ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ: B ಖಾತಾ ನಿವೇಶನಗಳಿಗೆ A ಖಾತೆ ಪರಿವರ್ತನೆಗೆ ಸರ್ಕಾರದ ಹಸಿರು ನಿಶಾನೆ | B Khata to A Khata
ಬೆಂಗಳೂರು: ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿರುವ B ಖಾತಾ ನಿವೇಶನಗಳನ್ನು A ಖಾತೆಗೆ ಪರಿವರ್ತಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈಗಾಗಲೇ ಬೆಂಗಳೂರಿನಲ್ಲಿ ಜಾರಿಯಲ್ಲಿರುವ ಪ್ರಕ್ರಿಯೆಯನ್ನು ರಾಜ್ಯದ ಇತರೆ ನಗರ ಪ್ರದೇಶಗಳಿಗೂ ವಿಸ್ತರಿಸಲು ಅನುಮೋದನೆ ನೀಡಲಾಗಿದೆ.
ಇದರಿಂದ ಹಲವು ವರ್ಷಗಳಿಂದ B ಖಾತೆಯಲ್ಲಿರುವ ಲಕ್ಷಾಂತರ ಆಸ್ತಿ ಮಾಲೀಕರಿಗೆ ತಮ್ಮ ಆಸ್ತಿಯನ್ನು ಕ್ರಮಬದ್ಧಗೊಳಿಸಿಕೊಳ್ಳುವ ಅವಕಾಶ ಸಿಕ್ಕಿದೆ.

B ಖಾತೆಯಿಂದ A ಖಾತೆಗೆ ಪರಿವರ್ತನೆ: ಏನು ಬದಲಾವಣೆ.?
ನಗರ ಪ್ರದೇಶಗಳ ಸ್ಥಳೀಯ ಯೋಜನಾ ವ್ಯಾಪ್ತಿಯ ಒಳಗೆ ಅಥವಾ ಹೊರಗೆ ಇರುವ ಅರ್ಹ B ಖಾತಾ ನಿವೇಶನಗಳಿಗೆ A ಖಾತೆ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ. A ಖಾತೆ ಎಂದರೆ ಆಸ್ತಿ ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ ಎಂಬ ಅರ್ಥ.
ಇದರಿಂದ ಬ್ಯಾಂಕ್ ಸಾಲ ಪಡೆಯುವುದು ಸುಲಭ, ಆಸ್ತಿ ಮಾರಾಟದಲ್ಲಿ ಮೌಲ್ಯ ಹೆಚ್ಚು, ಕಟ್ಟಡ ಅನುಮತಿ ಮತ್ತು ಇತರೆ ಸೌಲಭ್ಯಗಳು ಸುಗಮವಾಗುತ್ತವೆ.
ಗೃಹಲಕ್ಷ್ಮೀ ಯೋಜನೆ: 33ನೇ ಕಂತು ಜಮಾ ಪ್ರಕ್ರಿಯೆ ಆರಂಭ – ನಿಮ್ಮ ಖಾತೆಗೆ ಹಣ ಬಂದಿದೆಯೇ? ಹೇಗೆ ಪರಿಶೀಲಿಸುವುದು?
B ಖಾತೆ ಕೇವಲ ತೆರಿಗೆ ವಸೂಲಿಗಾಗಿ ನೀಡಲಾಗುವ ತಾತ್ಕಾಲಿಕ ದಾಖಲೆಯಾಗಿದ್ದು, ಸಂಪೂರ್ಣ ಹಕ್ಕು ಒದಗಿಸುವುದಿಲ್ಲ.
ಆದರೆ ಸರ್ಕಾರ ಕೆಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದೆ. ಯಾವುದೇ ಖಾತೆಯೇ ಇಲ್ಲದ ನಿವೇಶನಗಳಿಗೆ ಹೊಸದಾಗಿ A ಖಾತೆ ನೀಡುವುದಿಲ್ಲ.
ಅನಧಿಕೃತ ನಿವೇಶನಗಳಿಗೆ ನಿಯಂತ್ರಣವಿಲ್ಲದೆ ಖಾತೆ ನೀಡುವುದನ್ನು ತಪ್ಪಿಸುವುದು ಉದ್ದೇಶ. ಇದರಿಂದ ಅನಧಿಕೃತ ಬಡಾವಣೆಗಳು ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ.
A ಖಾತೆ ಪಡೆಯಲು ಏನು ಮಾಡಬೇಕು?
B ಖಾತೆಯಲ್ಲಿರುವ ಆಸ್ತಿಯನ್ನು A ಖಾತೆಗೆ ಪರಿವರ್ತಿಸಲು ಮೊದಲು ಇದುವರೆಗಿನ ಎಲ್ಲಾ ಬಾಕಿ ಆಸ್ತಿ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸಬೇಕು. ಯಾವುದೇ ತೆರಿಗೆ ಬಾಕಿ ಉಳಿಸಿಕೊಂಡಿರಬಾರದು. ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳು ಅಗತ್ಯ:
- ಆಸ್ತಿ ಹಕ್ಕು ಪತ್ರ ಅಥವಾ ಮಾರಾಟ ಪತ್ರ
- ಆಸ್ತಿ ತೆರಿಗೆ ಪಾವತಿ ರಸೀದಿಗಳು
- ಅನುಮೋದಿತ ಕಟ್ಟಡ ನಿರ್ಮಾಣ ನಕ್ಷೆ (ಇದ್ದಲ್ಲಿ)
- ಇತರೆ ಸಂಬಂಧಿತ ಆಸ್ತಿ ದಾಖಲೆಗಳು
ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆ ಅಥವಾ ಪುರಸಭೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ, ಆಸ್ತಿ ನಿಯಮಾನುಸಾರ ಕ್ರಮಬದ್ಧವಾಗಿದೆಯೇ ಎಂದು ದೃಢಪಡಿಸಿದ ಬಳಿಕವೇ A ಖಾತೆ ನೀಡಲಾಗುತ್ತದೆ.
