Free Sewing Scheme 2026: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ.! ಮೊಬೈಲ್ ಮೂಲಕ ಅಪ್ಲೈ ಮಾಡಿ
ನಮಸ್ಕಾರ ಗೆಳೆಯರೇ ಮಹಿಳೆಯರಿಗೆ ಹಾಗೂ ಊರಲ್ಲಿ ಸ್ವಂತ ಉದ್ಯೋಗ ಮಾಡಲು ಬಯಸುವಂಥ ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ಹಾಗೂ ನಗರ ಪಟ್ಟಣದಲ್ಲಿ ಸಣ್ಣ ಉದ್ಯೋಗ ಪ್ರಾರಂಭಿಸಲು ಬಯಸುವಂತಹ ಜನರಿಗೆ ಇದೀಗ ಕೇಂದ್ರ ಸರ್ಕಾರ ವತಿಯಿಂದ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ.
ಹೌದು ಗೆಳೆಯರೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವುದರ ಮೂಲಕ ನೀವು ಸ್ವಂತ ಉದ್ಯೋಗ ಪ್ರಾರಂಭಿಸಲು ಮೂರು ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯದ ಜೊತೆಗೆ 15,000 ಹಣ ಉಚಿತವಾಗಿ ಯಂತ್ರೋಪಕರಣಗಳ ಖರೀದಿಗಾಗಿ ಪಡೆದುಕೊಳ್ಳಬಹುದು
ಹೌದು ಗೆಳೆಯರೆ ನಾವು ಈ ಒಂದು ಲೇಖನ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆ ಯಾವುದು ಹಾಗೂ ಈ ಯೋಜನೆಯ ಮೂಲಕ ಯಾವ ರೀತಿ ಹೊಲಿಗೆ ಯಂತ್ರ ಪಡೆದುಕೊಳ್ಳುವುದು ಮತ್ತು ಈ ಯೋಜನೆಯ ಉಪಯೋಗಗಳು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ.. ಹಾಗಾಗಿ ನೀವು ಈ ಲೇಖನೆಯನ್ನು ಆದಷ್ಟು ಕೊನೆವರೆಗೂ ಓದಿ

ಹೌದು ಗೆಳೆಯರ ಕೇಂದ್ರ ಸರಕಾರ ಇದೀಗ ಬಡವರಿಗೆ ಹಾಗೂ ಮಹಿಳೆಯರಿಗೆ ಮತ್ತು ಸ್ವಂತ ಉದ್ಯೋಗ ಪ್ರಾರಂಭ ಮಾಡಲು ಬಯಸುವಂಥ ಜನರಿಗೆ ಹಾಗೂ ವಂಶ ಪಾರಂಪರಿಕ ವೃತ್ತಿ ಮಾಡಿಕೊಂಡು ಬಂದಿರುವ ಜನರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಪಿಎಂ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದೆ.
ಈ ಒಂದು ಯೋಜನೆಯ ಮೂಲಕ ಮಹಿಳೆಯರಿಗೆ ಹಾಗೂ ಅರ್ಜಿ ಸಲ್ಲಿಸಿದ ಪ್ರಧಾನಭವಿಗಳಿಗೆ ತಮ್ಮ ವೃತ್ತಿಗೆ ಸಂಬಂಧಿಸಿದ ಯಂತ್ರೋಪಕರಣ ಖರೀದಿಗಾಗಿ 15000 ಉಚಿತ ಹಣ ಹಾಗೂ 3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ನೀಡುತ್ತಿದೆ.
ಪಿಎಂ ವಿಶ್ವಕರ್ಮ ಯೋಜನೆ ಅಂದರೆ ಏನು ಮತ್ತು ಈ ಯೋಜನೆಯ ಉದ್ದೇಶವೇನು..?
ಸ್ನೇಹಿತರ ಕೇಂದ್ರ ಸರಕಾರ ಭಾರತ ದೇಶದಲ್ಲಿ ಇರುವಂತ ಜನರಿಗೆ ಹಾಗೂ ವಂಶ ಪಾರಂಪರಿಕ ವೃತ್ತಿಯನ್ನು ಮಾಡಿಕೊಂಡು ಬಂದಿರುವ ಜನರಿಗೆ ಹಾಗೂ ಸ್ವಂತ ಉದ್ಯೋಗ ಮಾಡಲು ಬಯಸುವವರಿಗೆ ಮತ್ತು ಮಹಿಳೆಯರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪಿಎಂ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದೆ.
ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ತಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಕೌಶಲ್ಯ ತರಬೇತಿ ನೀಡುವುದು ಹಾಗೂ ಆಧುನಿಕ ಯಂತ್ರೋಪಕರಣಗಳ ಖರೀದಿಗೆ 15,000 ವರೆಗೆ ಉಚಿತ ಹಣ ನೀಡುವುದು ಜೊತೆಗೆ ತಮ್ಮ ಸ್ವಂತ ಉದ್ಯೋಗವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಮೂರು ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಹಾಗಾಗಿ ಆಸಕ್ತಿ ಇರುವವರು ಈ ಒಂದು ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು
ಪಿಎಂ ವಿಶ್ವಕರ್ಮ ಯೋಜನೆಯ ಪ್ರಮುಖ ಉಪಯೋಗಗಳು..?
ಕೌಶಲ್ಯ ತರಬೇತಿ: ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ತಮ್ಮ ವೃತ್ತಿಗೆ ಅನುಗುಣವಾಗಿ 5 ರಿಂದ 7 ದಿನಗಳವರೆಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ.! ಇದರಿಂದ ತಮ್ಮ ವೃತ್ತಿಯನ್ನು ಇನ್ನಷ್ಟು ಸುಲಭವಾಗಿ ಮಾಡುವುದು ಹೇಗೆ ಹಾಗೂ ಹೆಚ್ಚಿನ ಲಾಭಗಳಿಸುವುದು ಹೇಗೆ ಎಂಬ ಮಾಹಿತಿ ತಿಳಿದುಕೊಳ್ಳಬಹುದು ಇದರ ಜೊತೆಗೆ ಪ್ರತಿದಿನ ₹500 ರೂಪಾಯಿ ಕೂಲಿ, 7 ದಿನದವರೆಗೆ ಅಂದರೆ ಒಟ್ಟು 3500 ಹಣ ಕೌಶಲ್ಯ ತರಬೇತಿಗೆ ಹಾಜರಿದ್ದ ಕಾರಣ ಪಡೆದುಕೊಳ್ಳಬಹುದು
15000 ಉಚಿತ ಹಣ ಸಿಗುತ್ತೆ: ಸ್ನೇಹಿತರ ಪಿಎಂ ವಿಶ್ವಕರ್ಮ ಯೋಜನೆ ಇನ್ನೊಂದು ಪ್ರಮುಖ ಉಪಯೋಗವೇನೆಂದರೆ ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಕೌಶಲ್ಯ ತರಬೇತಿ ಪೂರ್ಣಗೊಳಿಸಿದ ನಂತರ ಆಧುನಿಕ ಯಂತ್ರೋಪಕರಣಗಳ ಖರೀದಿಗೆ 15,000 ಉಚಿತವಾಗಿ ಹಣ ಈ ವೋಚರ್ ರೂಪದಲ್ಲಿ ಸಿಗುತ್ತದೆ
3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ: ಸಿಎಂ ವಿಶ್ವಕರ್ಮ ಯೋಜನೆ ಇನ್ನೊಂದು ಪ್ರಮುಖ ಅಂಶವೇನೆಂದರೆ, ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿ ಕಡಿಮೆ ಬಡ್ಡಿ ದರದಲ್ಲಿ ಮೊದಲನೇದಾಗಿ 50,000 ಯಿಂದ ಗರಿಷ್ಠ 1 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು ನಂತರ ಈ ಸಾಲವನ್ನು ಮರುಪಾವತಿಸಿದರೆ ಮತ್ತೆ 2 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಸಿಗುತ್ತದೆ ನಂತರ ಗರಿಷ್ಠ ಈ ಒಂದು ಯೋಜನೆ ಅಡಿಯಲ್ಲಿ 3 ಲಕ್ಷ ರೂಪಾಯಿವರೆಗೆ ಸಾಲ ಕಡಿಮೆ ಬಡ್ಡಿ ದರದಲ್ಲಿ ಪಡೆದುಕೊಳ್ಳಬಹುದು
ಉಚಿತ ಹೊಲಿಗೆ ಯಂತ್ರ ಪಡೆಯುವುದು ಹೇಗೆ..?
ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ನೀವು ಅರ್ಜಿ ಸಲ್ಲಿಸುವ ಮುನ್ನ ಯಾವ ವೃತ್ತಿಗೆ ಸಂಬಂಧಿಸಿದ ಕೆಲಸ ಮಾಡುತ್ತೀರಿ ಎಂಬ ಆಧಾರದ ಮೇಲೆ ನಿಮಗೆ ಈ ಯೋಜನೆ ಅಡಿಯಲ್ಲಿ ಅತ್ಯಾಧುನಿಕ ಸುಧಾರಿತ ತಂತ್ರೋಪಕರಣಗಳು ಹಾಗೂ ವಿತರಣೆ ಮಾಡಲಾಗುತ್ತದೆ.
ಹಾಗಾಗಿ ನೀವು ಮಹಿಳೆಯರಾಗಿದ್ದರೆ ಮನೆಯಲ್ಲಿ ಟೈಲರಿಂಗ್ ಮಾಡಲು ಬಯಸುತ್ತಿದ್ದಾರೆ ಅರ್ಜಿ ಸಲ್ಲಿಸುವ ಮುನ್ನ ಟೈಲರಿಂಗ್ ಮೇಲೆ ಅರ್ಜಿ ಸಲ್ಲಿಕೆ ಮಾಡಿ
ನಂತರ ನೀವು ಈ ಯೋಜನೆಯಲ್ಲಿ ಆಯ್ಕೆಯಾದರೆ ನಿಮಗೆ ಏಳು ದಿನಗಳವರೆಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ ನಂತರ ನಿಮಗೆ ಉಚಿತ ಹೊಲಿಗೆ ಯಂತ್ರ ಖರೀದಿ ಮಾಡಲು 15,000 ವರೆಗೆ ಈ ವೋಚರ್ ರೂಪದಲ್ಲಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಸೇರುತ್ತದೆ.
ಅಥವಾ ಈ ಒಂದು ಯೋಜನೆ ಅಡಿಯಲ್ಲಿ ಉಚಿತವಾಗಿ ಹೊಲಿಗೆ ಯಂತ್ರವನ್ನು ವಿತರಣೆ ಮಾಡಲಾಗುತ್ತದೆ ಹಾಗಾಗಿ ಅರ್ಜಿ ಸಲ್ಲಿಸುವ ಮುನ್ನ ನೀವು ಯಾವ ವೃತ್ತಿಯ ಮೇಲೆ ಅರ್ಜಿ ಸಲ್ಲಿಕೆ ಮಾಡುತ್ತೀರಿ ಎಂಬುದು ಮುಖ್ಯವಾಗುತ್ತದೆ
ಒಂದು ವೇಳೆ ನೀವು ವಿಸ್ತರ ಪೆಟ್ಟಿಗೆ ಅಥವಾ ಇತರೆ ವೃತ್ತಿಗೆ ಸಂಬಂಧಿಸಿದವರಾಗಿದ್ದರೆ ನಿಮ್ಮ ವೃತ್ತಿಗೆ ತಕ್ಕಂತೆ ಈ ಒಂದು ಯೋಜನೆ ಅಡಿಯಲ್ಲಿ ಟೂಲ್ ಕಿಟ್ ಸೌಲಭ್ಯವನ್ನು ನೀಡಲಾಗುತ್ತದೆ ಹಾಗಾಗಿ ಅರ್ಜಿ ಸಲ್ಲಿಸುವ ಮುನ್ನ ನಿಮಗೆ ಯಾವ ಯಂತ್ರ ಬೇಕು ಹಾಗು ನಿಮ್ಮ ವೃತ್ತಿಗೆ ಅನುಕೂಲವಾಗುವ ಟೂಲ್ ಕಿಟ್ ಆಯ್ಕೆ ಮಾಡಿಕೊಳ್ಳಿ
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳ ವಿವರ..?
- ಅರ್ಜಿದಾರ ಆಧಾರ್ ಕಾರ್ಡ್
- ಮೊಬೈಲ್ ಸಂಖ್ಯೆ
- ವೃತ್ತಿ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ಇತರೆ ಅಗತ್ಯ ದಾಖಲಾತಿಗಳು
ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ನೀವು ಅರ್ಜಿ ಸಲ್ಲಿಕೆ ಮಾಡಲು ಬಯಸಿದರೆ ಮೊದಲು ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು ಅಥವಾ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
https://pmvishwakarma.gov.in/
ಸ್ನೇಹಿತರೆ ನಿಮಗೆ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಬೇಕಾದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ಗಳಿಗೆ ಸೇರಿಕೊಳ್ಳಬಹುದು