Jk Tyres Scholarship: ವಿದ್ಯಾರ್ಥಿಗಳಿಗೆ ವರ್ಷಕ್ಕೆ 25,000 ವರೆಗೆ ಸ್ಕಾಲರ್ಶಿಪ್ ಸಿಗುತ್ತೆ.! ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ
ನಮಸ್ಕಾರ ಗೆಳೆಯರೇ ಕರ್ನಾಟಕದ ಜನತೆಗೆ ಇದೀಗ ಮತ್ತೊಂದು ಸಿಹಿ ಸುದ್ದಿ. ಹೌದು ಗೆಳೆಯರೇ, ನಿಮ್ಮ ಮನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹೆಣ್ಣು ಮಕ್ಕಳಿದ್ದಾರೆ ಹಾಗಾದರೆ ನಿಮ್ಮ ಮಕ್ಕಳು ಈ ಒಂದು ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಿ ವರ್ಷಕ್ಕೆ ಬರೋಬ್ಬರಿ 25000 ವರೆಗೂ ಆರ್ಥಿಕ ನೆರವು ಪಡೆಯಬಹುದು.
ಹೌದು ಗೆಳೆಯರೇ ನಮ್ಮ ದೇಶದ ಉತ್ಪಾದನೆಯಲ್ಲಿ ಪ್ರಮುಖ ಕಂಪನಿಯಾಗಿರುವ ಜೆಕೆ ಟೈರ್ಸ್ ಮತ್ತು ಇಂಡಸ್ಟ್ರಿ ಲಿಮಿಟೆಡ್ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಹಾಗೂ ಸಾಮಾಜಿಕ ಕಾರ್ಯಕ್ರಮದ ಅಡಿಯಲ್ಲಿ 25000 ವರೆಗೂ ವಿದ್ಯಾರ್ಥಿ ವೇತನ ಅಥವಾ ಸ್ಕಾಲರ್ಶಿಪ್ ನೀಡುತ್ತಿದೆ ಹಾಗಾಗಿ ಆಸಕ್ತಿ ಇರುವ ವಿದ್ಯಾರ್ಥಿನಿಯರು ಈ ಒಂದು ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಬಹುದು

ನಾವು ಈ ಒಂದು ಲೇಖನೆಯ ಮೂಲಕ ಈ ಒಂದು ಸ್ಕಾಲರ್ಶಿಪ್ ಯೋಜನೆಗೆ ಯಾವ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬ ವಿವರವನ್ನು ತಿಳಿಯೋಣ
ಜೆಕೆ ಟೈರ್ಸ್ ವಿದ್ಯಾರ್ಥಿ ವೇತನ ಅಂದರೆ ಏನು..?
ಹೌದು ಗೆಳೆಯರೆ ನಮ್ಮ ದೇಶದ ಪ್ರತಿಷ್ಠಿತ ಟೈಯರ್ ಉತ್ಪಾದಕ ಸಂಸ್ಥೆಯಾಗಿರುವ ಜೆಕೆ ಟೈರ್ಸ್ ಮತ್ತು ಇಂಡಸ್ಟ್ರಿ ಲಿಮಿಟೆಡ್ ಇದು ಸಾಮಾಜಿಕ ಮತ್ತು ಇತರೆ ಕಾರ್ಯಕ್ರಮ ಅಡಿಯಲ್ಲಿ ಶಿಕ್ಷಣದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ಬಾಲಕಿಯರಿಗೆ ನೆರವು ನೀಡುವ ಉದ್ದೇಶದಿಂದ ಶಿಕ್ಷ ಸಾರಥಿ ವಿದ್ಯಾರ್ಥಿ ವೇತನವನ್ನು ಪ್ರಾರಂಭ ಮಾಡಿದೆ ಈ ಒಂದು ಯೋಜನೆ ಅರ್ಜಿ ಪ್ರಕ್ರಿಯೆ ಇದೀಗ ಆರಂಭವಾಗಿದ್ದು ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು
ಮಾಹಿತಿ ಮೂಲಗಳ ಪ್ರಕಾರ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಕುಟುಂಬದ ಹುಡುಗಿಯರಾಗಿರಬೇಕು ಹಾಗೂ ಪದವಿ ಮತ್ತು ವೃತ್ತಿಪರ ಕೋರ್ಸ್ ಹಾಗೂ ಡಿಪ್ಲೋಮೋ ಮತ್ತು ಇತರೆ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು
ಈ ಒಂದು ಸ್ಕಾಲರ್ಶಿಪ್ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು..?
