New Ration Card aplication : ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ, ತಿದ್ದುಪಡಿಗೂ ಅವಕಾಶ !
ರಾಜ್ಯದಲ್ಲಿ ಹಲವಾರು ಜನ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಮತ್ತು ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಲು ಬಹಳ ದಿನಗಳಿಂದ ಕಾಯುತ್ತಿದ್ದಾರೆ, ಇದೀಗ ಸಿಹಿ ಸುದ್ದಿ ಸರ್ಕಾರದಿಂದ ನೀಡಲಾಗಿದೆ. ಹೌದು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಮತ್ತು ತಿದ್ದುಪಡಿ ಮಾಡಲು ಅರ್ಜಿ ಆರಂಭ ಆಗಿದೆ. ಈ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಬೇಕಾಗುವ ದಾಖಲಾತಿಗಳು ಮತ್ತು ಅರ್ಜಿ ಹಾಕಲು ಕೊನೆಯ ದಿನಾಂಕ ಯಾವಾಗ ಹಾಗೂ ಅರ್ಜಿ ಹಾಕುವ ನೇರವಾದ ಲಿಂಕ್ ಅನ್ನು ಈ ಕೆಳಗೆ ನೀಡಲಾಗಿದೆ.
ಬಿಗ್ ಬಾಸ್ ಸೀಸನ್ 12 ಸ್ಪರ್ಧಿಗಳ ಲಿಸ್ಟ್ ಲೀಕ್ ಆಗಿದೆ, ಯಾರ್ಯಾರು ಇಲ್ಲಿ ತಿಳಿಯಿರಿ.
ರಾಜ್ಯ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ 13 ಲಕ್ಷಕ್ಕಿಂತ ಹೆಚ್ಚು ಅನರ್ಹ ರೇಷನ್ ಕಾರ್ಡ್ ಗಳನ್ನು ರಾಜ್ಯದಲ್ಲಿ ಪತ್ತೆಹಚ್ಚಲಾಗಿದೆ, ಇನ್ನು ಈ ರೀತಿಯ ಹಲವು ಅನರ್ಹ ರೇಷನ್ ಕಾರ್ಡ್ ಗಳನ್ನು ಜನಗಳು ಹೊಂದಿದ್ದು ಇಂತಹ ರೇಷನ್ ಕಾರ್ಡ್ಗಳನ್ನು ಪತ್ತೆ ಹಚ್ಚಲಾಗುತ್ತಿದೆ ಮತ್ತು ಶೀಘ್ರದಲ್ಲಿ ಇಂತಹ ಎಲ್ಲಾ ಅನರ್ಹ ರೇಷನ್ ಕಾರ್ಡ್ಗಳನ್ನು ರದ್ದು ಮಾಡಲಾಗುತ್ತದೆ.
ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ನೀಡಿದ ಮಾಹಿತಿಯ ಪ್ರಕಾರ ಅನರ್ಹ ರೇಷನ್ ಕಾರ್ಡ್ ಗಳನ್ನು ಪತ್ತೆ ಹಚ್ಚುವ ಕೆಲಸವನ್ನು ನ್ಯಾಯಬೆಲೆ ಅಂಗಡಿಗಳಿಗೆ ವಹಿಸಲಾಗಿದೆ, ಈ ನ್ಯಾಯಬೆಲೆ ಅಂಗಡಿಗಳು ಸುಳ್ಳು ದಾಖಲೆಗಳನ್ನು ನೀಡಿ, ಹೆಚ್ಚಿನ ಎಕರೆಯ ಹೊಲವನ್ನು ಹೊಂದಿ, ಸರ್ಕಾರಿ ಕೆಲಸ ಮಾಡುತ್ತಿದ್ದು ರೇಷನ್ ಕಾರ್ಡ್ ಅನ್ನು ಹೊಂದಿದ್ದರೆ ಇಂಥವರನ್ನು ಗುರುತಿಸಿ ಆರಿಸಿನ ಕಾರ್ಡನ್ನು ಅನರ್ಹ ಎಂದು ಗುರುತಿಸುತ್ತಿದ್ದಾರೆ.

