ಪ್ರತಿ ತಿಂಗಳು 3000 ಪಿಂಚಣಿ ಸಿಗುತ್ತೆ.! ಈ ಒಂದು ಕಾರ್ಡ್ ಗೆ ನೀವು ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ
ನಮಸ್ಕಾರ ಗೆಳೆಯರೇ, ನಮ್ಮ ರಾಜ್ಯದ ಹಾಗೂ ನಮ್ಮ ದೇಶದ ಕಟ್ಟಡ ಕಾರ್ಮಿಕರಿಗೆ ಹಾಗೂ ಶ್ರಮಜೀವಿಗಳಿಗೆ ಭರ್ಜರಿ ಗುಡ್ ನ್ಯೂಸ್.! ಹೌದು ಗೆಳೆಯರೇ ತುಂಬಾ ಜನರಿಗೆ ವಯಸ್ಸಾದ ಮೇಲೆ ಹೇಗೆ ಜೀವನ ಸಾಗಿಸುವುದು ಎಂದು ಪ್ರಶ್ನೆ ಕಾಣುತ್ತಿರುತ್ತದೆ ಅಂತವರಿಗೆ ಇದೀಗ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಬಂದಿದೆ.
ಹೌದು ಗೆಳೆಯರೇ ನಿಮಗೆ ಏನಾದರೂ 60 ವರ್ಷ ಮೇಲ್ಪಟ್ಟರೆ ಈ ಒಂದು ಕಾರ್ಡ್ ಮಾಡಿಸಿದರೆ ಸಾಕು ಪ್ರತಿ ತಿಂಗಳು 3000 ಹಣ ನಿಮ್ಮ ಖಾತೆಗೆ ಪಿಂಚಣಿ ರೂಪದಲ್ಲಿ ಜಮಾ ಆಗುತ್ತದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಈ ಪಿಂಚಣಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಹಾಗೂ ಈ ಕಾರ್ಡಿನ ಉಪಯೋಗಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಲೇಖನನ್ನು ಕೊನೆವರೆಗೂ ಓದಿ

ಯಾವುದು ಹೊಸ ಯೋಜನೆ.?
ಸ್ನೇಹಿತನ ಕರ್ನಾಟಕ ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರ ಹಿತದೃಷ್ಟಿ ಕಾಪಾಡುವುದು ಉದ್ದೇಶದಿಂದ ಹಾಗೂ ವಯಸ್ಸಾದ ಕಾಲದಲ್ಲಿ ಅವರಿಗೆ ಹಾರ್ದಿಕ ನೆರವು ನೀಡುವ ಉದ್ದೇಶದಿಂದ ಕಾರ್ಮಿಕ ಲೈಫ್ ಸೆಕ್ಯೂರ್ ಯೋಜನೆ ಜಾರಿಗೆ ತಂದಿದೆ.
ಈ ಒಂದು ಯೋಜನೆಯ ಮೂಲಕ ರಾಜ್ಯ ಸರ್ಕಾರ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಪಿಂಚಣಿ ಮತ್ತು ಕಲ್ಯಾಣ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು 3000 ಹಣ ಪಿಂಚಣಿ ರೂಪದಲ್ಲಿ ನೀಡುತ್ತದೆ
ಹೌದು ಗೆಳೆಯರೇ ಕೂಲಿ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರು ಮತ್ತು ರೈತರು ಈ ಒಂದು ಯೋಜನೆಯ ಲಾಭ ಪಡೆಯಬಹುದು. ಹಾಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಕಾರ್ಮಿಕ ಲೈಫ್ ಸೆಕ್ಯೂರ್ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
ಕಾರ್ಮಿಕ ಲೈಫ್ ಸೆಕ್ಯೂರ್ ಯೋಜನೆಯ ಪ್ರಮುಖ ಉಪಯೋಗಗಳು..?