ಹೌದು ಗೆಳೆಯರೇ, ಶಿಕ್ಷ ಸಾರಥಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿನಿಯರು ಅಥವಾ ಹುಡುಗಿಯರಿಗೆ ಮಾತ್ರ ಅವಕಾಶವಿದೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ ನಂತರ ವರ್ಷಕ್ಕೆ 25000 ವರೆಗೆ ಆರ್ಥಿಕ ನೆರವು ಪಡೆದುಕೊಳ್ಳಬಹುದು ಇದರಿಂದ ವಿದ್ಯಾರ್ಥಿನಿಯರು ಪರೀಕ್ಷಾ ಶುಲ್ಕ ಹಾಗೂ ಇತರೆ ಶುಲ್ಕ ಮತ್ತು ಶೈಕ್ಷಣಿಕ ಸಂಬಂಧಿಸಿದ ಖರ್ಚು ವೆಚ್ಚಗಳಿಗೆ ಹಣ ಬಳಸಿಕೊಳ್ಳಬಹುದಾಗಿದೆ
ಹಾಗಾಗಿ ಈ ಒಂದು ವಿದ್ಯಾರ್ಥಿ ವೇತನಕ್ಕೆ ಸಾಮಾನ್ಯ ಪದವಿ ಕೋರ್ಸ್ಗಳು ಅಂದರೆ ಬಿಎ, B.SC, B.COM ಮತ್ತು ವೃತ್ತಿಪರ ಕೋರ್ಸ್ ಗಳು ಇಂಜಿನಿಯರಿಂಗ್, ನರ್ಸಿಂಗ್, ವೈದ್ಯಕೀಯ, ಫಾರ್ಮಸಿ ಮತ್ತು ಇತರೆ ಕೋರ್ಸ್ ಗಳು ಹಾಗೂ ಡಿಪ್ಲೋಮೋ ವಿದ್ಯಾರ್ಥಿಗಳು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ ನಂತರ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಈ ಒಂದು ಯೋಜನೆಯ ಸ್ಕಾಲರ್ಶಿಪ್ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಹಾಗಾಗಿ ಹುಡುಗಿಯರು ಉನ್ನತ ಶಿಕ್ಷಣ ಪಡೆಯಲು ಈ ಒಂದು ವಿದ್ಯಾರ್ಥಿ ವೇತನದ ಪ್ರಯೋಜನ ಪಡೆದುಕೊಳ್ಳಿ
ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?
- ವಿದ್ಯಾರ್ಥಿನಿಯರು ಬಾರಿ ವಾಹನ ಚಾಲಕರ ಪೋಷಕರ ಮಕ್ಕಳಾಗಿರಬೇಕು ಹಾಗೂ ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು
- ವಿದ್ಯಾರ್ಥಿನಿಯರು ಪ್ರಸ್ತುತ ವರ್ಷದಲ್ಲಿ ಪದವಿ ಅಥವಾ ವೃತ್ತಿಪರ ಅಥವಾ ಡಿಪ್ಲೋಮಾ ಮುಂತಾದ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರಬೇಕು
- ವಿದ್ಯಾರ್ಥಿನಿಯರು ಇಂದಿನ ವರ್ಷದಲ್ಲಿ ಕನಿಷ್ಠ ಪಕ್ಷ 55% ಅಂಕ ಪಡೆದುಕೊಂಡು ಪಾಸ್ ಆಗಿರಬೇಕು
- ವಿದ್ಯಾರ್ಥಿನಿಯರ ಕುಟುಂಬದ ಪೋಷಕರ ಆದಾಯವು 5 ಲಕ್ಷ ರೂಪಾಯಿಗಿಂತ ಮೀರಬಾರದು
ಅರ್ಜಿ ಸಲ್ಲಿಸುವುದು ಹೇಗೆ..?
ವಿದ್ಯಾರ್ಥಿನಿಯರು ಈ ಒಂದು ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದಾರೆ ಮೊದಲು ಈ ಒಂದು ವಿದ್ಯಾರ್ಥಿ ವೇತನದ ಕುರಿತು ಹೆಚ್ಚಿನ ಮಾಹಿತಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಪಡೆದುಕೊಳ್ಳಬಹುದು ನಂತರ ನಾವು ಕೆಳಗಡೆ ನೀಡಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಈ ಒಂದು ವಿದ್ಯಾರ್ಥಿ ವೇತನಕ್ಕೆ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
https://www.buddy4study.com/page/jk-tyre-shiksha-sarthi-scholarship-program
ಸ್ನೇಹಿತರೆ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಬೇಕೆ ಹಾಗೂ ಪ್ರತಿದಿನ ಕರ್ನಾಟಕದ ಪ್ರಮುಖ ಸುದ್ದಿಗಳನ್ನು ತಿಳಿಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳುವುದು ಉತ್ತಮ