ಹೊಸ ರೇಷನ್ ಕಾರ್ಡ್ ಅರ್ಜಿ ಯಾವಾಗ ಪ್ರಾರಂಭ
ಈಗಾಗಲೇ ಅನರ್ಹ ರೇಷನ್ ಕಾರ್ಡ್ ಗಳು ರದ್ದತಿಯ ಕೆಲಸವನ್ನು ರಾಜ್ಯ ಸರ್ಕಾರವು ಅತಿ ವೇಗವಾಗಿ ನಡೆಸುತ್ತಿದೆ. ಈ ರೇಷನ್ ಕಾರ್ಡ್ ರದ್ದತಿ ಮುಗಿದ ತಕ್ಷಣ, ಸುಮಾರು ಅಕ್ಟೋಬರ್ ತಿಂಗಳಿನಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಕರೆಯಲಾಗುತ್ತದೆ ಮತ್ತು ಕೇವಲ 24 ಗಂಟೆ ಒಳಗೆ ಅರ್ಹ ಕುಟುಂಬಗಳಿಗೆ ರೇಷನ್ ಕಾರ್ಡ್ ನೀಡುವಂತೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಸಚಿವ ಕೆಎಚ್ ಮುನಿಯಪ್ಪ ಅವರು ತಿಳಿಸಿದ್ದಾರೆ.
ರೇಷನ್ ಕಾರ್ಡ್ ತಿದ್ದುಪಡಿಗೆ ಆರಂಭವಾಗಿದೆ
ಕುಟುಂಬದ ಹೊಸ ಸದಸ್ಯರನ್ನು ಸೇರಿಸಲು ಅಥವಾ ತೆಗೆದುಹಾಕಲು ಅಥವಾ ಅಡ್ರೆಸ್ ಮತ್ತು ಹೆಸರುಗಳ ಬದಲಾವಣೆ ಈ ರೀತಿಯ ತಿದ್ದುಪಡಿಗಳನ್ನು ನಿಮ್ಮ ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ಅಲ್ಲಿ ಮಾಡಿಸಬೇಕಿದ್ದರೆ, ತಿದ್ದುಪಡಿಗೆ ರಾಜ್ಯ ಸರ್ಕಾರವು ಅವಕಾಶ ನೀಡಿದ್ದು ಅರ್ಜಿ ಆರಂಭವಾಗಿದೆ. ತಿದ್ದುಪಡಿಯನ್ನು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಆನ್ಲೈನ್ ಕೇಂದ್ರಗಳಲ್ಲಿ 30 ಸೆಪ್ಟೆಂಬರ್ 2025 ರ ತನಕ ಕೊನೆಯ ದಿನಾಂಕವನ್ನು ನೀಡಲಾಗಿದೆ. ಈ ದಿನಾಂಕದ ತನಕ ಪ್ರತಿದಿನ ಬೆಳಗ್ಗೆ 10 ರಿಂದ 5 ಗಂಟೆಯ ತನಕ ತಿದ್ದುಪಡಿಗೆ ಅವಕಾಶವಿರುತ್ತದೆ.
ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅಧಿಕೃತ ಲಿಂಕ್
ರೇಷನ್ ಕಾರ್ಡ್ ತಿದ್ದುಪಡಿ, ಸದಸ್ಯರ ಸೇರ್ಪಡೆಗೆ ದಾಖಲೆಗಳು
- ಕುಟುಂಬದ ರೇಷನ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಸದಸ್ಯರ ಆಧಾರ್ ಕಾರ್ಡ್
- ಆರು ವರ್ಷಕ್ಕಿಂತ ಕೆಳಗಿನ ಮಗುವಿದ್ದರೆ ಜನನ ಪ್ರಮಾಣ ಪತ್ರ
- ಇನ್ನಿತರ ತಿದ್ದುಪಡಿಗೆ ಸಂಬಂಧಿಸಿದ ದಾಖಲೆಗಳು
ಈ ರೀತಿಯ ಇನ್ನು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ ಫಾಲೋ ಮಾಡಿಕೊಳ್ಳಿ.