BBK 12 Kannada : ಬಿಗ್ ಬಾಸ್ ಮನೆಯೊಳಗೆ ಹೋಗುವ ಸ್ಪರ್ಧಿಗಳ ಲಿಸ್ಟ್ ಲೀಕ್, ಇವರೇನಾ ಒಳಗೆ ಹೋಗೋರು ?
ಬಿಗ್ ಬಾಸ್ ಕನ್ನಡ ಸೀಸನ್ 12ರ ವೇದಿಕೆ ಸಿದ್ಧವಾಗಿದ್ದು , ಕೆಲವು ಸಂಶಯಗಳು ಮತ್ತು ಚರ್ಚೆಗಳ ನಂತರ ಕಿಚ್ಚ ಸುದೀಪ್ ಅವರು ಸಹ ನಿರೂಪಣೆಗೆ ಒಪ್ಪಿಕೊಂಡು, ಇನ್ನೇನು ಕೆಲವು ದಿನಗಳಲ್ಲಿ BBK season 12 ಆರಂಭವಾಗುತ್ತದೆ. ಈಗಾಗಲೇ ಹಿಂದಿ ಮಲಯಾಳ ಮತ್ತು ತೆಲುಗು ಭಾಷೆಗಳಲ್ಲಿ ಈ ವರ್ಷದ ಸಾಲಿನ ಬಿಗ್ ಬಾಸ್ ಆರಂಭವಾಗಿದೆ. ಅದೇ ರೀತಿ ಈ ವರ್ಷದ ಕನ್ನಡ ಭಾಷೆಯಲ್ಲಿನ ಬಿಗ್ ಬಾಸ್ ಕೂಡ ಸತ್ಯದಲ್ಲಿ ಆರಂಭವಾಗಲಿದೆ ಎಂಬ ಮಾಹಿತಿ ಬಿಗ್ ಬಾಸ್ ಮುಖ್ಯಸ್ಥರಿಂದ ಬಂದಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಅಭ್ಯರ್ಥಿಗಳ ಆಯ್ಕೆ ಈಗಾಗಲೇ ಮಾಡಲಾಗಿದೆ ಎಂದು ಮತ್ತು ಹಲವಾರು ಸೋಶಿಯಲ್ ಮೀಡಿಯಾಗಳಲ್ಲಿ ಹೆಸರುಗಳಿಸಿಕೊಂಡಂತ ಸೆಲೆಬ್ರಿಟಿಗಳ ಹೆಸರುಗಳು ಸಹ ಹೊರಗೆ ಬರುತ್ತಿವೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಪ್ರತಿ ವರ್ಷ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭವಾಗುವುದಕ್ಕೂ ಮುನ್ನ ಹಲವಾರು ಸ್ಪರ್ಧಿಗಳ ಹೆಸರುಗಳು ಸೋಶಿಯಲ್ ಮೀಡಿಯಾಗಳಲ್ಲಿ ಲೀಗ್ ಆಗಿ , ಚರ್ಚೆ ಆಗುತ್ತವೆ. ಅದರಂತೇ ಈ ವರ್ಷವೂ ಸಹ ಸೀಸನ್ 12ರ ಅಭ್ಯರ್ಥಿಗಳ ಪಟ್ಟಿ ಲೇಖಕಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆ ನಡೆದಿದೆ. ಇಷ್ಟೆಲ್ಲಾ ಆದರೂ ಸಹ ಕೊನೆದಾಗಿ ಮನೆಯ ಒಳಗೆ ಹೋಗುವ ಸ್ಪರ್ಧಿಗಳ ಫೈನಲ್ ಮಾಡುವುದು ಬಿಗ್ ಬಾಸ್ ಗ್ರಾಂಡ್ ಓಪನಿಂಗ್ ದಿನವೆ.
ಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ಶಿಕ್ಷಣಕ್ಕಾಗಿ ಸ್ಕಾಲರ್ಷಿಪ್ ನೀಡಲು ಅರ್ಜಿ ಆಹ್ವಾನ , ಅರ್ಜಿ ಹಾಕಲು ಇಲ್ಲಿ ಒತ್ತಿ !
ಬಿಗ್ ಬಾಸ್ ಸೀಸನ್ 11 ಕನ್ನಡದಲ್ಲಿ ಬಹಳ ಸದ್ದು ಮಾಡಿತ್ತು ಆದ ಕಾರಣ ಈ ಬಾರಿ ಸೀಸನ್ 12ಕ್ಕೆ ಬಹಳ ಜನ ಕಾಯುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 12 ಆರಂಭ ಆಗುವ ಮೊದಲೇ 18 ಸ್ಪರ್ಧಿಗಳ ಲಿಸ್ಟ್ ನ ಹೆಸರುಗಳ ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಎಲ್ಲರ ಚರ್ಚೆಗೆ ವಿಷಯವಾಗಿದೆ. ಹಾಗಾದರೆ ಲೀಕ್ ಆದ ಈ 18 ಮಂದಿ ಯಾರು ಮತ್ತು ಇದರಲ್ಲಿ ಯಾರ್ಯಾರು ಬಿಗ್ ಬಾಸ್ ಮನೆ ಒಳಗೆ ಹೋಗಲು ನಿರಾಕರಿಸಿದ್ದಾರೆ ಎಂದು ತಿಳಿಯಲು ಮುಂದೆ ಓದಿ.
