ಸುಜ್ಞಾನನಿಧಿ ವಿದ್ಯಾರ್ಥಿವೇತನ 2026-27: ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ₹400 ರಿಂದ ₹1000 ಸ್ಕಾಲರ್ಶಿಪ್ – ಇಂದೇ ಅರ್ಜಿ ಸಲ್ಲಿಸಿ!
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ನೆರವು ಪಡೆಯುವ ಅವಕಾಶ ಒದಗಿಸುವ ಸುಜ್ಞಾನನಿಧಿ ಶಿಷ್ಯವೇತನ ಯೋಜನೆಗೆ 2026-27ನೇ ಸಾಲಿನ ಅರ್ಜಿ ಆಹ್ವಾನಿಸಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಜಾರಿಯಲ್ಲಿರುವ ಈ ಯೋಜನೆಯು 2007ರಿಂದಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರಿಗೆ ಸಹಾಯ ಮಾಡುತ್ತಿದೆ. ಇಲ್ಲಿಯವರೆಗೆ ಸುಮಾರು 1.37 ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದು, 186.01 ಕೋಟಿ ರೂಪಾಯಿ ವಿದ್ಯಾರ್ಥಿವೇತನ ವಿತರಿಸಲಾಗಿದೆ.
ಇದನ್ನೂ ಓದಿ: ಗೃಹಜ್ಯೋತಿ ಯೋಜನೆಗೆ ಬಿಗ್ ಅಪ್ಡೇಟ್: ಹೊಸ ಅರ್ಜಿ – ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ? | Gruha Jyothi Latest News

ಸುಜ್ಞಾನನಿಧಿ ವಿದ್ಯಾರ್ಥಿವೇತನ 2026-27 ಯೋಜನೆಯ ಉದ್ದೇಶ ಮತ್ತು ಪ್ರಯೋಜನ.?
ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ದುರ್ಬಲ ಕುಟುಂಬಗಳ ಹೆಣ್ಣು ಮಕ್ಕಳು ತಾಂತ್ರಿಕ, ವೈದ್ಯಕೀಯ ಹಾಗೂ ವೃತ್ತಿಪರ ಶಿಕ್ಷಣ ಪಡೆಯಲು ಆರ್ಥಿಕ ಭಾರವಿಲ್ಲದೆ ಮುಂದುವರಿಯುವುದು ಈ ಯೋಜನೆಯ ಮುಖ್ಯ ಗುರಿ. ವಿದ್ಯಾರ್ಥಿನಿಯರು ಆಯ್ಕೆ ಮಾಡಿಕೊಂಡಿರುವ ಕೋರ್ಸ್ಗೆ ಅನುಗುಣವಾಗಿ ಪ್ರತಿ ತಿಂಗಳು 400 ರೂಪಾಯಿಯಿಂದ 1000 ರೂಪಾಯಿ ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಕೋರ್ಸ್ ಅವಧಿಯ ಉದ್ದಕ್ಕೂ ಈ ನೆರವು ಲಭ್ಯವಾಗುತ್ತದೆ. ಪ್ರತಿ ವರ್ಷ ನವೀಕರಣ ಮಾಡಿಸಿಕೊಳ್ಳುವುದು ಕಡ್ಡಾಯ.
ಯಾರು ಅರ್ಜಿ ಸಲ್ಲಿಸಲು ಅರ್ಹರು?
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘ ಅಥವಾ ಪ್ರಗತಿಬಂಧು ಸಂಘದ ಸದಸ್ಯರ ಕುಟುಂಬದ ಹೆಣ್ಣು ಮಕ್ಕಳು ಅರ್ಹರು. ಸಂಘವು 30-06-2025ಕ್ಕಿಂತ ಮೊದಲು ಪ್ರಾರಂಭವಾಗಿರಬೇಕು ಮತ್ತು ಕಂತು ಬಾಕಿ ಇಲ್ಲದ ಸಕ್ರಿಯ ಸಂಘವಾಗಿರಬೇಕು. ಕುಟುಂಬದ ಒಬ್ಬ ವಿದ್ಯಾರ್ಥಿನಿಗೆ ಮಾತ್ರ ಹೊಸ ಅರ್ಜಿ ಸಲ್ಲಿಸಲು ಅವಕಾಶವಿದೆ. 01-04-2026ರ ನಂತರ ಕಾಲೇಜಿಗೆ ದಾಖಲಾದ ಮೊದಲ ಸೆಮಿಸ್ಟರ್ನ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಅಂಗವಿಕಲರು, ಅನಾಥರು ಹಾಗೂ ಏಕಪೋಷಕರನ್ನು ಹೊಂದಿರುವ ವಿದ್ಯಾರ್ಥಿಗಳು ಯೋಜನಾಧಿಕಾರಿಗಳ ಶಿಫಾರಸಿನೊಂದಿಗೆ ಅರ್ಜಿ ಸಲ್ಲಿಸಬಹುದು. ಬಿ.ಪಿ.ಎಲ್. ಕುಟುಂಬಗಳಿಗೆ ಆದ್ಯತೆ ಇದೆ.
