Jio Recharge Plan: ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ – ಕೇವಲ ₹448 ಗೆ 84 ದಿನ ಮಾನ್ಯತೆ ರಿಚಾರ್ಜ್ ಪ್ಲಾನ್ ಬಿಡುಗಡೆ
ನಮಸ್ಕಾರ ಗೆಳೆಯರೇ, ನಮ್ಮ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಒಂದು ಹೊಸ ಕ್ರಾಂತಿ ತಂದ ಟೆಲಿಕಾಂ ಸಂಸ್ಥೆ ಯಾವುದು ಅಂದರೆ ಅದು ತಕ್ಷಣ ನೆನಪಾಗುವುದೇ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಸಂಸ್ಥೆ, ಈ ಒಂದು ಸಂಸ್ಥೆ ನಮ್ಮ ಭಾರತ ದೇಶದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಒಂದು ಹೊಸ ತಂದಿದೆ ಎಂದು ಹೇಳಬಹುದು.
ಇಷ್ಟೇ ಅಲ್ಲದೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಜನರು ರಿಲಯನ್ಸ್ ಜಿಯೋ ಟೆಲಿಕಾಂ ಸೇವೆಗಳನ್ನು ಬಳಸುತ್ತಿದ್ದಾರೆ. ಅಂತವರಿಗೆ ಇದೀಗ ಮತ್ತೊಂದು ಸಿಹಿ ಸುದ್ದಿ ಅದು ಏನಪ್ಪಾ ಅಂದರೆ ಅತ್ಯಂತ ಕಡಿಮೆ ಬೆಲೆಗೆ ಅಂದರೆ ಕೇವಲ 448 ರೂಪಾಯಿಗೆ 84 ದಿನ ಮಾನ್ಯತೆ ಹೊಂದಿರುವ ರಿಚಾರ್ಜ್ ಯೋಜನೆಗಳನ್ನು ಇದೀಗ ಪರಿಚಯ ಮಾಡಿದೆ.
ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಜಿಯೋ ಬಿಡುಗಡೆ ಮಾಡಿರುವ ಈ 448 ರೂಪಾಯಿ ರಿಚಾರ್ಜ್ ಯೋಜನೆಗೆ ಸಂಬಂಧಿಸಿದೆ ಸಂಪೂರ್ಣ ಮಾಹಿತಿ ಹಾಗೂ ಈ ಯೋಜನೆಯಿಂದ ಗ್ರಾಹಕರಿಗೆ ಏನು ಉಪಯೋಗವಾಗುತ್ತದೆ ಮತ್ತು ಇತರ ಪ್ರಯೋಜನಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ
ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ.?
ಹೌದು ಗೆಳೆಯರೇ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಜನರು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸೇವೆಗಳನ್ನು ಬಳಸುತ್ತಿದ್ದಾರೆ. ಹೌದು ಗೆಳೆಯರೇ, ಈ ಒಂದು ಸಂಸ್ಥೆ ಬಿಡುಗಡೆ ಮಾಡಿರುವ ಡೇಟಾ ಪ್ರಕಾರ ಹಾಗೂ ಇತರೆ ಡೇಟಾಗಳ ಮೂಲಗಳ ಮಾಹಿತಿ ಪ್ರಕಾರ ನಮ್ಮ ಭಾರತ ದೇಶದಲ್ಲಿ ಈ ಸಂಸ್ಥೆ ಸುಮಾರು 240 ಮಿಲಿಯನ್ ಗಿಂತ ಹೆಚ್ಚು ಆಕ್ಟಿವ್ ಬಳಕೆದಾರರನ್ನು ಹೊಂದಿದೆ. ಅಷ್ಟೇ ಅಲ್ಲದೆ ಇದು ಪ್ರಪಂಚದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಅತಿ ಹೆಚ್ಚು ಆಕ್ಟಿವ್ ಗ್ರಾಹಕರನ್ನು ಹೊಂದಿರುವ ಸಂಸ್ಥೆಯಾಗಿದೆ

ನಮ್ಮ ಭಾರತ ದೇಶದಲ್ಲಿ 2016ರಲ್ಲಿ ಮುಕೇಶ್ ಅಂಬಾನಿಯವರು ಜಿಯೋ ಟೆಲಿಕಾಂ ಸೇವೆಗಳನ್ನು ಜಾರಿಗೆ ತಂದರು. ರಿಲಯನ್ಸ್ ಜಿಯೋ ಮೂಲಕ ನಮ್ಮ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಅಲ್ಲಿವರೆಗೂ ಇದ್ದ ಅತಿ ಹೆಚ್ಚು ಡೇಟಾ ಪ್ರೈಸ್ ಹಾಗೂ ಕರೆಗಳ ಲಿಮಿಟ್ ಈ ಎಲ್ಲಾ ದರಗಳನ್ನು ಉಚಿತವಾಗಿ ಗ್ರಾಹಕರಿಗೆ ನೀಡಲು ಪ್ರಾರಂಭಿಸಿದರು.
