ಮಂಡ್ಯ ಸಂಜೀವಿನಿ ನೇಮಕಾತಿ 2026: ಮಂಡ್ಯದಲ್ಲಿ ಸಂಜೀವಿನಿ ಯೋಜನೆಯಡಿ 21 ಹುದ್ದೆಗಳ ನೇಮಕಾತಿ – ₹30,000 ವರೆಗೆ ವೇತನ, ಅಕ್ಟೋಬರ್ 28 ಕೊನೆಯ ದಿನ
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸೊಸೈಟಿ (KSRLPS) ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಜೀವಿನಿ (NRLM ಕರ್ನಾಟಕ) ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಇದನ್ನೂ ಓದಿ: ಯಾದಗಿರಿ: ಹ್ಯಾಂಡ್ ಪಂಪ್ ಕೆಟ್ಟು 7 ದಿನ ಕಳೆದರೂ ರಿಪೇರಿ ಇಲ್ಲ, ನೀರಿಗಾಗಿ ಗ್ರಾಮಸ್ಥರ ಪರದಾಟ | ಕಾಡಮಗೇರ (ಬಿ)
ಒಟ್ಟು 21 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 28ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಇದು ಉತ್ತಮ ಅವಕಾಶವಾಗಿದೆ.
ಇದನ್ನೂ ಓದಿ: Karnataka Police Jobs 2026: ಪೊಲೀಸ್ ಹುದ್ದೆಗಳ ನೇಮಕಾತಿ, ಅರ್ಹತೆ ಮತ್ತು ಅಧಿಕೃತ ವೆಬ್ಸೈಟ್ ವಿವರ

ನೇಮಕಾತಿ ವಿವರಗಳು ಮತ್ತು ಹುದ್ದೆಗಳು.?
ಮಂಡ್ಯ ಜಿಲ್ಲೆಯ ಮಂಡ್ಯ, ಮಳವಳ್ಳಿ, ಮದ್ದೂರು, ಕೃಷ್ಣರಾಜಪೇಟೆ, ಶ್ರೀರಂಗಪಟ್ಟಣ ಸೇರಿದಂತೆ ವಿವಿಧ ತಾಲ್ಲೂಕುಗಳು ಮತ್ತು ಕ್ಲಸ್ಟರ್ಗಳಲ್ಲಿ ಹುದ್ದೆಗಳು ಲಭ್ಯವಿವೆ. ಪ್ರಮುಖ ಹುದ್ದೆಗಳು:
- ಜಿಲ್ಲಾ ವ್ಯವಸ್ಥಾಪಕ (ಫಾರ್ಮ್ ಲೈವ್ಲಿಹುಡ್)
- ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ
- ಕ್ಲಸ್ಟರ್ ಸೂಪರ್ವೈಸರ್
- ಕ್ಲಸ್ಟರ್ ಸೂಪರ್ವೈಸರ್ (ಸ್ಕಿಲ್)
- ಬ್ಲಾಕ್ ಮ್ಯಾನೇಜರ್ (ಫಾರ್ಮ್ ಲೈವ್ಲಿಹುಡ್)
- ಬ್ಲಾಕ್ ಮ್ಯಾನೇಜರ್ (ನಾನ್-ಫಾರ್ಮ್ ಲೈವ್ಲಿಹುಡ್)
ಈ ಹುದ್ದೆಗಳು ಗ್ರಾಮೀಣ ಪ್ರದೇಶಗಳಲ್ಲಿ ಸ್ವಯಂ ಸಹಾಯ ಗುಂಪುಗಳು, ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಯೋಜನೆಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆಯ್ಕೆಯಾದವರು ಸ್ಥಳೀಯ ಸಮುದಾಯಗಳೊಂದಿಗೆ ನೇರವಾಗಿ ಕೆಲಸ ಮಾಡುವ ಅವಕಾಶ ಪಡೆಯುತ್ತಾರೆ.