ಬೆಂಗಳೂರಿನಲ್ಲಿ ಈಗಾಗಲೇ ಆನ್ಲೈನ್ ಪ್ರಕ್ರಿಯೆ ಜಾರಿಯಲ್ಲಿದ್ದು, ರಾಜ್ಯಾದ್ಯಂತ ಇದೇ ಮಾದರಿಯಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಪ್ರದೇಶದ ಪುರಸಭೆ ಅಥವಾ ನಗರಾಭಿವೃದ್ಧಿ ಪ್ರಾಧಿಕಾರವನ್ನು ಸಂಪರ್ಕಿಸಿ.
ಆಸ್ತಿ ಮಾಲೀಕರಿಗೆ ದೀರ್ಘಕಾಲದ ಪರಿಹಾರ.?
B ಖಾತೆಯಿಂದ A ಖಾತೆಗೆ ಪರಿವರ್ತನೆಯಿಂದ ಆಸ್ತಿ ಮಾಲೀಕರಿಗೆ ಕಾನೂನು ರಕ್ಷಣೆ ದೊರೆಯುತ್ತದೆ. ಇದು ಬ್ಯಾಂಕ್ ಸಾಲ, ಮನೆ ನಿರ್ಮಾಣ ಅನುಮತಿ ಮತ್ತು ಮಾರಾಟದಲ್ಲಿ ಸಹಾಯಕವಾಗುತ್ತದೆ.
ಅದೇ ವೇಳೆ ಅನಧಿಕೃತ ನಿವೇಶನಗಳಿಗೆ ಹೊಸ ಖಾತೆ ನೀಡದಿರುವುದರಿಂದ ನಗರ ಯೋಜನೆಗಳಿಗೆ ಶಿಸ್ತು ಬರುವ ನಿರೀಕ್ಷೆ ಇದೆ.
ಆಸ್ತಿ ಮಾಲೀಕರು ತಮ್ಮ ದಾಖಲೆಗಳನ್ನು ಸಿದ್ಧಪಡಿಸಿ, ತೆರಿಗೆ ಬಾಕಿ ತೀರಿಸಿ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಬೇಕು.
ಸಚಿವ ಸಂಪುಟದ ಈ ಎರಡೂ ನಿರ್ಧಾರಗಳು ನಗರಾಭಿವೃದ್ಧಿ ಮತ್ತು ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಸಕಾರಾತ್ಮಕ ಬದಲಾವಣೆ ತರಲಿವೆ. B ಖಾತೆ ಹೊಂದಿರುವವರು ಈ ಅವಕಾಶವನ್ನು ಬಳಸಿಕೊಂಡು ತಮ್ಮ ಆಸ್ತಿಯನ್ನು ಕ್ರಮಬದ್ಧಗೊಳಿಸಿಕೊಳ್ಳಬೇಕು.
ವೃದ್ಧಾಪ್ಯ, ವಿಧವಾ, ಅಂಗವಿಕಲ ಪಿಂಚಣಿ ನಿಂತಿದೆಯಾ? ತಕ್ಷಣ ಈ ದಾಖಲೆಗಳನ್ನು ಸಲ್ಲಿಸಿ
ಕಲ್ಯಾಣ ಕರ್ನಾಟಕಕ್ಕೆ 400 ಹೊಸ ಬಸ್ಗಳು.?
ಅದೇ ಸಭೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ (ಕೆಕೆಆರ್ಟಿಸಿ) 400 ಹೊಸ ಬಸ್ಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ.
ಪ್ರತಿ ಬಸ್ಗೆ ಅಂದಾಜು 38 ಲಕ್ಷ ರೂಪಾಯಿಯಂತೆ ಒಟ್ಟು ಸುಮಾರು 152 ಕೋಟಿ ರೂಪಾಯಿ ವೆಚ್ಚವಾಗಲಿದೆ.
ಇದರಲ್ಲಿ 50 ಶೇಕಡಾ ಮೊತ್ತವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ಮತ್ತು ಉಳಿದ 50 ಶೇಕಡಾ ಮೊತ್ತವನ್ನು ರಾಜ್ಯ ಸರ್ಕಾರ ಭರಿಸಲಿದೆ.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಾರ್ವಜನಿಕ ಸಾರಿಗೆಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶಕ್ತಿ ಯೋಜನೆಯ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಹಳೆಯ ಬಸ್ಗಳನ್ನು ಬದಲಾಯಿಸಿ ಹೊಸ ಅನುಸೂಚಿಗಳನ್ನು ಪ್ರಾರಂಭಿಸುವ ಅಗತ್ಯವಿದೆ.
ಹೊಸ ಬಸ್ಗಳ ಸೇರ್ಪಡೆಯಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಸಂಪರ್ಕ ಸುಧಾರಿಸಿ, ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ವಿಶ್ವಾಸಾರ್ಹ ಸೇವೆ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
PhonePe Loan: ಫೋನ್ ಪೇ ಮೂಲಕ 5 ಲಕ್ಷದವರೆಗೆ ವೈಯಕ್ತಿಕ ಸಾಲ – ಸುಲಭ ವಿಧಾನ! ಅರ್ಹತೆ ಮತ್ತು ಸಂಪೂರ್ಣ ಮಾಹಿತಿ