ಹೌದು ಗೆಳೆಯರೇ 2016ರಲ್ಲಿ reliance jio ತನ್ನ ಗ್ರಾಹಕರಿಗೆ ಒಂದು ವರ್ಷಗಳ ಕಾಲ ಉಚಿತ ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳನ್ನು ಗ್ರಹಕರಿಗೆ ನೀಡಿತು ಇದು ಟೆಲಿಕಾಂ ಕ್ಷೇತ್ರದಲ್ಲಿ ಒಂದು ಹೊಸ ಇತಿಹಾಸ ಸೃಷ್ಟಿ ಮಾಡಿದ್ದು ಅದೇ ರೀತಿ ಅನೇಕ ಟೆಲಿಕಾಂ ಸಂಸ್ಥೆಗಳು ಪೈಪೋಟಿ ನೀಡಲಾಗದೆ ಮುಚ್ಚಿ ಹೋದವು ಇದೀಗ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಗ್ರಾಹಕರು ಹೊಂದಿರುವ ಟೆಲಿಕಾಂ ಸಂಸ್ಥೆಗಳು ಯಾವು ಅಂದರೆ ಪ್ರಸ್ತುತ ಏರ್ಟೆಲ್ ಮತ್ತು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಸಂಸ್ಥೆ ಇದೆ
ಇದೀಗ ಈ ಎರಡು ಸಂಸ್ಥೆಗಳು ತಮ್ಮ ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಅತ್ಯಂತ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡುವೆ ಅದರಲ್ಲಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಇದೀಗ ತನ್ನ ಗ್ರಹಕರಿಗೆ ಕೇವಲ 448 ರೂಪಾಯಿಗೆ 84 ದಿನ ವ್ಯಾಲಿಡಿಟಿ ಇಟ್ಟುಕೊಂಡಿರುವ ರಿಚಾರ್ಜ್ ಯೋಜನೆ ಬಿಡುಗಡೆ ಮಾಡಿದೆ ಇದಕ್ಕೆ ಸಂಬಂಧಿಸಿದ ವಿವರ ತಿಳಿದುಕೊಳ್ಳೋಣ
ರಿಲಯನ್ಸ್ ಜಿಯೋ ಕೇವಲ ರೂ.448 ಗೆ 84 ದಿನ ಮಾನ್ಯತೆ.?
ಹೌದು ಗೆಳೆಯರೇ ಮುಕೇಶ್ ಅಂಬಾನಿ ಹೊಡಿತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಇದೀಗ ತನ್ನ ಗ್ರಾಹಕರಿಗಾಗಿ 448 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ ಬಿಡುಗಡೆ ಮಾಡಿದೆ ಈ ಒಂದು ಯೋಜನೆ ಗ್ರಾಹಕರಿಗೆ ಬರೋಬ್ಬರಿ 84 ದಿನಗಳ ವ್ಯಾಲಿಡಿಟಿ ನೀಡುತ್ತದೆ ಹಾಗೂ ಈ 84 ದಿನಗಳ ವರೆಗೆ ಗ್ರಾಹಕರು ಅನ್ಲಿಮಿಟೆಡ್ ಕರೆಗಳು ಅಂದರೆ ಒಂದು ಟೆಲಿಕಾಂ ನೆಟ್ವರ್ಕ್ ನಿಂದ ಅಥವಾ ತನ್ನದೇ ಟೆಲಿಕಾಂ ನೆಟ್ವರ್ಕ್ಗಳಿಗೆ ಎಷ್ಟು ಬೇಕಾದರೂ ಕರೆ ಮಾಡಲು ಅವಕಾಶ ಒದಗಿಸಿ ಕೊಡುತ್ತದೆ.
ಇದರ ಜೊತೆಗೆ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ 900 SMS ಉಚಿತವಾಗಿ ಬಳಸಿಕೊಳ್ಳಲು ಅವಕಾಶವಿದೆ ಆದರೆ ಈ ಒಂದು ಯೋಜನೆಯಲ್ಲಿ ಯಾವುದೇ ರೀತಿ ಡೇಟಾ ಸೌಲಭ್ಯ ಗ್ರಹಕರಿಗೆ ನೀಡಲಾಗುವುದಿಲ್ಲ. ಹಾಗಾಗಿ ನೀವು ಸಿಮ್ ಆಕ್ಟಿವ್ ಇಟ್ಟುಕೊಳ್ಳಲು ಅಥವಾ ಕರೆ ಮಾಡಲು ಸಿಮ್ ಮಾಡುವವರಿಗೆ ಇದು ಉತ್ತಮ ರಿಚಾರ್ಜ್ ಪ್ಲಾನ್ ಆಗಿದೆ.