ಇದನ್ನೂ ಓದಿ: ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2026: 750 ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನ
ವಿದ್ಯಾರ್ಹತೆ ಮತ್ತು ಅನುಭವ.?
ಹುದ್ದೆವಾರು ವಿದ್ಯಾರ್ಹತೆ ವ್ಯತ್ಯಾಸವಿದೆ. ಕ್ಲಸ್ಟರ್ ಸೂಪರ್ವೈಸರ್ ಮತ್ತು ಕ್ಲಸ್ಟರ್ ಸೂಪರ್ವೈಸರ್ (ಸ್ಕಿಲ್) ಹುದ್ದೆಗಳಿಗೆ ಯಾವುದೇ ವಿಷಯದಲ್ಲಿ ಪದವಿ ಸಾಕು. ಬ್ಲಾಕ್ ಮ್ಯಾನೇಜರ್ (Farm Livelihood) ಹುದ್ದೆಗೆ ಕೃಷಿ OR ಸಂಬಂಧಿತ (Agricultural Science) ಕೃಷಿ ವಿಜ್ಞಾನದಲ್ಲಿ ಪದವಿ OR ಸ್ನಾತಕೋತ್ತರ ಪದವಿ (Master’s degree) ಹಾಗೂ ಅಗತ್ಯ (Field experience) ಕ್ಷೇತ್ರ ಅನುಭವ ಬೇಕು.
ಇದನ್ನೂ ಓದಿ: Forest Watcher Recruitment 2026: 750 ಹುದ್ದೆಗಳಿಗೆ ಅರ್ಜಿ ಆಹ್ವಾನ, SSLC ಪಾಸ್ ಮಾಡಿದವರಿಗೆ ಅವಕಾಶ
ಬ್ಲಾಕ್ ಮ್ಯಾನೇಜರ್ (ನಾನ್-ಫಾರ್ಮ್ ಲೈವ್ಲಿಹುಡ್) ಮತ್ತು ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ ಅಥವಾ ಪೂರ್ಣಾವಧಿ ಎರಡು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಅಗತ್ಯ. ಜಿಲ್ಲಾ ವ್ಯವಸ್ಥಾಪಕ (ಫಾರ್ಮ್ ಲೈವ್ಲಿಹುಡ್) ಹುದ್ದೆಗೆ ಕೃಷಿ, ಪರಿಸರ ವಿಜ್ಞಾನ ಅಥವಾ ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಅನುಭವ ಕಡ್ಡಾಯ.
ವಯೋಮಿತಿ ಸಾಮಾನ್ಯವಾಗಿ 18ರಿಂದ 45 ಅಥವಾ 50 ವರ್ಷಗಳವರೆಗೆ ಇದೆ (ಹುದ್ದೆವಾರು ವ್ಯತ್ಯಾಸವಿದೆ). ನಿಖರ ಅರ್ಹತೆ (Qualification), ಅನುಭವದ (experience) ಅವಧಿ & ಮೀಸಲಾತಿ ವಿವರಗಳನ್ನು ಅಧಿಕೃತ (Official) ಅಧಿಸೂಚನೆಯಲ್ಲಿ (Checking) ಪರಿಶೀಲಿಸುವುದು ಅಗತ್ಯ.
ವೇತನ ವಿವರ.?
