PM Ujjwala Scheme: ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್.! ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅರ್ಜಿ ಪ್ರಾರಂಭ – ಇಂದೇ ಅರ್ಜಿ ಸಲ್ಲಿಸಿ 

PM Ujjwala Scheme: ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್.! ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅರ್ಜಿ ಪ್ರಾರಂಭ – ಇಂದೇ ಅರ್ಜಿ ಸಲ್ಲಿಸಿ

ನಮಸ್ಕಾರ ಗೆಳೆಯರೇ ನಮ್ಮ ಕರ್ನಾಟಕದ ಮಹಿಳೆಯರಿಗೆ ಇದೀಗ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ ಕಡೆಯಿಂದ ನೀಡಲಾಗಿದೆ.

ಹೌದು ಗೆಳೆಯರೇ, ಇದೀಗ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಅರ್ಜಿ ಮತ್ತೆ ಪ್ರಾರಂಭವಾಗಿದೆ ಈ ಒಂದು ಯೋಜನೆಯ ಮೂಲಕ ಮಹಿಳೆಯರು ಉಚಿತವಾಗಿ LPG ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆದುಕೊಳ್ಳಬಹುದು ಜೊತೆಗೆ ಉಚಿತ ಗ್ಯಾಸ್ ಸ್ಟವ್ ಮತ್ತು ಸಿಲೆಂಡರ್ ಸಿಗುತ್ತದೆ

ಇಷ್ಟೇ ಅಲ್ಲದೆ ಮಹಿಳೆಯರಿಗೆ ಈ ಒಂದು ಯೋಜನೆಯ ಮೂಲಕ lpg ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆದುಕೊಂಡರೆ ಪ್ರತಿ ತಿಂಗಳು ಅಥವಾ ವರ್ಷಕ್ಕೆ ಒಂಬತ್ತು ಭಾರೀ ₹300 ಸಬ್ಸಿಡಿ ಹಣ lpg ಗ್ಯಾಸ್ ಸಿಲೆಂಡರ್ ರಿಸೀವ್ ಮಾಡಲು ಸಿಗುತ್ತದೆ.

ಆದರಿಂದ ನಾವು ಈ ಒಂದು ಲೇಖನ ಮೂಲಕ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಂದರೆ ಏನು ಮತ್ತು ಈ ಒಂದು ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳ ವಿವರದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ..

PM Ujjwala Scheme
PM Ujjwala Scheme

 

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಂದರೆ ಏನು..?

ಸ್ನೇಹಿತರೆ ಕೇಂದ್ರ ಸರ್ಕಾರ ಈ ಒಂದು ಯೋಜನೆಯನ್ನು ಮಹಿಳೆಯರಿಗಾಗಿ ಜಾರಿಗೆ ತಂದಿದೆ. ಹೌದು ಗೆಳೆಯರೇ ಕಟ್ಟಿಗೆ ಮತ್ತು ಸೌದೆ ಹಾಗೂ ಗ್ಯಾಸ್ ಮೂಲಕ ಅಡಿಗೆ ಮಾಡುವುದರಿಂದ ಮಹಿಳೆಯರ ಆರೋಗ್ಯ ತುಂಬಾ ಹಾಳಾಗುತ್ತಿತ್ತು ಇದರ ಜೊತೆಗೆ ಶ್ವಾಸಕೋಶದ ತೊಂದರೆ ಉಂಟಾಗುತ್ತಿತ್ತು.

ಇದನ್ನು ಗಮನಿಸಿದ ಕೇಂದ್ರ ಸರಕಾರ ಈ ಸಮಸ್ಯೆಯನ್ನು ಹೋಗಲಾಡಿಸಲು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಉಚಿತವಾಗಿ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಕನೆಕ್ಷನ್ ನೀಡುವುದು ಹಾಗೂ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಒದಗಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ.

ಹೌದು ಗೆಳೆಯರೇ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೂಲಕ ಮಹಿಳೆಯರಿಗೆ ಉಚಿತವಾಗಿ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಕೊಡುವುದರ ಜೊತೆಗೆ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಒದಗಿಸುವುದು ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ ಹಾಗಾಗಿ ಆಸಕ್ತಿ ಇರುವವರು ಇಂದೇ ಅರ್ಜಿ ಸಲ್ಲಿಸಿ.

 

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಉಪಯೋಗಗಳು.?

ರೂ.300 ಸಬ್ಸಿಡಿ ಹಣ ಸಿಗುತ್ತೆ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದಂತ ಮಹಿಳೆಯರಿಗೆ 9 ಬಾರಿ ಫೀಲಿಂಗ್ ಮಾಡಲು ಈ ಒಂದು ಯೋಜನೆಯ ಮೂಲಕ 300 ಸಬ್ಸಿಡಿ ಹಣ ಸಿಗುತ್ತದೆ. ಮುಂದೆ ಈ ಸಬ್ಸಿಡಿ ಹಣ ಏರಿಕೆ ಮಾಡುವ ಸಾಧ್ಯತೆ ಇದೆ ಹಾಗಾಗಿ ಆಸಕ್ತಿ ಇರುವವರು ಈಗಲೇ ಅರ್ಜಿ ಸಲ್ಲಿಸಿ ಈ ಒಂದು ಯೋಜನೆ ಪ್ರಯೋಜನ ಪಡೆದುಕೊಳ್ಳಿ

ಉಚಿತ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಕನೆಕ್ಷನ್: ಹೌದು ಗೆಳೆಯರೇ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಕೆ ಮಾಡಿದಂತಹ ಮಹಿಳೆಯರಿಗೆ ಯಾವುದೇ ಹಣ ತೆಗೆದುಕೊಳ್ಳದೆ ಸಂಪೂರ್ಣವಾಗಿ ಉಚಿತವಾಗಿ LPG ಗ್ಯಾಸ್ ಸಿಲಿಂಡರ್ ಕನೆಕ್ಷನ್ ನೀಡಲಾಗುತ್ತದೆ.

ಉಚಿತ ಸಿಲಿಂಡರ್ ಮತ್ತು ಸ್ಟವ್ ಸಿಗುತ್ತೆ: ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಕೆ ಮಾಡಿದ ಫಲಾನುಭವಿಗಳಿಗೆ ಉಚಿತವಾಗಿ ಒಂದು ಗ್ಯಾಸ್ ಸಿಲಿಂಡರ್ ಸ್ಟವ್ ನೀಡಲಾಗುತ್ತದೆ ಮತ್ತು ಉಚಿತ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಮೊದಲ ಬಾರಿಗೆ ನೀಡಲಾಗುತ್ತದೆ.

 

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳ ವಿವರ..?

  • ಅರ್ಜಿದಾರ ಮಹಿಳೆಯ ಆಧಾರ್ ಕಾರ್ಡ್
  • ವಿಳಾಸದ ದಾಖಲಾತಿಗಳು (ವೋಟರ್ ಐಡಿ)
  • ರೇಷನ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್ ವಿವರಗಳು
  • ಮೊಬೈಲ್ ನಂಬರ್
  • ಇತರೆ ಅಗತ್ಯ ದಾಖಲಾತಿಗಳು

 

ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು.?

  • ಅರ್ಜಿದಾರ ಭಾರತದ ಪ್ರಜೆಯಾಗಿರಬೇಕು
  • ಅರ್ಜಿದಾರ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು
  • ಅರ್ಜಿದಾರ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು
  • ಅರ್ಜಿದಾರರು ಈ ಹಿಂದೆ ಯಾವುದೇ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಕನೆಕ್ಷನ್ ಪಡೆದಿರಬಾರದು
  • ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ

 

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ..?

ಸ್ನೇಹಿತರೆ ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಿ ಮೇಲೆ ತಿಳಿಸಿದ ಎಲ್ಲಾ ಲಾಭ ಪಡೆಯಲು ಬಯಸುತ್ತಿದ್ದೀರಾ ಹಾಗಾದರೆ ನೀವು ಕೆಳಗಡೆ ನೀಡಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮಗೆ ಯಾವುದೇ ರೀತಿ ಅರ್ಜಿ ಸಲ್ಲಿಸಲು ಬರದೇ ಹೋದಲ್ಲಿ ಅಥವಾ ನಿಮಗೆ ಗೊತ್ತಿಲ್ಲದ ಸಂದರ್ಭದಲ್ಲಿ ನೀವು ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

https://www.pmuy.gov.in/ujjwala2.html

 

ಸ್ನೇಹಿತರ ಇದೇ ರೀತಿ ಪ್ರತಿದಿನ ನಮ್ಮ ರಾಜ್ಯದ ಬಗ್ಗೆ ಹೊಸ ವಿಷಯಗಳು ಹಾಗೂ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಹೊಸ ವಿಷಯಗಳು ಮತ್ತು ಪ್ರತಿದಿನ ಸುದ್ದಿಗಳನ್ನು ತಿಳಿಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು

PM Kisan: ಪಿಎಂ ಕಿಸಾನ್ ಹೊಸ ಅಪ್ಡೇಟ್.! ಇಂಥಹ ರೈತರ ಖಾತೆಗೆ ನೇರವಾಗಿ 4000 ಜಮಾ ಆಗುತ್ತೆ.! ಇಲ್ಲಿದೆ ನೋಡಿ ಮಾಹಿತಿ 

 

Leave a Comment