀದಿಗೆ ಘಟಕ ವೆಚ್ಚದ 75% ಅಥವಾ ಗರಿಷ್ಠ ₹4 ಲಕ್ಷ ಸಹಾಯಧನ.

ಫಾಸ್ಟ್ ಫುಡ್ ಟ್ರಕ್, ಟ್ರೈಲರ್ ಮತ್ತು ಮೊಬೈಲ್ ಕಿಚನ್: ಆಹಾರ ಮಾರಾಟದ ವಾಹನ ಅಥವಾ ಮೊಬೈಲ್ ಕಿಚನ್‌ಗೆ 75% ಅಥವಾ ಗರಿಷ್ಠ ₹4 ಲಕ್ಷ ಸಹಾಯಧನ. ಸಫಾಯಿ ಕರ್ಮಚಾರಿ ನಿಗಮದ ಫಲಾನುಭವಿಗಳಿಗೆ ಈ ಘಟಕ ಅನ್ವಯಿಸುವುದಿಲ್ಲ.

ಹೈನುಗಾರಿಕೆ ಯೋಜನೆ: ಎರಡು ಹಸು ಅಥವಾ ಎಮ್ಮೆಗಳ ಘಟಕಕ್ಕೆ 50% ಅಥವಾ ಗರಿಷ್ಠ ₹1.25 ಲಕ್ಷ ಸಹಾಯಧನ. ಸಫಾಯಿ ಕರ್ಮಚಾರಿ ನಿಗಮದವರಿಗೆ ಅನ್ವಯಿಸುವುದಿಲ್ಲ.

ಇನ್ನಿತರ ಸ್ವಯಂ ಉದ್ಯೋಗ ಯೋಜನೆಗಳು: ಸೇವಾ ಕ್ಷೇತ್ರ, ಸಣ್ಣ ಕೈಗಾರಿಕೆ, ವ್ಯಾಪಾರ ಮಾಡಲು ಸರಕಾರದಿಂದ 70% OR ಗರಿಷ್ಠ ₹2 ಲಕ್ಷ ಸಹಾಯಧನ.  

4. ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆ

ಮಹಿಳಾ ಸ್ವಸಹಾಯ ಸಂಘಗಳ ಆರ್ಥಿಕ ಸಬಲೀಕರಣಕ್ಕಾಗಿ ಈ ಯೋಜನೆ. ಕನಿಷ್ಠ 10 ಸದಸ್ಯರಿರುವ ಸಂಘಕ್ಕೆ ₹5 ಲಕ್ಷ ಘಟಕ ವೆಚ್ಚ. ಇದರಲ್ಲಿ ₹2.50 ಲಕ್ಷ ಸಹಾಯಧನ ಮತ್ತು ₹2.50 ಲಕ್ಷ ಸಾಲ. ಸಾಲಕ್ಕೆ ವಾರ್ಷಿಕ 4% ಬಡ್ಡಿ. ಇದರಿಂದ ಮಹಿಳೆಯರು ತಮ್ಮ ಮನೆಯಲ್ಲಿ ಅಥವಾ ತಮ್ಮ ಊರಿನಲ್ಲಿ ಸ್ವಂತ ಉದ್ಯೋಗ ಅಥವಾ ಸಣ್ಣ ವ್ಯಾಪಾರಗಳನ್ನು ನಡಿಸಿ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು  

ಇದನ್ನೂ ಓದಿ: PM Kisan Mandhan Scheme – ಪಿಎಂ ಕಿಸಾನ್ ಮಾನಧನ್ ಯೋಜನೆ – ರೈತರಿಗೆ 60ರ ನಂತರ ತಿಂಗಳಿಗೆ 3,000 ರೂಪಾಯಿ ಪಿಂಚಣಿ

5. ಸ್ವಯಂ ಉದ್ಯೋಗ ನೇರಸಾಲ ಯೋಜನೆ

ಕಿರು ಆರ್ಥಿಕ ಚಟುವಟಿಕೆಗಳಿಗೆ ₹1 ಲಕ್ಷ ಘಟಕ ವೆಚ್ಚ. ₹50,000 ಸಹಾಯಧನ ಮತ್ತು ₹50,000 ನೇರಸಾಲ. ಸಾಲಕ್ಕೆ 4% ಬಡ್ಡಿ. ಸಣ್ಣ ಅಂಗಡಿ, ವ್ಯಾಪಾರ ಅಥವಾ ಸೇವಾ ಚಟುವಟಿಕೆ ಆರಂಭಿಸಬಹುದು.

6. ಕುರಿ ಸಾಕಾಣಿಕೆ ಯೋಜನೆ

ಕುರಿ ಸಾಕಾಣಿಕೆಗೆ ₹1 ಲಕ್ಷ ಘಟಕ ವೆಚ್ಚ. ₹50,000 ಸಹಾಯಧನ ಮತ್ತು ₹50,000 ನೇರಸಾಲ. 4% ಬಡ್ಡಿ. ಸಫಾಯಿ ಕರ್ಮಚಾರಿ ನಿಗಮವನ್ನು ಹೊರತುಪಡಿಸಿ ಅನ್ವಯಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಆದಾಯದ ಮೂಲವನ್ನಾಗಿ ರೂಪಿಸಿಕೊಳ್ಳಲು ಸಹಾಯಕ.