ತಿಂಗಳಿಗೆ 3000 ಪಿಂಚಣಿ ಸಿಗುತ್ತೆ: ಹೌದು ಗೆಳೆಯರೇ ನೀವು ವೃದ್ಧಾಪ್ಯ ಪಿಂಚಣಿಯನ್ನು ಈ ಒಂದು ಯೋಜನೆಯ ಮೂಲಕ ಪಡೆದುಕೊಳ್ಳಬಹುದು. ಅಂದರೆ ನಿಮಗೆ 60 ವರ್ಷ ದಾಟಿದ ನಂತರ ನೋಂದಾಯಿತ ಕಟ್ಟಡ ಕಾರ್ಮಿಕರಾಗಿದ್ದರೆ ನಿಮಗೆ ಈ ಒಂದು ಯೋಜನೆಯ ಮೂಲಕ ತಿಂಗಳಿಗೆ 3000 ಪಿಂಚಣಿ 60 ವರ್ಷ ನಂತರ ನೀವು ಬದುಕಿರುವವರೆಗೂ ಬರುತ್ತದೆ ಹಾಗಾಗಿ ಪ್ರತಿಯೊಬ್ಬರೂ ಅರ್ಜಿ ಸಲ್ಲಿಸಿ
ಕುಟುಂಬದವರಿಗೂ ಪಿಂಚಣಿ ಸಿಗುತ್ತೆ: ಹೌದು ಗೆಳೆಯರೇ ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿ ದುರಾದೃಷ್ಟವಶ ಅಥವಾ ಇತರೆ ಯಾವುದೇ ಸಂದರ್ಭದಲ್ಲಿ ಮೃತಪಟ್ಟರೆ ಅಂತ ಸಂದರ್ಭದಲ್ಲಿ ಅವರ ಕುಟುಂಬದ ಸದಸ್ಯರಿಗೆ ಅಥವಾ ಕಾರ್ಮಿಕರ ಪತ್ನಿಗೆ ತಿಂಗಳಿಗೆ ಒಂದು 1500 ಪಿಂಚಣಿ ಸಿಗುತ್ತದೆ
ದುರ್ಬಲತೆ ಪಿಂಚಣಿ ಪಡೆಯಬಹುದು: ಹೌದು ಗೆಳೆಯರೇ, ಈ ಒಂದು ಕಾರ್ಡ್ ನಿಮ್ಮ ಹತ್ತಿರ ಇದ್ದರೆ ಯಾವುದೇ ಸಂದರ್ಭದಲ್ಲಿ ಅಥವಾ ಕಾಯಿಲೆ ಅಥವಾ ಅಪಘಾತ ಅಥವಾ ಕೆಲಸ ಮಾಡುವಂತಹ ಸಂದರ್ಭದಲ್ಲಿ ಅಂಗವೈಕಲ್ಲಿ ಅಥವಾ ಶಾಶ್ವತ ಅಂಗವಾಗಿ ಅಥವಾ ಭಾಗಶಃ ಅಂಗವಿಕಲತೆ ಉಂಟಾದರೆ ಅಂತ ಸಂದರ್ಭದಲ್ಲಿ ತಿಂಗಳಿಗೆ ರೂ.2000 ಪಿಂಚಣಿ ನೀಡಲಾಗುತ್ತದೆ ಅಷ್ಟೇ ಅಲ್ಲದೆ ಆಸ್ಪತ್ರೆ ಖರ್ಚಿಗಾಗಿ 2 ಲಕ್ಷ ರೂಪಾಯಿವರೆಗೆ ಸಹಾಯಧನವನ್ನು ಈ ಒಂದು ಯೋಜನೆಯ ಮೂಲಕ ಪಡೆಯಬಹುದು
ಈ ಯೋಜನೆ ಇನ್ನಷ್ಟು ಲಾಭಗಳು:
1) ಕಾರ್ಮಿಕ ಕಾರ್ಡ್ ಹೊಂದಿದ ಮಕ್ಕಳಿಗೆ ಕಲಿಕಾ ಭಾಗ್ಯ ಯೋಜನೆ ಅಡಿಯಲ್ಲಿ ಮಕ್ಕಳಿಗೆ ಪ್ರತಿ ವರ್ಷ 2000 ಇಂದ 30,000 ವರೆಗೆ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಅವಕಾಶವಿರುತ್ತದೆ
2) ಕಾರ್ಮಿಕರ ಮಕ್ಕಳ ಮದುವೆಗೆ (ಇಬ್ಬರ ಮಕ್ಕಳಿಗೆ ಮಾತ್ರ) ಪ್ರತಿಯೊಬ್ಬರ ಮಕ್ಕಳ ಮದುವೆಗೆ 50 ಸಾವಿರ ವರೆಗೆ ಸಹಾಯಧನ ಪಡೆಯಬಹುದು
