SBI scholarship 2025 : SBI ಬ್ಯಾಂಕ್ ಮೂಲಕ ವಿದ್ಯಾರ್ಥಿಗಳಿಗೆ 15,000 ವಿಧ್ಯಾರ್ಥಿ ವೇತನ !

SBI scholarship 2025 : SBI ಬ್ಯಾಂಕ್ ಮೂಲಕ ವಿದ್ಯಾರ್ಥಿಗಳಿಗೆ 15,000 ವಿಧ್ಯಾರ್ಥಿ ವೇತನ !

 

WhatsApp Group Join Now
Telegram Group Join Now       

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ 75 ನೆಯ ವರ್ಷದ ವಾರ್ಷಿಕೋತ್ಸವ ಸಲುವಾಗಿ ಪ್ಲಾಟಿನಂ ಜುಬಿಲಿ ಆಶಾ ಸ್ಕಾಲರ್ಷಿಪ್ ಅನ್ನು ಆರಂಭಿಸಿದೆ. ಇದು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಅಂತ ಹೇಳಬಹುದು. ಈ ಸ್ಕಾಲರ್ಷಿಪ್ ಮೂಲಕ ವಿದ್ಯಾರ್ಥಿಗಳಿಗೆ 15,000 ರಿಂದ 20 ಲಕ್ಷ ತನಕ ವಿಧ್ಯಾರ್ಥಿ ವೇತನ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಸ್ಕಾಲರ್ಷಿಪ್ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

 

SBI ಆಶಾ ಸ್ಕಾಲರ್ಷಿಪ್ 2025

SBI ಫೌಂಡೇಶನ್ ವತಿಯಿಂದ ಉನ್ನತ ಶಿಕ್ಷಣವನ್ನು ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ 15,000 ರಿಂದ 20 ಲಕ್ಷ ತನಕ ಸ್ಕಾಲರ್ಷಿಪ್ ಅನ್ನು ನೀಡುವ ಉದ್ದೇಶವನ್ನು ಈ ಯೋಜನೆಯ ಹೊಂದಿದೆ. ಇದು ವಿದ್ಯಾರ್ಥಿಗಳಿಗೆ ಒಂದು ಉಪಯುಕ್ತ ಯೋಜನೆಯಾಗಿದ್ದು, ಪ್ರತಿಯೊಬ್ಬರಿಗೂ ಈ ಮಾಹಿತಿ ತಿಳಿಸಿ.

 

ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಆರಂಭ, ಕೊನೆಯ ದಿನಾಂಕ ಯಾವಾಗ ಇಲ್ಲಿ ತಿಳಿಯಿರಿ.

 

WhatsApp Group Join Now
Telegram Group Join Now       

ಯಾರು ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಬಹುದು ?

ಈ SBI ಪ್ಲಾಟಿನಂ ಜುಬಿಲಿ ಸ್ಕಾಲರ್ಷಿಪ್ ಯೋಜನೆಗೆ ಅರ್ಜಿ ಹಾಕಿ ವಿಧ್ಯಾರ್ಥಿ ವೇತನ ಪಡೆಯಲು ವೈದ್ಯಕೀಯ, IIT,IIM, ಮತ್ತು ವಿದೇಶಗಳಲ್ಲಿ ಉನ್ನತ ಶಿಕ್ಷಣ ಮಾಡುತ್ತಿರುವವರು ಪಡೆಯಲು ಅರ್ಹರಾಗಿರುತ್ತಾರೆ. ಈ ವರ್ಷ ಈ ಯೋಜನೆಯ ಮೂಲಕ ಸುಮಾರು 23,230 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಗುರಿಯನ್ನು ಸಂಸ್ಥೆ ಹೊಂದಿದೆ ಆದ್ದರಿಂದ ಅರ್ಹತೆ ಇರುವ ಪ್ರತಿಯೊಬ್ಬರೂ ತಪ್ಪದೆ ಅರ್ಜಿ ಹಾಕಿರಿ. ಅರ್ಜಿ ಹಾಕಲು ಕೊನೆಯ ದಿನಾಂಕ 15 ನವೆಂಬರ್ 2025 ಆಗಿರುತ್ತದೆ.

 

ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು

ವಿದ್ಯಾರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಪ್ರಸ್ತುತ ಅಭ್ಯಾಸ ಮಾಡುತ್ತಿರಬೇಕು.

ವಿದೇಶದಲ್ಲಿ ಓದುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷಕ್ಕಿಂತ ಕಡಿಮೆ ಇರಬೇಕು.

ವಿದ್ಯಾರ್ಥಿಯು ತನ್ನ ಹಿಂದಿನ ವರ್ಷದ ತರಗತಿಯಲ್ಲಿ 75% ಅಂಕಗಳಿಂದ ಪಾಸ್ ಆಗಿರಬೇಕು.

ವಿದ್ಯಾರ್ಥಿನಿಯರಿಗೆ , ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶೇಕಡಾ 50% ರಷ್ಟು ಮೀಸಲಾತಿ ನೀಡಲಾಗುತ್ತದೆ ಮತ್ತು ಅಂಕಗಳಲ್ಲಿ 10% ಕಡಿಮೆ ಮಾಡಲಾಗುತ್ತದೆ.

SBI scholarship 2025

ಆಶಾ ಸ್ಕಾಲರ್ಷಿಪ್ ಅರ್ಜಿ ಸಲ್ಲಿಸುವುದು ಹೇಗೆ ?

http://sbiashascholarship.co.in/ ಈ ವೆಬ್ಸೈಟ್ ನ ಅಧಿಕೃತ ಲಿಂಕ್ ಅನ್ನು ಈ ಕೆಳಗೆ ನೀಡಲಾಗಿದೆ. ಅದರ ಮೇಲೆ ಒತ್ತಿ, ಸ್ಕಾಲರ್ಷಿಪ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ನಂತರ ಅಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಮತ್ತು ದಾಖಲೆಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಪೂರ್ಣಗೊಳಿಸಿ.

 

ಅರ್ಜಿ ಹಾಕುವ ಅಧಿಕೃತ ಲಿಂಕ್ 

 

ಇದು ಅರ್ಜಿ ಹಾಕುಲು ಸಂಬಂಧಪಟ್ಟ ಅಧಿಕೃತ ವೆಬ್ಸೈಟ್ ಲಿಂಕ್ ಆಗಿದೆ. ಈ ಲಿಂಕ್ ಮೂಲಕ ಆನ್ಲೈನ್ ಅಲ್ಲಿಯೇ ನಿಮ್ಮ ಮೊಬೈಲ್ ಮೂಲಕ ಸಹ ಅರ್ಜಿ ಹಾಕಬಹುದು. ಪ್ರತಿಯೊಬ್ಬ ಅರ್ಹ ವಿದ್ಯಾರ್ಥಿಯು ಯೋಜನೆಗೆ ಅರ್ಜಿ ಹಾಕಿ ಯೋಜನೆಯ ಲಾಭ ಪಡೆದುಕೊಳ್ಳಿ.

 

Leave a Comment