ಅರ್ಜಿ ಸಲ್ಲಿಸುವ ವಿಧಾನ

ಸೇವಾಸಿಂಧು ಪೋರ್ಟಲ್‌ಗೆ ಭೇಟಿ ನೀಡಿ. ಸಂಬಂಧಪಟ್ಟ ನಿಗಮ ಮತ್ತು ಯೋಜನೆಯ ಹೆಸರನ್ನು ಹುಡುಕಿ. ಅರ್ಹತಾ ನಿಯಮಗಳನ್ನು ಓದಿ. ವೈಯಕ್ತಿಕ ಮಾಹಿತಿ, ಜಾತಿ, ಆದಾಯ ವಿವರಗಳನ್ನು ನಮೂದಿಸಿ. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಅರ್ಜಿ ಸಂಖ್ಯೆ ಅಥವಾ ಸ್ವೀಕೃತಿ ಪ್ರತಿಯನ್ನು ಉಳಿಸಿಕೊಳ್ಳಿ. ನೀವು ನಿಮ್ಮ ಅರ್ಜಿಗಳನ್ನೂ ಸೇವಾಸಿಂಧು ಮೂಲಕವೇ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಲಿಂಕ್: https://sevasindhu.karnataka.gov.in

Apply Now 

 

ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ವಿವರ.?

  • ಜಾತಿ ಪ್ರಮಾಣಪತ್ರ & ಆದಾಯ ಪ್ರಮಾಣಪತ್ರ
  • ಆಧಾರ್ ಕಾರ್ಡ್ (Aadhar card)
  • ನಿವಾಸ ಪುರಾವೆ ಪತ್ರ (Proof of residence) 
  • ಬ್ಯಾಂಕ್ ಖಾತೆ ವಿವರಗಳು (Bank account details),
  • ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ (passport size photograph),
  • ಮೊಬೈಲ್ ಸಂಖ್ಯೆ (Mobile number).
  • ಜಮೀನು ಸಂಬಂಧಿತ ಪಹಣಿ (ಅನ್ವಯಿಸಿದರೆ),
  • ಸ್ವಸಹಾಯ ಸಂಘದ ನೋಂದಣಿ ವಿವರಗಳು,
  • ಯೋಜನಾ ವರದಿ (ಅನ್ವಯಿಸಿದರೆ).

ಪ್ರತಿ ಯೋಜನೆಗೆ ಅಧಿಕೃತ ಅರ್ಜಿ ನಮೂನೆಯಲ್ಲಿ ಕೇಳಿರುವ ದಾಖಲೆಗಳನ್ನೇ ಸಲ್ಲಿಸಬೇಕು.  

ಪ್ರಮುಖ ಸೂಚನೆಗಳು

ಹಿಂದಿನ ಮೂರು ವರ್ಷಗಳಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಿದವರು ಮತ್ತೆ ಹಾಕಬೇಕಾಗಿಲ್ಲ. ನೆರವು ಮಂಜೂರಾಗುವುದು ಅರ್ಹತೆ, ಪರಿಶೀಲನೆ ಮತ್ತು ನಿಗಮದ ಅನುಮೋದನೆಗೆ ಒಳಪಟ್ಟಿರುತ್ತದೆ. ಗರಿಷ್ಠ ಸಹಾಯಧನ ಪ್ರತಿಯೊಬ್ಬರಿಗೂ ಖಚಿತವಾಗಿ ಸಿಗುವುದಿಲ್ಲ. ಸಾಲದ ಮರುಪಾವತಿ ನಿಯಮಗಳನ್ನು ತಿಳಿದುಕೊಳ್ಳಿ. ಅರ್ಜಿ ಸ್ಥಿತಿ ಪರಿಶೀಲಿಸಲು ಅಧಿಕೃತ ಪೋರ್ಟಲ್ ಅಥವಾ ಜಿಲ್ಲಾ ವ್ಯವಸ್ಥಾಪಕರ ಕಚೇರಿಯನ್ನು ಸಂಪರ್ಕಿಸಿ.

ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ಕಲ್ಯಾಣಮಿತ್ರ SC/ST ಸಹಾಯವಾಣಿ 9482-300-400 ಗೆ ಕರೆ ಮಾಡಬಹುದು.

ಈ ಅವಕಾಶಗಳು ಕೃಷಿ, ಹೈನುಗಾರಿಕೆ, ವಾಹನ ಆಧಾರಿತ ಉದ್ಯಮ ಮತ್ತು ಸಣ್ಣ ವ್ಯಾಪಾರ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತವೆ. ಕೊನೆಯ ದಿನಾಂಕಕ್ಕೆ ಕಾಯದೆ ಇಂದೇ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿ.

Leave a Comment