ಇದನ್ನೂ ಓದಿ: Pension Status Check: ಪಿಂಚಣಿ ಹಣ ಜಮಾ ಆರಂಭ! ವೃದ್ಧರು, ವಿಧವೆಯರು, ಅಂಗವಿಕಲರು ನಿಮ್ಮ ಖಾತೆ ಹೀಗೆ ಪರಿಶೀಲಿಸಿ
ಯಾವ ಕೋರ್ಸ್ಗಳಿಗೆ ವಿದ್ಯಾರ್ಥಿವೇತನ ಸಿಗುತ್ತದೆ?
MBBS, B.Sc Horticulture, Diploma, BAMS, M.Ed, BDS, BHMS, B.V.Sc, B.Pharm, BNYS, D.Pharm, Lab Technician, Pharm.D, Physiotherapy, B.Sc Forestry, Paramedical, B.Sc Fisheries, Nursing, B.Sc Agriculture, B.E, B.Tech, ITI, MBA, B.Ed, D.Ed, B.V.A, B.Voc, LLB (3 ಮತ್ತು 5 ವರ್ಷ), B.Sc Forensic Science, CA Articleship, B.Sc Nursing ಮತ್ತು B.Sc Lab Technician ಸೇರಿದಂತೆ ತಾಂತ್ರಿಕ ಹಾಗೂ ವೃತ್ತಿಪರ ಕೋರ್ಸ್ಗಳಿಗೆ ಅವಕಾಶವಿದೆ. ಆನ್ಲೈನ್ ಕೋರ್ಸ್ಗಳು, ಓಪನ್ ಯೂನಿವರ್ಸಿಟಿ ಕೋರ್ಸ್ಗಳು ಹಾಗೂ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಕೋರ್ಸ್ಗಳಿಗೆ ಈ ವಿದ್ಯಾರ್ಥಿವೇತನ ಅನ್ವಯಿಸುವುದಿಲ್ಲ.
ಇದನ್ನೂ ಓದಿ: ಬರ ಪರಿಹಾರ ₹5,000: ಎಲ್ಲ ಅರ್ಹ ರೈತ ಕುಟುಂಬಗಳ ಖಾತೆಗೆ ಹಣ ಜಮೆ! ಪರಮೇಶ್ವರ್ ಮಹತ್ವದ ಘೋಷಣೆ
ಅರ್ಜಿಗೆ ಬೇಕಾದ ದಾಖಲೆಗಳು.?
ಸುಜ್ಞಾನನಿಧಿ ವಿದ್ಯಾರ್ಥಿವೇತನದ ಮನವಿ ಪತ್ರ (ನಮೂನೆ-1), ಕಾಲೇಜಿನ ದೃಢೀಕರಣ ಪತ್ರ ಮತ್ತು ಶುಲ್ಕ ಪಾವತಿ ರಸೀದಿ (ನಮೂನೆ-2), SSLC ಅಂಕಪಟ್ಟಿ, ಬ್ಯಾಂಕ್ ಪಾಸ್ಬುಕ್ ಪ್ರತಿ, ಆಧಾರ್ ಕಾರ್ಡ್, ಕುಟುಂಬದ ಪಡಿತರ ಚೀಟಿ, ಪೋಷಕರ ಸಂಘದ ನಿರ್ಣಯ ಪುಸ್ತಕ ಹಾಗೂ ಹಿಂದಿನ ವರ್ಷದ ಅಂಕಪಟ್ಟಿ ಅಗತ್ಯವಿದೆ.
ಅರ್ಜಿ ಸಲ್ಲಿಸುವ ವಿಧಾನ.?
