ಗೃಹಲಕ್ಷ್ಮಿ 32ನೇ ಕಂತು ಬ್ಯಾಂಕ್ ಖಾತೆಗೆ ಹಣ ಜಮೆ ಆರಂಭ: 33ನೇ ಕಂತು ಸಹ ಶೀಘ್ರದಲ್ಲೇ ಬಿಡುಗಡೆ ಡಿ ಕೆ ಶಿವಕುಮಾರ್

ಗೃಹಲಕ್ಷ್ಮಿ 32ನೇ ಕಂತು ₹2000 ಹಣ ಬ್ಯಾಂಕ್ ಖಾತೆಗೆ ಜಮೆ ಆರಂಭ: 33ನೇ ಕಂತು ಸಹ ಶೀಘ್ರದಲ್ಲೇ | ಡಿ ಕೆ ಶಿವಕುಮಾರ್

ಕರ್ನಾಟಕ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಮಹಿಳಾ ಫಲಾನುಭವಿಗಳಿಗೆ 32ನೇ ಕಂತಿನ ಹಣ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತಿದೆ.

WhatsApp Group Join Now
Telegram Group Join Now       

ಪ್ರತಿ ತಿಂಗಳು ₹2,000 ನೇರ ಹಣ ವರ್ಗಾವಣೆ ಮೂಲಕ ನೀಡಲಾಗುತ್ತಿರುವ ಈ ಯೋಜನೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಮುಖ್ಯ ಪಾತ್ರ ವಹಿಸುತ್ತಿದೆ.

ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಜೂನ್ 2026ರ ಮಾಹೆಯ ಹಣ ಬಿಡುಗಡೆಯಾಗಿದ್ದು, ಎರಡು-ಮೂರು ದಿನಗಳಲ್ಲಿ ಜಮಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೃಹಲಕ್ಷ್ಮಿ
ಗೃಹಲಕ್ಷ್ಮಿ

 

ಕೊಪ್ಪಳ ಜಿಲ್ಲೆಯಲ್ಲಿ ಎಷ್ಟು ಹಣ ಬಿಡುಗಡೆ?

ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಅವರು ನೀಡಿದ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 3,13,183 ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ.

ಇವರಿಗೆ ಜೂನ್ 2026ರ ಮಾಹೆಗೆ ಒಟ್ಟು ₹62,63,66,000 ಬಿಡುಗಡೆಯಾಗಿದೆ. ಅರ್ಹ ಎಲ್ಲಾ ಫಲಾನುಭವಿಗಳ ಖಾತೆಗೆ ತಲಾ ₹2,000 ಜಮೆಯಾಗುತ್ತಿದೆ. 33ನೇ ಕಂತಿನ ಹಣವೂ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ತುರ್ತು ಹಣ ಬೇಕಾ? Canara Bank Personal Loan ನಿಮ್ಮಿಗೆ ಬೆಸ್ಟ್ ಆಯ್ಕೆ – ಕಡಿಮೆ ಬಡ್ಡಿಯಲ್ಲಿ ₹10 ಲಕ್ಷ ಸಾಲ

WhatsApp Group Join Now
Telegram Group Join Now       

ದಾಖಲೆಗಳ ಪರಿಶೀಲನೆಯಿಂದ ಯಾವುದೇ ಅರ್ಹ ಫಲಾನುಭವಿಗಳಿಗೆ ತೊಂದರೆಯಾಗುವುದಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಜೊತೆಗೆ, ಮರಣ ಹೊಂದಿದ್ದಾಗಿ ಗುರುತಿಸಲಾದ 7,086 ಫಲಾನುಭವಿಗಳ ಖಾತೆಗಳಿಂದ ₹86,67,608 ಮೊತ್ತವನ್ನು ಮರಳಿ ಪಡೆದು ಸರ್ಕಾರಕ್ಕೆ ಮರುಪಾವತಿ ಮಾಡಲಾಗಿದೆ. ಇದು ಯೋಜನೆಯ ಪಾರದರ್ಶಕತೆ ಹೆಚ್ಚಿಸುವ ಕ್ರಮವಾಗಿದೆ.

 

32ನೇ ಕಂತು ಯಾರಿಗೆ ಸಿಗುತ್ತದೆ?

ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡು ಯೋಜನೆಯ ಮಾನದಂಡಗಳನ್ನು ಪೂರೈಸಿರುವ ಅರ್ಹ ಮಹಿಳಾ ಫಲಾನುಭವಿಗಳಿಗೆ ಈ ಕಂತು ಜಮೆಯಾಗಲಿದೆ.

ಬ್ಯಾಂಕ್ ಖಾತೆ ಸಕ್ರಿಯವಾಗಿರಬೇಕು, ಆಧಾರ್ ಜೋಡಣೆ ಸರಿಯಾಗಿರಬೇಕು ಮತ್ತು ಅಗತ್ಯ ದಾಖಲೆಗಳು ನವೀಕೃತವಾಗಿರಬೇಕು.

ಕೆಲವು ಖಾತೆಗಳಿಗೆ ಈಗಾಗಲೇ ಹಣ ಜಮೆಯಾಗಿದ್ದರೆ, ಇನ್ನುಳಿದವರಿಗೆ ಹಂತಹಂತವಾಗಿ ವರ್ಗಾವಣೆಯಾಗುತ್ತದೆ. ಆದ್ದರಿಂದ ಹಣ ತಕ್ಷಣ ಬಾರದಿದ್ದರೆ ಆತಂಕಪಡುವ ಅಗತ್ಯವಿಲ್ಲ.

ಯೋಜನೆಯಡಿ ಮನೆಯ ಮಹಿಳಾ ಯಜಮಾನಿಯರಿಗೆ ಪ್ರತಿ ತಿಂಗಳು ₹2,000 ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ಇದು ಕುಟುಂಬದ ದೈನಂದಿನ ಅಗತ್ಯಗಳಿಗೆ, ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಹಾಯಕವಾಗಿದೆ. ರಾಜ್ಯಾದ್ಯಂತ ಲಕ್ಷಾಂತರ ಮಹಿಳೆಯರು ಈ ಸೌಲಭ್ಯ ಪಡೆಯುತ್ತಿದ್ದಾರೆ.

ವೃದ್ಧಾಪ್ಯ ವೇತನ ಪಡೆಯುವವರಿಗೆ ಶಾಕಿಂಗ್ ಸುದ್ದಿ: ₹1200 ಪಿಂಚಣಿ ಪಡೆಯಲು ಈ ಪ್ರಮಾಣ ಪತ್ರ ಕಡ್ಡಾಯ

 

2 ಕಂತಿನ ಹಣ ಒಟ್ಟಿಗೆ ₹4,000 ಸಾವಿರ ಜಮಾ ಆಗುತ್ತೆ.?

ಹೌದು ಗೆಳೆಯರೇ ಪ್ರಸ್ತುತ ಇನ್ನು ಎರಡು ದಿನಗಳ ಒಳಗಡೆ 32ನೇ ಕಂತಿನ 2000 ಹಣ ಜಮಾ ಆಗುತ್ತೆ ಮತ್ತು 33ನೇ ಕಂತಿನ ಹಣ ಇನ್ನು ಹದಿನೈದು ದಿನಗಳ ಒಳಗಡೆ ಮಹಿಳೆಯರ ಖಾತೆಗೆ ಜಮಾ ಆಗುತ್ತೆ ಎಂದು ಕೆಲ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಅಂದರೆ ಈ ತಿಂಗಳಲ್ಲಿ ಒಟ್ಟು ಮಹಿಳೆಯರಿಗೆ 2 ಕಂತಿನ ಹಣ ರೂ.4,000 ಜಮಾ ಆಗುತ್ತೆ ಇದು ಮಹಿಳೆಯರಿಗೆ ಸಿಹಿ ಸುದ್ದಿಯಾಗಿದೆ

 

ಹಣ ಜಮೆಯಾಗಿದೆಯೇ ಎಂದು ಹೇಗೆ ಪರಿಶೀಲಿಸುವುದು.?

ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್, ಮೊಬೈಲ್‌ಗೆ ಬರುವ SMS ಅಥವಾ ಬ್ಯಾಂಕ್ ಅಪ್ಲಿಕೇಶನ್ ಮೂಲಕ ಹಣ ಜಮೆಯಾಗಿದೆಯೇ ಎಂದು ಪರಿಶೀಲಿಸಬಹುದು.

ಡಿಬಿಟಿ ಸ್ಥಿತಿ ಪರಿಶೀಲಿಸಲು ಸಂಬಂಧಿತ ಪೋರ್ಟಲ್ ಅಥವಾ ಅಪ್ಲಿಕೇಶನ್ ಬಳಸಬಹುದು. ಹಣ ಜಮೆಯಾಗದಿದ್ದರೆ ಆಧಾರ್-ಬ್ಯಾಂಕ್ ಲಿಂಕ್, ಖಾತೆ ಸಕ್ರಿಯ ಸ್ಥಿತಿ ಮತ್ತು ದಾಖಲೆಗಳನ್ನು ಪರಿಶೀಲಿಸಿಕೊಳ್ಳಬೇಕು.

ಅಥವಾ ನೀವು ನಿಮ್ಮ ಮೊಬೈಲ್ ನಲ್ಲಿ ಕರ್ನಾಟಕ DBT ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡು ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಎಂಟರ್ ಮಾಡಿ ಈ ಒಂದು ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ,

ಕರ್ನಾಟಕ DBT ಅಪ್ಲಿಕೇಶನ್ link: ಇಲ್ಲಿ ಕ್ಲಿಕ್ ಮಾಡಿ

ನಂತರ ನೀವು ಈ ಅಪ್ಲಿಕೇಶನ್ ಓಪನ್ ಮಾಡಿ ಅಲ್ಲಿ ಪೇಮೆಂಟ್ ಸ್ಟೇಟಸ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ,

ನಂತರ ಅಲ್ಲಿ ನಿಮಗೆ ಗೃಹಲಕ್ಷ್ಮಿ ಸ್ಕೀಮ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ, ಇಲ್ಲಿವರೆಗೂ ನಿಮಗೆ ಈ ಯೋಜನೆಯ ಮೂಲಕ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ಸಂಪೂರ್ಣ ಮಾಹಿತಿ ಸಿಗುತ್ತದೆ

 

ದಾಖಲೆ ಸಮಸ್ಯೆ ಇದ್ದರೆ ಏನು ಮಾಡಬೇಕು.?

ತಾಂತ್ರಿಕ ಅಥವಾ ದಾಖಲೆ ಸಂಬಂಧಿತ ತೊಂದರೆ ಎದುರಾದರೆ ಸಮೀಪದ ಸೇವಾ ಕೇಂದ್ರ, ಗ್ರಾಮ ಒನ್ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯನ್ನು ಸಂಪರ್ಕಿಸಿ.

ಬ್ಯಾಂಕ್ ಖಾತೆಗೆ ಆಧಾರ್ ಸರಿಯಾಗಿ ಜೋಡಣೆಯಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಅನರ್ಹ ಅಥವಾ ಮರಣಹೊಂದಿದ ಫಲಾನುಭವಿಗಳ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಹರಿಗೆ ಮಾತ್ರ ಹಣ ತಲುಪುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ನಿರಂತರ ಆರ್ಥಿಕ ಬೆಂಬಲ ನೀಡುತ್ತಿದೆ. 32ನೇ ಕಂತು ಜಮೆಯಾಗುತ್ತಿರುವುದರಿಂದ ಫಲಾನುಭವಿಗಳು ಸ್ವಲ್ಪ ಸಮಯ ಕಾಯಬಹುದು.

33ನೇ ಕಂತು ಸಹ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಯಾವುದೇ ಸಮಸ್ಯೆ ಇದ್ದರೆ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ಪಡೆಯಿರಿ.

ಸ್ಥಿತಿ ಪರಿಶೀಲಿಸಲು ಅಧಿಕೃತ ಸೇವೆಗಳನ್ನು ಬಳಸಿ: [https://sevasindhu.karnataka.gov.in]

Leave a Comment