ಬಿಗ್ ಬಾಸ್ ಸೀಸನ್ 12 ಕನ್ನಡದ ಸ್ಪರ್ಧಿಗಳ ಲಿಸ್ಟ್ ಲೀಕ್
ಈ ಬಾರಿಯ ಸೀಸನ್ 12 ಕ್ಕೆ ಹೋಗುವ 18 ಸ್ಪರ್ಧಿಗಳ ಲಿಸ್ಟ್ ಅನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಹರಿ ಬಿಡಲಾಗಿದೆ. ಇದರಲ್ಲಿ ಬಹುತೇಕ ಸಿರಿಯಲ್ ಗಳಲ್ಲಿ ನಟಿಸುವವರು ಇದ್ದಾರೆ. ನಾವು ಪ್ರತಿ ವರ್ಷ ನೋಡುವ ಹಾಗೆ ಬಿಗ್ ಬಾಸ್ ಮನೆಯೊಳಗೆ ಹಲವು ಕ್ಷೇತ್ರಗಳಲ್ಲಿ ಹೆಸರುವಾಸಿ ಆದ ವ್ಯಕ್ತಿಗಳನ್ನು ಮತ್ತು ಹಲವು ವಿವಾದಗಳಿಗೆ ಈಡಾದ ವ್ಯಕ್ತಿಗಳನ್ನು ಕರೆದುಕೊಳ್ಳುತ್ತಾರೆ. ಈ ವರ್ಷ ಲೀಕ್ ಮಾಡಲಾದ ಪಟ್ಟಿಯೂ ಸಹ ಅದೇ ರೀತಿಯಾಗಿ ಇದೆ. ಆದರೆ ಅದರಲ್ಲಿ ಕೆಲವರು ಬಿಗ್ ಬಾಸ್ ಹೋಗಲು ನೇರವಾಗಿ ನಿರಾಕರಿಸಿದ್ದಾರೆ.

ಬಿಗ್ ಬಾಸ್ 18 ಸ್ಪರ್ಧಿಗಳ ಲೀಕ್ ಆಗಿರುವ ಲಿಸ್ಟ್
ಸೋಶಿಯಲ್ ಮೀಡಿಯಾಗಳಲ್ಲಿ ಕೆಲವು ದಿನದಿಂದ ಹರಿದಾಡುತ್ತಿರುವ ಬಿಗ್ ಬಾಸ್ ಸೀಸನ್ 12 ಕನ್ನಡದ ಲೀಕ್ ಮಾಡಲ್ಲ ಸ್ಪರ್ಧಿಗಳ ಪಟ್ಟಿಯಲ್ಲಿ ಸಂಜನಾ ಬುರ್ಲಿ, ಸಾಗರ್ ಬಿಲ್ಲಿಗೌಡ, ಹಿರಿಯ ನಟಿ ಸ್ವಾತಿ, ಮೇಘ ಶೆಟ್ಟಿ, ಶ್ವೇತ ಪ್ರಸಾದ್, ಪಾಯಲ್ ಚಂಗಪ್ಪ, ಅರವಿಂದ ರತನ್, ವಿಜಯ್ ಸೂರ್ಯ, ದೀಪಿಕಾ ಗೌಡ, ವರುಣ್ ಆರಾಧ್ಯ, ಅಮೃತ ರಾಮಸ್ವಾಮಿ ,ಧನುಷ್, ಬಾಳು ಬೆಳಗುಂದಿ ಮತ್ತು ಸಿಂಗರ್ ಸುನಿಲ್ ಎಷ್ಟೋ ಜನರ ಹೆಸರು ಕೇಳಿ ಬರುತ್ತಿದೆ.
ವಿವಾದಾತ್ಮಕ ಹೆಸರುಗಳು
ಬಿಗ್ ಬಾಸ್ ಸೀಸನ್ 12 ವಿವಾದಾತ್ಮಕ ಹೆಸರುಗಳ ಪಟ್ಟಿಯಲ್ಲಿ ಖಾಸಗಿ ನ್ಯೂಸ್ ವಾಹಿನಿಯ ಆಂಕರ್ ಆಗಿರುವ ದಿವ್ಯ ವಸಂತ್ ಮತ್ತು ಸೌಜನ್ಯ ಪ್ರಕರಣದಲ್ಲಿ ವಿವಾದಾತ್ಮಕವಾಗಿ ಸುದ್ದಿಯಾದ ಸಮೀರ್ MD ಅವರ ಹೆಸರುಗಳು ಕೇಳಿ ಬರುತ್ತೇವೆ.
ಬಿಗ್ ಬಾಸ್ ಆಫರ್ ತಿರಸ್ಕರಿಸಿದರು ಯಾರು?
ಬಿಗ್ ಬಾಸ್ ಸೀಸನ್ 12ಕ್ಕೆ ಹೋಗುವುದಿಲ್ಲ ಎಂದು ಹಲವಾರು ಹೆಸರುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿವೆ ಆದರೆ ಯಾರೂ ಕೂಡ ನಿಖರವಾದ ಪ್ರತಿಕ್ರಿಯೆಯನ್ನು ನೀಡಿಲ್ಲ. ಈ ಪಟ್ಟಿಯಲ್ಲಿರುವ ಗಾಯಕ ಬಾಳು ಬೆಳಗುಂದಿ ಅವರು ಬಿಗ್ ಬಾಸ್ ಮನೆಗೆ ಹೋಗುವುದಿಲ್ಲವೆಂದು ಪ್ರತಿಕ್ರಿಯೆ ನೀಡಿರುವುದಾಗಿ ವರದಿ ಇದೆ.
ಬಿಗ್ ಬಾಸ್ ಸೀಸನ್ 12 ಕನ್ನಡದ ಬಗ್ಗೆ ಪ್ರತಿ ಹೊಸ ಅಪ್ಡೇಟ್ ತಿಳಿಯಲು ನಮ್ಮ ಚಾನಲ್ ಫಾಲೋ ಮಾಡಿಕೊಳ್ಳಿ.