Gold Rate Drop: ಸತತ ನಾಲ್ಕನೇ ದಿನವೂ ಕೂಡ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಎಷ್ಟು ಗೊತ್ತಾ..?
ಸ್ನೇಹಿತರಿಗೆ ಇತ್ತೀಚಿಗೆ ಕೇಂದ್ರ ಸರ್ಕಾರ ಹೊಸ ಬಜೆಟ್ ಮಂಡನೆ ಮಾಡಿದೆ ಈ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಸತತವಾಗಿ ನಾಲ್ಕು ದಿನದಿಂದ ಭಾರಿ ಇಳಿಕೆ ಕಾಣುತ್ತಿದೆ. ಹೌದು ಗೆಳೆಯರೇ ಇಂದು ಅಂದರೆ 02 ಫೆಬ್ರವರಿ 2026 ರಂದು ಒಂದೇ ದಿನವೇ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 90,000 ಬೆಲೆ ಕಡಿಮೆಯಾಗಿದೆ ಹಾಗಾಗಿ ಇದು ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರಿಗೆ ಸಿಹಿ ಸುದ್ದಿ ಎಂದು ಹೇಳಬಹುದು.
ಹೌದು ಗೆಳೆಯರ ತುಂಬಾ ಜನರು ಚಿನ್ನ ಖರೀದಿ ಮಾಡಬೇಕು ಎಂಬ ಆಸೆ ಇದ್ದರೂ ಕೂಡ ಚಿನ್ನದ ಬೆಲೆ ಏರಿಕೆಯಾದ ಕಾರಣ ಚಿನ್ನ ಖರೀದಿ ಮಾಡಲು ಹಿಂದೆ ಮುಂದೆ ನೋಡುತ್ತಿದ್ದರು. ಆದರೆ ಕಳೆದ ನಾಲ್ಕು ದಿನದಿಂದ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಾಣುತ್ತಿದೆ ಹಾಗಾಗಿ ಇದು ಚಿನ್ನ ಖರೀದಿ ಮಾಡುವವರು ಮುಖದಲ್ಲಿ ಹೊಸ ಮಂದಹಾಸ ಮೂಡಿಸಿದೆ ಎಂದು ಹೇಳಬಹುದು..
ಹೌದು ಗೆಳೆಯರೇ ನಾವು ಈ ಒಂದು ಲೇಖನಯ ಮೂಲಕ ಇಂದಿನ ಮಾರುಕಟ್ಟೆಯ ವಿವಿಧ ಗ್ರಾಂ ಚಿನ್ನದ ಬೆಲೆ ಎಷ್ಟಿದೆ.? ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟು ಕಡಿಮೆಯಾಗಿದೆ.? ಇಂದಿನ ಮಾರುಕಟ್ಟೆಯ ಬೆಳ್ಳಿ ದರ ಎಷ್ಟಿದೆ.? ಇದರ ಜೊತೆಗೆ ಈಗ ಚಿನ್ನ ಖರೀದಿ ಮಾಡಲು ಉತ್ತಮ ಸಮಯವೇ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಲೇಖನವನ್ನು ಆದಷ್ಟು ಕೊನೆವರೆಗೂ ಓದಿ..

ಇಂದಿನ ಚಿನ್ನದ ಬೆಲೆ ಎಷ್ಟು ಗೊತ್ತಾ..?
ಸ್ನೇಹಿತರೆ ಇಂದು 02 ಫೆಬ್ರುವರಿ 2026 ಪ್ರಕಾರ ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು ₹830 ರೂಪಾಯಿ ಬೆಲೆ ಕಡಿಮೆಯಾಗಿದೆ ಹಾಗೂ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹8,300 ರೂಪಾಯಿ ಬೆಲೆ ಕಡಿಮೆಯಾಗಿದೆ ಅದೇ ರೀತಿ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹83,000 ರೂಪಾಯಿವರೆಗೆ ಬೆಲೆ ಕಡಿಮೆಯಾಗಿದೆ.
ಅದೇ ರೀತಿ ಇಂದಿನ ಮಾರುಕಟ್ಟೆಯ ಪ್ರಕಾರ 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ₹905 ರೂಪಾಯಿ ಬೆಲೆ ಕಡಿಮೆಯಾಗಿದೆ ಇದು ಪರಿಶುದ್ಧ ಬಂಗಾರವಾಗಿದೆ. ಹಾಗೂ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹9,050 ರೂಪಾಯಿ ಬೆಲೆ ಕಡಿಮೆಯಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬರಿ ₹90,500 ರೂಪಾಯಿ ವರೆಗೆ ಬೆಲೆ ಇಳಿಕೆಯಾಗಿದೆ..