ನೀವು ಡೇಟ ಬಳಕೆದಾರರು ಅಥವಾ ಇತರ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಬಳಕೆ ಮಾಡುತ್ತಿದ್ದರೆ ನಿಮಗೆ ಇದು ಸೂಕ್ತ ರಿಚಾರ್ಜ್ ಪ್ಲಾನ್ ಅಲ್ಲ ಹಾಗಾಗಿ ನೀವು ಡೇಟಾ ರಿಚಾರ್ಜ್ ಆಗಿ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಗಳನ್ನು ನೋಡುತ್ತಿದ್ದರೆ ನಾವು ಕೆಳಗಡೆ ಇನ್ನಷ್ಟು ರಿಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿ ತಿಳಿಸಿದ್ದೇವೆ.
ಜಿಯೋ ಟೆಲಿಕಾಂ ಗ್ರಾಹಕರಿಗೆ ಇನ್ನಷ್ಟು 84 ದಿನ ವ್ಯಾಲಿಡಿಟಿ ರಿಚಾರ್ಜ್ ಯೋಜನೆಗಳ ವಿವರ.?
₹799 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: ಜಿಯೋ ಗ್ರಾಹಕರಿಗೆ ಈ ಒಂದು ಯೋಜನೆ ಕಡಿಮೆ ಬೆಲೆಗೆ 84 ದಿನ ವ್ಯಾಲಿಡಿಟಿ ನೀಡುವುದರ ಜೊತೆಗೆ ಪ್ರತಿದಿನ 1.5 GB ಡೇಟಾ ಸಿಗುತ್ತದೆ ಅದೇ ರೀತಿ ಪ್ರತಿದಿನ 100 SMS ಹಾಗೂ ಅನ್ಲಿಮಿಟೆಡ್ ಕರೆಗಳು ಬಳಕೆ ಮಾಡಲು ಈ ಒಂದು ಯೋಜನೆ ಅವಕಾಶ ಮಾಡಿಕೊಡುತ್ತದೆ ಹಾಗಾಗಿ ಡೇಟಾ ಸೌಲಭ್ಯ ಬಳಕೆದಾರರಿಗೆ ಇದು ಉತ್ತಮ ರಿಚಾರ್ಜ್ ಯೋಜನೆಯಾಗಿದೆ
ಜಿಯೋ ಗ್ರಾಹಕರಿಗೆ ಇನ್ನೂ ಹಲವಾರು ರಿಚಾರ್ಜ್ ಯೋಜನೆಗಳು ಲಭ್ಯ ಇವೆ ಹಾಗಾಗಿ ನೀವು ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಮೈಜಿಯೋ ಅಪ್ಲಿಕೇಶನ್ ಗೆ ಇನ್ನಷ್ಟು ಹೆಚ್ಚಿನ ರಿಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು
ರಿಚಾರ್ಜ್ ಮಾಡುವುದು ಹೇಗೆ..?
ಮೇಲೆ ತಿಳಿಸಿದ ಯೋಜನೆಗಳನ್ನು ನೀವು ರಿಚಾರ್ಜ್ ಮಾಡಲು ಬಯಸಿದರೆ ನೀವು ಮೊದಲು ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ
ನಂತರ ರಿಚಾರ್ಜ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅಲ್ಲಿ ನೀವು 448 ರೂಪಾಯಿ ಅಥವಾ 799 ರೂಪಾಯಿ ಎಂದು ಸರ್ಚ್ ಬಾರ್ ನಲ್ಲಿ ಸರ್ಚ್ ಮಾಡಿ
ನಂತರ ಈ ರಿಚಾರ್ಜ್ ಯೋಜನೆಗಳು ನಿಮಗೆ ಕಾಣುತ್ತವೆ ಅದರ ಮೇಲೆ ಕ್ಲಿಕ್ ಮಾಡಿ ತುಂಬಾ ಸುಲಭವಾಗಿ UPI ಮೂಲಕ ಅಥವಾ ಫೋನ್ ಪೇ ಅಥವಾ ಗೂಗಲ್ ಪೇ ಇತರೆ ಆನ್ಲೈನ್ ಟ್ರಾನ್ಸಾಕ್ಷನ್ ಅಪ್ಲಿಕೇಶನ್ ಬಳಸಿಕೊಂಡು ಈ ಒಂದು ರಿಚಾರ್ಜ್ ಯೋಜನೆಯನ್ನು ರಿಚಾರ್ಜ್ ಮಾಡಿಕೊಳ್ಳಬಹುದು.
ಸ್ನೇಹಿತರೆ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಆಸಕ್ತಿ ಇದ್ದರೆ ತಕ್ಷಣ ನೀವು ನಮ್ಮ ವಾಟ್ಸಪ್ ಚಾನೆಲ್ ಸೇರಿಕೊಳ್ಳಬಹುದು