ಮೊದಲು ಕುಟುಂಬವು ಸ್ವಸಹಾಯ ಸಂಘ ಅಥವಾ ಪ್ರಗತಿಬಂಧು ಸಂಘದ ಸದಸ್ಯರಾಗಿರಬೇಕು. ನಂತರ ಸಂಘದ ವ್ಯಾಪ್ತಿಗೆ ಬರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾಜೆಕ್ಟ್ ಕಚೇರಿಯನ್ನು ಸಂಪರ್ಕಿಸಿ. ಅಲ್ಲಿ ನಮೂನೆ-1 ಮತ್ತು ನಮೂನೆ-2 ಪಡೆದುಕೊಂಡು, ವಿದ್ಯಾರ್ಥಿನಿಯ ಹೆಸರು, ವಿಳಾಸ, ಕಾಲೇಜು ವಿವರ, ಕೋರ್ಸ್ ಮತ್ತು ಬ್ಯಾಂಕ್ ಖಾತೆ ಮಾಹಿತಿಯನ್ನು ಭರ್ತಿ ಮಾಡಿ.
ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಸಲ್ಲಿಸಬೇಕು. ಅಧಿಕಾರಿಗಳು ಪರಿಶೀಲಿಸಿ ಮುಂದಿನ ಪ್ರಕ್ರಿಯೆ ಕೈಗೊಳ್ಳುತ್ತಾರೆ.
ಇದನ್ನೂ ಓದಿ: Vijayapura Court Recruitment 2026: ವಿಜಯಪುರ ಜಿಲ್ಲಾ ನ್ಯಾಯಾಲಯ ನೇಮಕಾತಿ 2026
ಪ್ರಮುಖ ನಿಯಮಗಳು ಮತ್ತು ದಿನಾಂಕಗಳು.?
ಹೊಸ ಅರ್ಜಿಗಳನ್ನು ವಿದ್ಯಾರ್ಥಿನಿಯರು ಮಾತ್ರ ಸಲ್ಲಿಸಬಹುದು. ಒಂದು ವಿದ್ಯಾರ್ಥಿನಿಗೆ ಒಂದು ಕೋರ್ಸ್ಗೆ ಮಾತ್ರ ಅವಕಾಶ. ಮೊದಲ ವರ್ಷಕ್ಕೆ ಅರ್ಜಿ ಸಲ್ಲಿಸದೆ ನೇರವಾಗಿ ಎರಡನೇ ವರ್ಷಕ್ಕೆ ಅರ್ಜಿ ಸಲ್ಲಿಸಲಾಗುವುದಿಲ್ಲ. ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ನವೀಕರಣಕ್ಕೆ ಅವಕಾಶವಿಲ್ಲ. ವರ್ಷಕ್ಕೆ 10,000 ರೂಪಾಯಿಗಿಂತ ಹೆಚ್ಚಿನ ವಿದ್ಯಾರ್ಥಿವೇತನವನ್ನು ಇತರೆಡೆಯಿಂದ ಪಡೆಯುತ್ತಿರುವವರಿಗೆ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
- ಅರ್ಜಿ ಸಲ್ಲಿಕೆ ಪ್ರಾರಂಭ: 15-10-2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-03-2027
ಹೆಚ್ಚಿನ ಮಾಹಿತಿಗಾಗಿ 9591770660 ಅಥವಾ 6366358320 ಸಂಖ್ಯೆಗಳನ್ನು ಸಂಪರ್ಕಿಸಬಹುದು. ಅರ್ಹ ವಿದ್ಯಾರ್ಥಿನಿಯರು ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಬಳಸಿಕೊಳ್ಳಬೇಕು. ಶಿಕ್ಷಣವೇ ಭವಿಷ್ಯದ ಬುನಾದಿ.
Application last date: 31 March 2027
ಇದೇ ರೀತಿ ನಿಮಗೆ ಪ್ರತಿದಿನ ಹೊಸ ಮಾಹಿತಿಗಳು ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಬೇಕಾದರೆ ನೀವು ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಅಥವಾ ಟೆಲಿಗ್ರಾಂ ಚಾನೆಲ್ ಅಥವಾ ಇತರೆ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ಗಳಲ್ಲಿ ಫಾಲೋ ಮಾಡಿ
1 thought on “ಸುಜ್ಞಾನನಿಧಿ ವಿದ್ಯಾರ್ಥಿವೇತನ 2026-27: ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ₹400 ರಿಂದ ₹1000 ಸ್ಕಾಲರ್ಶಿಪ್ – ಇಂದೇ ಅರ್ಜಿ ಸಲ್ಲಿಸಿ!”