3) ತಾಯಿ ಲಕ್ಷ್ಮಿ ಬಾಂಡ್ ಯೋಜನೆಯ ಮೂಲಕ ಹೆರಿಗೆಯ ಸಂದರ್ಭದಲ್ಲಿ ಕಾರ್ಮಿಕ ಮಕ್ಕಳ ಮೊದಲ ಎರಡು ಮಕ್ಕಳ ಹೆರಿಗೆಗೆ ಸರ್ಕಾರದಿಂದ 50,000 ವರೆಗೆ ಆರ್ಥಿಕ ನೆರವು ಸಿಗುತ್ತದೆ
4) ಕೆಲಸಕ್ಕೆ ಅವಶ್ಯಕತೆ ಬೇಕಾಗುವ ಕೆಲಸದ ಕಿಟ್ ಅಥವಾ ಟೂಲ್ ಕಿಟ್ ಪಡೆಯಲು 20,000 ವರೆಗೆ ಸಹಾಯಧನ ನೀಡಲಾಗುತ್ತದೆ.
5) ಅಂತ್ಯಕ್ರಿಯೆ ಅಥವಾ ಮರಣದ ಸಂದರ್ಭದಲ್ಲಿ ಕಾರ್ಮಿಕರ ಅಂತ್ಯಕ್ರಿಯೆಗಾಗಿ ಸರ್ಕಾರದಿಂದ 4000 ಸಹಾಯಧನ ಸಿಗುತ್ತದೆ ಹಾಗೂ ಒಂದು ಕುಟುಂಬಕ್ಕೆ 71 ಸಾವಿರ ವರೆಗೆ ಸಹಾಯಧನ ಅಥವಾ ಪರಿಯರ ಈ ಒಂದು ಯೋಜನೆಯ ಮೂಲಕ ಪಡೆಯಬಹುದು
ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು..?
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ನೀವು ಕಟ್ಟಡ ಕಾರ್ಮಿಕರು ಅಥವಾ ಅಸಂಘಟಿತ ವಲಯದ ಕಾರ್ಮಿಕರಾಗಿರಬೇಕು ಅಂತವರು ಮಾತ್ರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಈ ಒಂದು ಯೋಜನೆಯ ಲಾಭ ಪಡೆಯಬೇಕಾದರೆ ನೀವು ಲೇಬರ್ ಕಾರ್ಡ್ ಹೊಂದಿರಬೇಕು ಹಾಗಾಗಿ ಪ್ರತಿಯೊಬ್ಬರೂ ಲೇಬರ್ ಕಾರ್ಡ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ನೀವು ಸಂಪೂರ್ಣವಾಗಿ ಈ ಒಂದು ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಹಾಗಾಗಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಅಥವಾ ಗ್ರಾಮ್ ಒನ್ ಅಥವಾ ಕರ್ನಾಟಕವನ್ನು ಸೆಂಟರ್ ಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
https://karbwwb.karnataka.gov.in/kn
ಸ್ನೇಹಿತರೆ ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು ಹಾಗೂ ಪ್ರತಿದಿನ ಮಾಹಿತಿಗಾಗಿ ನಮ್ಮ ಜಾಲತಾಣವನ್ನು ವಿಸಿಟ್ ಮಾಡಿ
ಗೃಹಲಕ್ಷ್ಮಿ ಯೋಜನೆಯ ₹2000 ಹಣ ಜಮಾ ಆಗಿದೆ.! ಸ್ಟೇಟಸ್ ಚೆಕ್ ಮಾಡಿಕೊಳ್ಳಿ – ಇಲ್ಲಿದೆ ಮಾಹಿತಿ