ಜಾತಿ ಆದಾಯ ಪ್ರಮಾಣ ಪತ್ರ download: ಕರ್ನಾಟಕದಲ್ಲಿ ಜಾತಿ ಮತ್ತು ನಿವಾಸಿ ಪ್ರಮಾಣಪತ್ರ ಈಗ ಮನೆ ಬಾಗಿಲಿಗೆ – ಸರ್ಕಾರದ ಹೊಸ ಅಭಿಯಾನ
ಕರ್ನಾಟಕ ಸರ್ಕಾರವು ನಾಗರಿಕರಿಗೆ ದೊಡ್ಡ ಪರಿಹಾರ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
ಜಾತಿ ಪ್ರಮಾಣಪತ್ರ ಮತ್ತು ಶಾಶ್ವತ ನಿವಾಸ ಪ್ರಮಾಣಪತ್ರಕ್ಕಾಗಿ ಕಚೇರಿ ಕಚೇರಿ ಅಲೆದಾಡುವ ಸಂಕಷ್ಟ ಇನ್ನು ಮುಂದೆ ತಪ್ಪಲಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಜುಲೈ 20, 2026ರಂದು ವಿಧಾನಸೌಧದಲ್ಲಿ ಕಂದಾಯ ಇಲಾಖೆಯ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದರು.
ಇದರಿಂದ ರಾಜ್ಯದಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಉಚಿತವಾಗಿ ದಾಖಲೆಗಳು ಮನೆ ಬಾಗಿಲಿಗೆ ತಲುಪಲಿವೆ.

ಮನೆ ಮನೆಗೆ ಉಚಿತ ಜಾತಿ ಪ್ರಮಾಣಪತ್ರ ವಿತರಣೆ.?
ರಾಜ್ಯಾದ್ಯಂತ 4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣಪತ್ರಗಳನ್ನು ಗ್ರಾಮವಾರು ವಿಂಗಡಿಸಿ ಪಿಡಿಎಫ್ ರೂಪದಲ್ಲಿ ಜಿಲ್ಲಾಧಿಕಾರಿಗಳಿಗೆ ಒದಗಿಸಲಾಗಿದೆ.
ಇವುಗಳನ್ನು ಮುದ್ರಿಸಿ ಸಾರ್ವಜನಿಕರ ಮನೆಗಳಿಗೆ ನೇರವಾಗಿ ತಲುಪಿಸುವ ಕಾರ್ಯ ಪ್ರಗತಿಯಲ್ಲಿದೆ. ಇದು ದೇಶದಲ್ಲೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಮನೆ ಬಾಗಿಲಿಗೆ ಪ್ರಮಾಣಪತ್ರ ವಿತರಿಸುವ ಕ್ರಮವಾಗಿದೆ ಎಂದು ಸರ್ಕಾರ ಹೇಳುತ್ತಿದೆ.
ಈಗಾಗಲೇ ಸುಮಾರು 57 ಲಕ್ಷಕ್ಕೂ ಹೆಚ್ಚು ಜಾತಿ ಪ್ರಮಾಣಪತ್ರಗಳನ್ನು ಮೊಬೈಲ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಲಾಗಿದೆ.
ವಾಟ್ಸ್‌ಆ್ಯಪ್ ಅಥವಾ ಎಸ್‌ಎಂಎಸ್ ಮೂಲಕ ನೇರ ಲಿಂಕ್ ಕಳುಹಿಸಿ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ನಾಗರಿಕರು ತಮ್ಮ ಆರ್‌ಡಿ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ಬಳಸಿ ಉಚಿತವಾಗಿ ಡೌನ್‌ಲೋಡ್ ಮಾಡಬಹುದು.
ಡಿಜಿಟಲ್ ಡೌನ್‌ಲೋಡ್ ಮತ್ತು ಸಹಾಯ ಕೇಂದ್ರಗಳು.?
ಉಚಿತ ಡೌನ್‌ಲೋಡ್‌ಗಾಗಿ ವಿಶೇಷ ವೆಬ್‌ಸೈಟ್ ತೆರೆಯಲಾಗಿದೆ. ಅಲ್ಲದೆ ಪ್ರತಿ ಹೋಬಳಿ ಮಟ್ಟದಲ್ಲಿ ಉಚಿತ ಮುದ್ರಣದ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ನಾಡಕಚೇರಿ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸಹ ಸಹಾಯ ಲಭ್ಯವಿದೆ. ಇದರಿಂದ ಹಳ್ಳಿ ಮತ್ತು ನಗರದ ಜನರಿಗೆ ಸಮಾನ ಅನುಕೂಲವಾಗಲಿದೆ.
