Bank of Baroda Recruitment 2026: ಬ್ಯಾಂಕ್ ಆಫ್ ಬರೋಡಾ 2,482 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ – ಕರ್ನಾಟಕದಲ್ಲಿ 418 ಹುದ್ದೆಗಳು, ಸೆಪ್ಟೆಂಬರ್ 7 ಕೊನೆಯ ದಿನಾಂಕ
ಬ್ಯಾಂಕ್ ಆಫ್ ಬರೋಡಾ (Bank of Baroda) ದೇಶಾದ್ಯಂತ 2,482 ಲೋಕಲ್ ಬ್ಯಾಂಕ್ ಆಫೀಸರ್ (Local Bank Officer – LBO) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಜೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್ ಸ್ಕೇಲ್-I (JMG/S-I) ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತಿದೆ.
ಬ್ಯಾಂಕಿಂಗ್ ಅನುಭವ ಹೊಂದಿರುವ ಪದವೀಧರರಿಗೆ ಇದು ಉತ್ತಮ ಅವಕಾಶವಾಗಿದೆ. ಆನ್ಲೈನ್ ಅರ್ಜಿ ಪ್ರಕ್ರಿಯೆ ಆಗಸ್ಟ್ 18ರಿಂದ ಆರಂಭವಾಗಿದ್ದು, ಸೆಪ್ಟೆಂಬರ್ 7, 2026ರೊಳಗೆ ಅರ್ಜಿ ಸಲ್ಲಿಸಬೇಕು.

ನೇಮಕಾತಿ ವಿವರಗಳು ಮತ್ತು ರಾಜ್ಯವಾರು ಹುದ್ದೆಗಳು
ಈ ನೇಮಕಾತಿಯಲ್ಲಿ ಹೊಸ ಹುದ್ದೆಗಳು ಹಾಗೂ ಹಿಂದಿನ ನೇಮಕಾತಿಯಲ್ಲಿ ಭರ್ತಿಯಾಗದೆ ಉಳಿದ ಹುದ್ದೆಗಳು ಸೇರಿವೆ. ಒಟ್ಟು 20 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅಭ್ಯರ್ಥಿಗಳು ಕೇವಲ ಒಂದು ರಾಜ್ಯಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದು.
ಕರ್ನಾಟಕದಲ್ಲಿ ಒಟ್ಟು 418 ಹುದ್ದೆಗಳಿವೆ. ಗುಜರಾತ್ನಲ್ಲಿ ಅತಿ ಹೆಚ್ಚು 1,185 ಹುದ್ದೆಗಳು ಇದ್ದು, ಮಹಾರಾಷ್ಟ್ರದಲ್ಲಿ 218, ತಮಿಳುನಾಡಿನಲ್ಲಿ 132, ಒಡಿಶಾದಲ್ಲಿ 100, ಆಂಧ್ರಪ್ರದೇಶದಲ್ಲಿ 80 ಹುದ್ದೆಗಳು ಲಭ್ಯವಿವೆ.
ಇತರೆ ರಾಜ್ಯಗಳಲ್ಲೂ ಹುದ್ದೆಗಳನ್ನು ಮೀಸಲಿಡಲಾಗಿದೆ. ವರ್ಗವಾರು ಮೀಸಲಾತಿ ಪ್ರಕಾರ SC ವರ್ಗಕ್ಕೆ 358, STಗೆ 240, OBCಗೆ 600, EWSಗೆ 303 ಮತ್ತು ಸಾಮಾನ್ಯ ವರ್ಗಕ್ಕೆ 981 ಹುದ್ದೆಗಳು ಇವೆ.
ಅರ್ಹತಾ ಮಾನದಂಡಗಳು
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು.
ಅನುಭವ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಎರಡನೇ ಶೆಡ್ಯೂಲ್ನಲ್ಲಿ ಪಟ್ಟಿ ಮಾಡಿರುವ ಯಾವುದೇ ನಿಗದಿತ ವಾಣಿಜ್ಯ ಬ್ಯಾಂಕಿನಲ್ಲಿ (Scheduled Commercial Bank) ಕನಿಷ್ಠ ಒಂದು ವರ್ಷದ ಅಧಿಕಾರಿ ಹಂತದ ಸೇವಾನುಭವ ಕಡ್ಡಾಯ. ಅನುಭವವು ಪದವಿ ಪಡೆದ ನಂತರದ್ದಾಗಿರಬೇಕು.
ಸ್ಥಳೀಯ ಭಾಷಾ ಜ್ಞಾನ: ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯನ್ನು ಓದಲು, ಬರೆಯಲು, ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ಸಮರ್ಥರಾಗಿರಬೇಕು. ಕರ್ನಾಟಕಕ್ಕೆ ಅರ್ಜಿ ಸಲ್ಲಿಸುವವರಿಗೆ ಕನ್ನಡ ಭಾಷಾ ಪ್ರಾವೀಣ್ಯತೆ ಅಗತ್ಯ.
ವಯೋಮಿತಿ: ಆಗಸ್ಟ್ 1, 2026ರಂದು ವಯಸ್ಸು 21ರಿಂದ 30 ವರ್ಷಗಳ ನಡುವೆ ಇರಬೇಕು. SC/ST ಅಭ್ಯರ್ಥಿಗಳಿಗೆ 5 ವರ್ಷ, OBCಗೆ 3 ವರ್ಷ ಮತ್ತು PwBD ಅಭ್ಯರ್ಥಿಗಳಿಗೆ ಗರಿಷ್ಠ 5 ವರ್ಷಗಳ ವಯೋಮಿತಿ ಸಡಿಲಿಕೆ ಲಭ್ಯವಿದೆ.
ವೇತನ ಮತ್ತು ಅರ್ಜಿ ಶುಲ್ಕ
ಆಯ್ಕೆಯಾದ ಅಭ್ಯರ್ಥಿಗಳಿಗೆ ಮೂಲ ವೇತನ ₹48,480ರಿಂದ ಆರಂಭವಾಗಿ ₹85,920ರವರೆಗೆ ಇರುತ್ತದೆ. ಇದರ ಜೊತೆಗೆ ಬ್ಯಾಂಕ್ ನಿಯಮಗಳ ಪ್ರಕಾರ ವಿವಿಧ ಭತ್ಯೆಗಳು ಲಭ್ಯವಾಗುತ್ತವೆ. ಪ್ರೊಬೇಷನ್ ಅವಧಿ 12 ತಿಂಗಳು.
ಅರ್ಜಿ ಶುಲ್ಕ: ಸಾಮಾನ್ಯ, OBC ಮತ್ತು EWS ಅಭ್ಯರ್ಥಿಗಳಿಗೆ ₹850. SC, ST, PwBD, ESM ಮತ್ತು ಮಹಿಳಾ ಅಭ್ಯರ್ಥಿಗಳಿಗೆ ₹175. ಶುಲ್ಕವನ್ನು ಆನ್ಲೈನ್ ಮೂಲಕ ಮಾತ್ರ ಪಾವತಿಸಬೇಕು. ಶುಲ್ಕ ಪಾವತಿಯಾದ ನಂತರವೇ ಅರ್ಜಿ ಪ್ರಕ್ರಿಯೆ ಪೂರ್ಣವಾಗುತ್ತದೆ.
ಆಯ್ಕೆ ಪ್ರಕ್ರಿಯೆ
ಆಯ್ಕೆಯು ಹಲವು ಹಂತಗಳಲ್ಲಿ ನಡೆಯುತ್ತದೆ. ಮೊದಲು ಆನ್ಲೈನ್ ಲಿಖಿತ ಪರೀಕ್ಷೆ. ನಂತರ ಸೈಕೋಮೆಟ್ರಿಕ್ ಪರೀಕ್ಷೆ, ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT), ಗುಂಪು ಚರ್ಚೆ (GD) ಮತ್ತು ವೈಯಕ್ತಿಕ ಸಂದರ್ಶನ. ಅಂತಿಮವಾಗಿ ದಾಖಲೆಗಳ ಪರಿಶೀಲನೆ ನಡೆಯುತ್ತದೆ.