ಕ್ಲಸ್ಟರ್ (Cluster Supervisor) ಸೂಪರ್ವೈಸರ್ & ಕ್ಲಸ್ಟರ್ ಸೂಪರ್ವೈಸರ್ (Supervisor) (ಸ್ಕಿಲ್) ಹುದ್ದೆಗಳಿಗೆ (per month) ತಿಂಗಳಿಗೆ ₹18000 ಗೌರವಧನ (Honorarium). ಬ್ಲಾಕ್ ಮ್ಯಾನೇಜರ್ ಹುದ್ದೆಗಳಿಗೆ ₹25,000 ಹಾಗೂ ಜಿಲ್ಲಾ ವ್ಯವಸ್ಥಾಪಕ (ಫಾರ್ಮ್ ಲೈವ್ಲಿಹುಡ್) ಹುದ್ದೆಗೆ ₹30,000 ವೇತನ ನಿಗದಿಯಾಗಿದೆ. ಇದು ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ಅನುಭವ ಪಡೆಯಲು ಮತ್ತು ಸ್ಥಿರ ಆದಾಯಕ್ಕೆ ಸಹಾಯಕವಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಕೆ ಪ್ರಕ್ರಿಯೆ 2026ರ ಅಕ್ಟೋಬರ್ 14ರಂದು ಆರಂಭವಾಗಿದ್ದು, ಅಕ್ಟೋಬರ್ 28 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು KSRLPS ಅಧಿಕೃತ ಉದ್ಯೋಗ ಪೋರ್ಟಲ್ಗೆ ಭೇಟಿ ನೀಡಿ:
1. ಅಧಿಕೃತ ವೆಬ್ಸೈಟ್ಗೆ ಹೋಗಿ ಲಾಗಿನ್ ಅಥವಾ ಹೊಸ ಖಾತೆ ರಚಿಸಿ.
2. ಲಭ್ಯವಿರುವ ಹುದ್ದೆಗಳನ್ನು ಪರಿಶೀಲಿಸಿ, ಅರ್ಹತೆಗೆ ಹೊಂದುವ ಹುದ್ದೆಯನ್ನು ಆಯ್ಕೆ ಮಾಡಿ.
3. ಶೈಕ್ಷಣಿಕ ಪ್ರಮಾಣಪತ್ರಗಳು, ಅಂಕಪಟ್ಟಿ, ವಯಸ್ಸಿನ ದಾಖಲೆ, ಗುರುತಿನ ಚೀಟಿ, ಇತ್ತೀಚಿನ ಭಾವಚಿತ್ರ, ಅನುಭವ ಪ್ರಮಾಣಪತ್ರ ಮತ್ತು ಮೀಸಲಾತಿ ದಾಖಲೆಗಳನ್ನು ಅಪ್ಲೋಡ್ ಮಾಡಿ.
4. ಅರ್ಜಿ ಸಲ್ಲಿಸಿದ ನಂತರ ಪ್ರತಿಯನ್ನು ಉಳಿಸಿಕೊಳ್ಳಿ.
ಅಪ್ಲೈ ಲಿಂಕ್: https://jobsksrlps.karnataka.gov.in/
ಅಧಿಕೃತ ಅಧಿಸೂಚನೆ ಮತ್ತು ಹುದ್ದೆವಾರು ವಿವರಗಳನ್ನು ಪೋರ್ಟಲ್ನಲ್ಲಿ ನೇರವಾಗಿ ಪರಿಶೀಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಹುದ್ದೆಗಳ ಲಭ್ಯತೆ, ನಿಖರ ವಿದ್ಯಾರ್ಹತೆ, ಅನುಭವ ಮತ್ತು ಆಯ್ಕೆ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಿ.
Application Last Date: 28/10/2026
ಮಂಡ್ಯ ಜಿಲ್ಲೆಯ ಯುವಕರು ಮತ್ತು ಪದವೀಧರರಿಗೆ ಇದು ಉತ್ತಮ ಅವಕಾಶ. ಗ್ರಾಮೀಣ ಜೀವನೋಪಾಯ ಅಭಿವೃದ್ಧಿಯಲ್ಲಿ ಭಾಗವಹಿಸಿ, ಸಮುದಾಯಕ್ಕೆ ಸೇವೆ ಸಲ್ಲಿಸುವ ಜೊತೆಗೆ ಉತ್ತಮ ವೇತನ ಪಡೆಯಬಹುದು. ಅರ್ಹರು ತಡಮಾಡದೆ ಅರ್ಜಿ ಸಲ್ಲಿಸಿ. ಯಾವುದೇ ಸಂದೇಹವಿದ್ದರೆ ಅಧಿಕೃತ ಪೋರ್ಟಲ್ನ ಸಹಾಯವನ್ನು ಬಳಸಿ.