ಶಾಶ್ವತ ನಿವಾಸ ಪ್ರಮಾಣಪತ್ರ ಸೇವೆಗೆ ಚಾಲನೆ.?
ಜೊತೆಗೆ ಶಾಶ್ವತ ನಿವಾಸ ಪ್ರಮಾಣಪತ್ರ (ಪಿಆರ್‌ಸಿ) ಸೇವೆಗೂ ಆದ್ಯತೆಯ ಮೇರೆಗೆ ಚಾಲನೆ ನೀಡಲಾಗಿದೆ. ಇದು ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅಥವಾ ದೃಢೀಕರಿಸಲು ಉಪಯುಕ್ತವಾದ 11 ದಾಖಲೆಗಳಲ್ಲಿ ಒಂದಾಗಿದೆ.
ಕರ್ನಾಟಕದಲ್ಲಿ ಜನಿಸಿದವರು, ವಿವಾಹಿತರು, 10 ವರ್ಷಗಳಿಗೂ ಹೆಚ್ಚು ಕಾಲ ನಿರಂತರ ನಿವಾಸ ಹೊಂದಿರುವವರು ಅಥವಾ ರಾಜ್ಯದಲ್ಲಿ ಉದ್ಯೋಗ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಉಪ ತಹಶೀಲ್ದಾರರಿಗೆ ಈ ಪ್ರಮಾಣಪತ್ರ ನೀಡುವ ಅಧಿಕಾರ ನೀಡಲಾಗಿದೆ.
ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ. ನಾಗರಿಕರು ಅಗತ್ಯ ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವುದು ಮತ್ತು ಪಾರದರ್ಶಕ, ಏಕರೂಪದ ವ್ಯವಸ್ಥೆ ಒದಗಿಸುವುದು.
ಇದರಿಂದ ಶಿಕ್ಷಣ, ಉದ್ಯೋಗ, ಸರ್ಕಾರಿ ಯೋಜನೆಗಳು ಮತ್ತು ಮತದಾರರ ಹಕ್ಕುಗಳನ್ನು ರಕ್ಷಿಸಲು ಸಹಾಯವಾಗಲಿದೆ.
ಹೇಗೆ ಪಡೆಯುವುದು ಮತ್ತು ಅರ್ಜಿ ಸಲ್ಲಿಸುವುದು?
ಈಗಾಗಲೇ ಜಾತಿ ಪ್ರಮಾಣಪತ್ರ ಹೊಂದಿರುವವರು ಉಚಿತ ಡೌನ್‌ಲೋಡ್ ಪೋರ್ಟಲ್‌ಗೆ ಭೇಟಿ ನೀಡಿ ಪಡೆಯಬಹುದು:
https://nadakacheri.karnataka.gov.in/AJSKCertificates
ಶಾಶ್ವತ ನಿವಾಸ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಲು:
https://ajsk.karnataka.gov.in/nk5_online/Login/Login_Public
ಅಥವಾ ಹತ್ತಿರದ ನಾಡಕಚೇರಿ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ. ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ. ಪರಿಶೀಲನೆ ನಂತರ ಪ್ರಮಾಣಪತ್ರ ನೀಡಲಾಗುತ್ತದೆ.
ಈ ಅಭಿಯಾನದಿಂದ ಕರ್ನಾಟಕದ ಲಕ್ಷಾಂತರ ಜನರಿಗೆ ಸಮಯ, ಹಣ ಮತ್ತು ಶ್ರಮ ಉಳಿಯಲಿದೆ. ಹಿಂದೆ ಕಚೇರಿ ಅಲೆದಾಟದಿಂದ ಬೇಸತ್ತಿದ್ದರು ಈಗ ಮನೆಯಲ್ಲೇ ಕುಳಿತು ದಾಖಲೆ ಪಡೆಯುವ ಅವಕಾಶ ಸಿಕ್ಕಿದೆ..
ಅರ್ಹರೆಲ್ಲರೂ ತಕ್ಷಣ ಅಗತ್ಯ ಮಾಹಿತಿ ಸಂಗ್ರಹಿಸಿ ಪ್ರಮಾಣಪತ್ರ ಪಡೆಯುವುದು ಉತ್ತಮ.
LPG Cylinder Price: LPG ಗ್ಯಾಸ್ ಸಿಲಿಂಡರ್ ದರ ಇಳಿಕೆ – ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಹೊಸ ಬೆಲೆ ಇಲ್ಲಿದೆ