ಹೌದು ಗೆಳೆಯರೇ ಇಂದು ಒಂದೇ ದಿನ 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹90,500 ಬೆಲೆ ಕಡಿಮೆಯಾಗಿದೆ. ಹಾಗಾಗಿ ಇದು ಚಿನ್ನ ಖರೀದಿ ಮಾಡುವವರಲ್ಲಿ ಹೊಸ ಆಸಕ್ತಿ ಉಂಟು ಮಾಡಿದೆ ಎಂದು ಹೇಳಬಹುದು ಅದೇ ರೀತಿ ಕಳೆದ ನಾಲ್ಕು ದಿನದಿಂದ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಾಣುತ್ತಿದೆ.
ಕಳೆದ ನಾಲ್ಕು ದಿನಗಳಿಂದ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹27,320 ರೂಪಾಯಿ ಬೆಲೆ ಕಡಿಮೆಯಾಗಿದೆ ಹಾಗೂ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹25,050 ಇವರಿಗೆ ಬೆಲೆ ಕಡಿಮೆಯಾಗಿದೆ ಎಂದು ಹೇಳಬಹುದು ಹಾಗಾಗಿ ಇದು ಚೆನ್ನ ಖರೀದಿ ಮಾಡುವವರಿಗೆ ಉತ್ತಮ ಸಮಯವಾಗಿದೆ ಏಕೆಂದರೆ ಮಾರ್ಕೆಟ್ ತಜ್ಞರು ಪ್ರಕಾರ ಮುಂದಿನ ದಿನಗಳಲ್ಲಿ ಮತ್ತೆ ಚಿನ್ನದ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇಂದಿನ ಮಾರುಕಟ್ಟೆಯ ಚಿನ್ನ ಮತ್ತು ಬೆಳ್ಳಿ ದರದ ವಿವರಗಳು..?
ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆಯ ವಿವರಗಳು:
- 1 ಗ್ರಾಂ ಚಿನ್ನದ ಬೆಲೆ:- ₹13,890 (ರೂ.830 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹1,11,120 (ರೂ. 6,640 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹1,38,900 (ರೂ.8,300 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹13,89,000 (ರೂ.83,000 ಇಳಿಕೆ)
ಇಂದು ಚಿನ್ನದ 24 ಕ್ಯಾರೆಟ್ (Gold) ವಿವಿಧ ಗ್ರಾಂ ಚಿನ್ನದ ಬೆಲೆ ಎಷ್ಟು.?
- 1 ಗ್ರಾಂ ಚಿನ್ನದ ಬೆಲೆ:- ₹15,153 (ರೂ.903 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹1,21,224 (ರೂ. 7,240 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹1,51,530 (ರೂ.9,050 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹15,15,300 (ರೂ.90,500 ಇಳಿಕೆ)
ಇಂದಿನ ಮಾರುಕಟ್ಟೆ ವಿವಿಧ ಗ್ರಾಂ ಬೆಳ್ಳಿ ದರ ಎಷ್ಟು.?
- 1 ಗ್ರಾಂ ಬೆಳ್ಳಿಯ ಬೆಲೆ:- ₹300 (₹50 ಇಳಿಕೆ)
- 8 ಗ್ರಾಂ ಬೆಳ್ಳಿಯ ಬೆಲೆ:- ₹2,400 (₹400 ಇಳಿಕೆ)
- 10 ಗ್ರಾಂ ಬೆಳ್ಳಿಯ ಬೆಲೆ:- ₹3,000 (₹500 ಇಳಿಕೆ)
- 100 ಗ್ರಾಂ ಬೆಳ್ಳಿಯ ಬೆಲೆ:- ₹30,000 (₹5,000 ಇಳಿಕೆ)
- 1000 ಗ್ರಾಂ ಬೆಳ್ಳಿಯ ಬೆಲೆ:- ₹3,00,000 (₹50,000 ಇಳಿಕೆ)
ವಿಶೇಷ ಸೂಚನೆ: ಸ್ನೇಹಿತರೆ ನೀವು ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಬೇಕಾದರೆ ನೀವು ಮೊದಲು ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಅಂಗಡಿ ಮಾರಾಟದ ಅಂಗಡಿಗಳಿಗೆ ಭೇಟಿ ನೀಡಿ ನಿಖರ ಹಾಗೂ ಖಚಿತ ಮಾಹಿತಿ ತಿಳಿದುಕೊಳ್ಳಿ ಏಕೆಂದರೆ ಚಿನ್ನದ ಬೆಲೆ ಪ್ರತಿದಿನ ಏರಿಕೆ ಅಥವಾ ಇಳಿಕೆಯಾಗುತ್ತದೆ ಹಾಗಾಗಿ ನಿಖರ ಮಾಹಿತಿಗಾಗಿ ಚಿನ್ನ ಮತ್ತು ಬೆಳ್ಳಿ ಅಂಗಡಿಗಳಿಗೆ ಭೇಟಿ ನೀಡಿ
ಸ್ನೇಹಿತರಿಗೆ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಬೇಕಾದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು