PM Kisan 2026 Update: ಕೇಂದ್ರ ಬಜೆಟ್ 2026ರಲ್ಲಿ ಪಿಎಂ ಕಿಸಾನ್ ಹಣ ₹6000 ಬದಲು ₹10000 ಏರಿಕೆಯಾಗುತ್ತಾ – ಇಲ್ಲಿದೆ ನೋಡಿ ಮಾಹಿತಿ

PM Kisan 2026 Update: ಕೇಂದ್ರ ಬಜೆಟ್ 2026ರಲ್ಲಿ ಪಿಎಂ ಕಿಸಾನ್ ಹಣ ₹6000 ಬದಲು ₹10000 ಏರಿಕೆಯಾಗುತ್ತಾ – ಇಲ್ಲಿದೆ ನೋಡಿ ಮಾಹಿತಿ

ನಮಸ್ಕಾರ ಗೆಳೆಯರೇ ರೈತರಿಗೆ ಕೇಂದ್ರ ಸರ್ಕಾರ ಕಡೆಯಿಂದ ಇದೀಗ ಭರ್ಜರಿ ಗುಡ್ ನ್ಯೂಸ್ ಬರುತ್ತಿದೆಯಾ. ಹೌದು ಗೆಳೆಯರೇ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಲ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಅರ್ಹ ರೈತ ಫಲಾನುಭವಿಗಳ ಖಾತೆಗೆ ವರ್ಷಕ್ಕೆ ₹6,000 ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡುತ್ತಿವೆ.

WhatsApp Group Join Now
Telegram Group Join Now       

ಆದರೆ ಕೇಂದ್ರ ಬಜೆಟ್ 2026ರಲ್ಲಿ ಅರ್ಹ ರೈತರ ಖಾತೆಗೆ ವರ್ಷಕ್ಕೆ 10,000 ಹಣ ಏರಿಕೆ ಮಾಡುವ ದೊಡ್ಡ ಭರವಸೆ ಕಾಣುತ್ತಿದೆ.

ಹಾಗಾಗಿ ನಾವು ಈ ಒಂದು ಲೇಖನ ಮೂಲಕ ರೈತರಿಗೆ ಮುಂದಿನ ಬಜೆಟ್ ನಲ್ಲಿ 10000 ಈ ಒಂದು ಯೋಜನೆಯ ಮೂಲಕ ಸಿಗುತ್ತದೆಯೇ ಎಂಬ ವಿಷಯದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಇದರ ಜೊತೆಗೆ ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಸಂಪೂರ್ಣ ವಿಷಯದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನವನ್ನು ಆದಷ್ಟು ಕೊನೆವರೆಗೂ ಓದಿ

PM Kisan 2026 Update
PM Kisan 2026 Update

ಏನಿದು ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆ.?

ಸ್ನೇಹಿತರೆ ಕೇಂದ್ರ ಸರ್ಕಾರ ಭಾರತದ ರೈತರಿಗೆ ಆರ್ಥಿಕವಾಗಿ ಬೆಂಬಲ ನೀಡುವ ಉದ್ದೇಶದಿಂದ ಹಾಗೂ ರೈತರು ಬೆಳೆಯುವ ಬೆಳೆಗಳ ಅನುಗುಣವಾಗಿ ಅಂದರೆ ಬಿತ್ತನೆ ಮಾಡುವ ಸಂದರ್ಭದಲ್ಲಿ ಹಾಗೂ ಬೆಳೆಗಳಿಗೆ ಕೀಟನಾಶಕ ಹಾಗೂ ರಸಗೊಬ್ಬರ ಚೆಲುವ ಸಂದರ್ಭದಲ್ಲಿ ಮತ್ತು ಬೆಳೆ ಕಟಾವು ಮಾಡುವ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಪ್ರಧಾನ ಮಂತ್ರಿ ಕಿಸಾನ್ ಸಲ್ಮಾನ್ ನಿಧಿ ಯೋಜನೆ ಜಾರಿಗೆ ತರಲಾಗಿದೆ.!

ಪಿಎಂ ಕಿಸಾನ್ ಸನ್ಮಾನ್ ನಿಧಿ ಯೋಜನೆಯ ಮೂಲಕ ಅರ್ಹ ರೈತರ ಖಾತೆಗೆ ವರ್ಷಕ್ಕೆ ₹6,000 ಹಣ ಅಂದರೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2000 ರೂಪಾಯಿಯಂತೆ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಹಾಗಾಗಿ ಇದು ರೈತರಿಗಾಗಿ ಜಾರಿಗೆ ತಂದಿರುವ ಅತ್ಯಂತ ಜನಪ್ರಿಯ ಯೋಜನೆಯಾಗಿದ್ದು ಈ ಯೋಜನೆಯ ಮೂಲಕ ರೈತರು ಇಲ್ಲಿವರೆಗೂ ಬರೋಬ್ಬರಿ 21 ಕಂತಿನ ಹಣದವರೆಗೆ ಪಡೆದುಕೊಂಡಿದ್ದಾರೆ ಅಂದರೆ ಹೆಸರಿಸಿ ಸುಮಾರು 42000 ಹಣವನ್ನು ಈ ಒಂದು ಯೋಜನೆಯ ಮೂಲಕ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು

ಇದೀಗ ಈ ಒಂದು ಯೋಜನೆ ಅಡಿಯಲ್ಲಿ ನೀಡುತ್ತಿರುವ 6000 ಹಣದ ಬದಲಾಗಿ ಹೆಚ್ಚುವರಿಯಾಗಿ ಇನ್ನು ₹4,000 ಸೇರಿಸಿ ಒಟ್ಟು 10000 ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

WhatsApp Group Join Now
Telegram Group Join Now       

ಇದರ ಜೊತೆಗೆ ಒಂದು ಫೆಬ್ರುವರಿ 2026ರಂದು ಕೇಂದ್ರ ಸರ್ಕಾರ ಹೊಸ ಬಜೆಟ್ ಮಂಡನೆ ಮಾಡುತ್ತಿದೆ ಹಾಗಾಗಿ ಈ ಬಜೆಟ್ ನಲ್ಲಿ ಪಿಎಂ ಕಿಸಾನ್ ಯೋಜನೆ ಹಣ ಏರಿಕೆ ಮಾಡಬಹುದು ಎಂದು ಸುದ್ದಿ ಹರಿದಾಡುತ್ತಿದೆ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ

 

ಪಿಎಂ ಕಿಸಾನ್ ಯೋಜನೆ ಹಣ ₹6,000 ಬದಲು ₹10,000 ಕ್ಕೆ ಏರಿಕೆಯಾಗುತ್ತಾ.?

ಹೌದು ಸ್ನೇಹಿತರೆ ಸೋಶಿಯಲ್ ಮೀಡಿಯಾದಲ್ಲಿ ಈ ಬಾರಿ ಬಜೆಟ್ ಮಂಡಳಿಯಲ್ಲಿ ಕೇಂದ್ರ ಸರ್ಕಾರ ರೈತರಿಗೆ 6000 ಬದಲಿಗೆ 10000 ಹಣ ಹೆಚ್ಚು ಮಾಡಲಿದೆ ಎಂಬ ಸುದ್ದಿ ಹರಿದಾಡುತ್ತಿದೆ ಆದರೆ ಈ ಬಗ್ಗೆ ಕೇಂದ್ರ ಸರಕಾರದ ಯಾವುದೇ ಅಧಿಕೃತ ವೆಬ್ಸೈಟ್ ಅಥವಾ ಜಾಲತಾಣದಲ್ಲಿ ಹಾಗೂ ಸಚಿವಾಲಯದಿಂದ ಯಾವುದೇ ಮಾಹಿತಿ ವರ ಬಂದಿಲ್ಲ.

ಕೆಲ ಸಮೀಕ್ಷೆಗಳ ಪ್ರಕಾರ ಹಾಗೂ ಸುದ್ದಿ ಮಾಧ್ಯಮಗಳ ಪ್ರಕಾರ ರೈತರಿಗೆ ನೀಡುವ ಈ ಹಣ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿ ಮಾಡುತ್ತಿವೆ ಈ ಬಗ್ಗೆ ಬಜೆಟ್ ಮಂಡನೆಯಾದ ನಂತರ ಸ್ಪಷ್ಟ ಮಾಹಿತಿ ನಮಗೆ ಸಿಗುತ್ತದೆ ಹಾಗಾಗಿ ಅಲ್ಲಿವರೆಗೂ ನಾವು ಕಾಯಬೇಕು

ಈ ಸುದ್ದಿ ಹರದಾಡಲು ಕೆಲವು ಪ್ರಮುಖ ಕಾರಣಗಳಿವೆ ಅದು ಯಾವ್ಯಾವು ಅಂದರೆ ಮೊದಲನೆಯದಾಗಿ ರೈತರಿಗೆ ಕೃಷಿ ವೆಚ್ಚ ಹಾಗೂ ಬೆಲೆ ಏರಿಕೆ ಮತ್ತು ರಸಗೊಬ್ಬರ ಮುಂತಾದ ವೆಚ್ಚಗಳಲ್ಲಿ ಏರಿಕೆಯಾಗಿದೆ ಹಾಗೂ ಡೀಸೆಲ್ ಬೆಲೆಯು ಗಣನೀಯವಾಗಿ ಏರಿಕೆಯಾಗಿದೆ.

ಹಾಗಾಗಿ ಈ ದೃಷ್ಟಿಯಿಂದ ರೈತರಿಗೆ ಇನ್ನಷ್ಟು ಆರ್ಥಿಕ ನೆರವು ನೀಡಲು ಕೇಂದ್ರ ಸರಕಾರ ಈ ಯೋಜನೆಯಿಂದ ನೀಡುವ ಹಣ ಹೆಚ್ಚು ಮಾಡಬಹುದೇ ಎಂಬ ಮಾಹಿತಿ ಸುದ್ದಿ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ

ಇದರ ಜೊತೆಗೆ 2026ರಲ್ಲಿ ಕೆಲ ಮುಖ್ಯ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ ಹಾಗಾಗಿ ಆ ರಾಜ್ಯದ ಗ್ರಾಮೀಣ ಭಾಗದ ರೈತರ ಮತ ಸೆಳೆಯುವುದು ಇದರ ಪ್ರಮುಖ ಉದ್ದೇಶವಾಗಿರಬಹುದು ಎಂದು ಕೆಲವು ರಾಜಕೀಯ ವಿಶ್ಲೇಷಕರು ಚರ್ಚೆ ಮಾಡುತ್ತಿದ್ದಾರೆ.

ಒಂದು ವೇಳೆ ಈ ಹಣ ಹೆಚ್ಚಾದರೆ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು ಪ್ರಸ್ತುತ ನಾವು ಈಗ ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಮಾಹಿತಿ ತಿಳಿದುಕೊಳ್ಳೋಣ

 

ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ..?

ಸ್ನೇಹಿತರೆ ರೈತರು ಇಲ್ಲಿವರೆಗೂ ಈ ಒಂದು ಯೋಜನೆಯ ಮೂಲಕ 21ನೇ ಕಂತಿನ ಹಣದವರೆಗೆ ರೈತರ ಖಾತೆಗೆ ಜಮಾ ಮಾಡಲಾಗಿದೆ ಹಾಗಾಗಿ ರೈತರು 22ನೇ ಕಂತಿನ ಹಣ ಯಾವಾಗ ಜಮಾ ಆಗುತ್ತೆ ಎಂದು ಎದುರು ನೋಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿ ಇನ್ನು ಕೂಡ ಬಿಡುಗಡೆಯಾಗಿಲ್ಲ.

ಆದರೆ ಈ ಯೋಜನೆಯಲ್ಲಿ ಹಣ ಬಿಡುಗಡೆಯಾಗುವ ಪ್ರಕ್ರಿಯೆ ಗಮನಿಸಿದರೆ ಹಾಗೂ ಕೆಲವು ಮಾಧ್ಯಮಗಳ ವರದಿಯ ಪ್ರಕಾರ ಫೆಬ್ರುವರಿ ತಿಂಗಳಿನಲ್ಲಿ 22ನೇ ಕಂತಿನ 2000 ಹಣ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ

ಹಾಗಾಗಿ ಇದು ರೈತರಿಗೆ ಖುಷಿ ಕೊಡುವ ವಿಷಯವನ್ನು ಹೇಳಬಹುದು. ಆದರೆ ರೈತರು ಕಡ್ಡಾಯವಾಗಿ ಹಣ ಪಡೆಯಲು ಕೆಲವೊಂದು ನಿಯಮಗಳನ್ನು ಹಾಗೂ ರೂಲ್ಸ್ ಪಾಲಿಸಬೇಕು ಇದಕ್ಕೆ ಸಂಬಂಧಿಸಿದೆ ವಿವರ ತಿಳಿದುಕೊಳ್ಳೋಣ

 

ರೈತರು ಪಿಎಂ ಕಿಸಾನ್ ಹಣ ಪಡೆಯಲು ಪಾಲಿಸಬೇಕಾದ ರೂಲ್ಸ್.?

  • ರೈತರು ಕಡ್ಡಾಯವಾಗಿ ತಮ್ಮ ಪಿಎಂ ಕಿಸಾನ್ ಯೋಜನೆ ಅರ್ಜಿಯ ekyc ಪ್ರಕ್ರಿಯ ಪೂರ್ಣಗೊಳಿಸಿರಬೇಕು
  • ರೈತರ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇರಬೇಕು
  • ರೈತರು ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಲಿಂಕ್ ಹಾಗೂ ekyc ಪ್ರಕ್ರಿಯೆ ಪೂರ್ಣಗೊಳಿಸಿರಬೇಕು ಜೊತೆಗೆ npci ಮ್ಯಾಪಿಂಗ್ ಮಾಡಿಸಿರಬೇಕು
  • ರೈತರ ತಮ್ಮ ಜಮೀನು ದಾಖಲಾತಿಗಳು ಸರಿಯಾಗಿ ಇರಬೇಕು
  • ರೈತರ ತಮ್ಮ ಜಮೀನು ದಾಖಲಾತಿಗೆ FID ಕ್ರಿಯೇಟ್ ಮಾಡಿಸಿರಬೇಕು
  • ರೈತರ ತಮ್ಮ ಜಮೀನು ದಾಖಲಾತಿಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿರಬೇಕು

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ಶೇರ್ ಮಾಡಿ ಇದೇ ರೀತಿ ನಿಮಗೆ ಪ್ರತಿದಿನ ಹೊಸ ವಿಷಯಗಳು ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಬೇಕಾದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳುವುದು ಉತ್ತಮ

Canara Bank FD: ಕೆನರಾ ಬ್ಯಾಂಕ್ ನಲ್ಲಿ 1 ಲಕ್ಷ ಹಣ ಇಟ್ಟರೆ ₹39,750 ರೂಪಾಯಿವರೆಗೆ ಸ್ಥಿರ ಬಡ್ಡಿ ಸಿಗುತ್ತೆ – ಇಲ್ಲಿದೆ ನೋಡಿ ಮಾಹಿತಿ

Leave a Comment