ಆನ್ಲೈನ್ ಪರೀಕ್ಷಾ ವಿನ್ಯಾಸ: ಒಟ್ಟು 120 ನಿಮಿಷಗಳಲ್ಲಿ 120 ಬಹು ಆಯ್ಕೆ ಪ್ರಶ್ನೆಗಳು. ಒಟ್ಟು 120 ಅಂಕಗಳು. ವಿಭಾಗಗಳು – ಇಂಗ್ಲಿಷ್, ಬ್ಯಾಂಕಿಂಗ್ ಜ್ಞಾನ, ಸಾಮಾನ್ಯ/ಆರ್ಥಿಕ ಜಾಗೃತಿ ಹಾಗೂ ತಾರ್ಕಿಕ ಮತ್ತು ಪರಿಮಾಣಾತ್ಮಕ ಆಪ್ಟಿಟ್ಯೂಡ್. ಪ್ರತಿ ವಿಭಾಗಕ್ಕೆ 30 ಪ್ರಶ್ನೆಗಳು. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳ ಋಣಾತ್ಮಕ ಗುರುತು.
ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ದಿನಾಂಕಗಳು.?
ಅರ್ಜಿ ಸಲ್ಲಿಸುವುದು ಕೇವಲ ಆನ್ಲೈನ್ ಮೂಲಕ ಮಾತ್ರ. ಹಂತಗಳು ಈ ರೀತಿ:
1. ಬ್ಯಾಂಕ್ ಆಫ್ ಬರೋಡಾ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
2. Career ವಿಭಾಗದಲ್ಲಿ Current Opportunities ಆಯ್ಕೆ ಮಾಡಿ.
3. Local Bank Officer ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ನೇರ ಅರ್ಜಿ ಲಿಂಕ್ ಬಳಸಿ.
4. ಹೊಸ ನೋಂದಣಿ ಮಾಡಿ, ವೈಯಕ್ತಿಕ, ಶೈಕ್ಷಣಿಕ ಮತ್ತು ಅನುಭವದ ವಿವರಗಳನ್ನು ಭರ್ತಿ ಮಾಡಿ.
5. ಫೋಟೋ, ಸಹಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
6. ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ.
ಪ್ರಮುಖ ದಿನಾಂಕಗಳು:
ಅರ್ಜಿ ಪ್ರಾರಂಭ: ಆಗಸ್ಟ್ 18, 2026
ಅರ್ಜಿ ಮತ್ತು ಶುಲ್ಕ ಪಾವತಿ ಕೊನೆಯ ದಿನಾಂಕ: ಸೆಪ್ಟೆಂಬರ್ 7, 2026
ಅರ್ಹತಾ ಕಟ್-ಆಫ್ ದಿನಾಂಕ: ಆಗಸ್ಟ್ 1, 2026
ಅರ್ಜಿ ಲಿಂಕ್: https://ibpsreg.ibps.in/bobjul26/
ಅಧಿಕೃತ ಅಧಿಸೂಚನೆ PDF: https://bankofbaroda.bank.in/-/media/Project/BOB/CountryWebsites/India/Career/2026/26-08/Advertisement-18-04.pdf
ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ಆಫ್ ಬರೋಡಾ ಅಧಿಕೃತ ವೆಬ್ಸೈಟ್ bankofbaroda.bank.in ನಲ್ಲಿ Career ವಿಭಾಗವನ್ನು ನೋಡಿ.
ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಎಲ್ಲಾ ನಿಯಮಗಳನ್ನು ಅರ್ಥಮಾಡಿಕೊಂಡು ಅರ್ಜಿ ಸಲ್ಲಿಸುವುದು ಉತ್ತಮ. ಯಾವುದೇ ತಪ್ಪು ಮಾಹಿತಿ ನೀಡಿದರೆ ಅರ್ಜಿ ರದ್ದಾಗುವ ಸಾಧ್ಯತೆ ಇದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಯುವ ಅಭ್ಯರ್ಥಿಗಳಿಗೆ ಈ ನೇಮಕಾತಿ ಉತ್ತಮ ಭವಿಷ್ಯ ನೀಡುವ ಅವಕಾಶವಾಗಿದೆ. ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿ, ಅವಕಾಶವನ್ನು ಬಳಸಿಕೊಳ್ಳಿ.