E Shram Card: ಇ ಶ್ರಮ್ ಕಾರ್ಡ್ ಅರ್ಜಿ ಆಹ್ವಾನ.! ತಿಂಗಳಿಗೆ 3000 ಪಿಂಚಣಿ ಸೌಲಭ್ಯ – ಇಂದೇ ಅರ್ಜಿ ಸಲ್ಲಿಸಿ
ನಮಸ್ಕಾರ ಗೆಳೆಯರೇ ಕೇಂದ್ರ ಸರ್ಕಾರ ಇದೀಗ ಹೊಸ ಯೋಜನೆ ಪ್ರಾರಂಭ ಮಾಡಿದೆ. ಈ ಒಂದು ಯೋಜನೆಯಿಂದ ನೀವು ತಿಂಗಳಿಗೆ 3000 ಪಿಂಚಣಿ ಹಣ ಪಡೆದುಕೊಳ್ಳಬಹುದು ಹಾಗೂ ಒಂದು ಕುಟುಂಬದಲ್ಲಿ ಗಂಡ ಮತ್ತು ಹೆಂಡತಿ ತಿಂಗಳಿಗೆ ಒಟ್ಟು ₹6,000 ಪಿಂಚಣಿ ಹಣ ಪಡೆದುಕೊಳ್ಳಬಹುದು.
ಇಷ್ಟೇ ಅಲ್ಲದೆ ಹಲವಾರು ಸೌಲಭ್ಯ ಈ ಒಂದು ಕಾರ್ಡ್ ಮೂಲಕ ಪಡೆಯಲು ಅವಕಾಶವಿದೆ ಇದರ ಜೊತೆಗೆ ಇತ್ತೀಚಿಗೆ ಹೊಸ ರೇಷನ್ ಕಾರ್ಡ್ ಪಡೆಯಲು ಕೂಡ ಈ ಒಂದು ಕಾರ್ಡ್ ಮಾನದಂಡವಾಗಿ ಪರಿಗಣಿಸಲಾಗುತ್ತಿದೆ

ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಈ ಒಂದು ಯೋಜನೆ ಯಾವುದು ಹಾಗೂ ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಹಾಗೂ ಅರ್ಜಿ ಸಲ್ಲಿಸಿದರೆ ಯಾವೆಲ್ಲ ಪ್ರಯೋಜನಗಳು ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಲೇಖನವನ್ನು ಆದಷ್ಟು ಕೊನೆವರೆಗೂ ಓದಿ
ಕೇಂದ್ರ ಸರ್ಕಾರದಿಂದ ಇ ಶ್ರಮ್ ಕಾರ್ಡ್ ಯೋಜನೆ ಜಾರಿಗೆ..?
ನಮ್ಮ ಕೇಂದ್ರ ಸರ್ಕಾರ ಇದೀಗ ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ಹಾಗೂ ರೈತರಿಗೆ ಮತ್ತು ದಿನಗೂಲಿ ಕೆಲಸದಲ್ಲಿ ನಿರತರಾಗಿರುವಂಥ ಜನರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದ ವಯಸ್ಸಾದ ಸಂದರ್ಭದಲ್ಲಿ ಗ್ಯಾರಂಟಿ ಪಿಂಚಣಿ ಅಥವಾ ಪೆನ್ಷನ್ ನೀಡುವ ಉದ್ದೇಶದಿಂದ ಇ ಶ್ರಮ್ ಕಾರ್ಡ್ ಅಥವಾ ಶ್ರಮ ಯೋಗಿ ಯೋಜನೆ ಜಾರಿಗೆ ತಂದಿದೆ.
ಈ ಯೋಜನೆ ಮೂಲಕ 60 ವರ್ಷ ದಾಟಿದ ನಂತರ ತಿಂಗಳಿಗೆ 3000 ಪಿಂಚಣಿ ಗ್ಯಾರಂಟಿ ರೂಪದಲ್ಲಿ ನೀಡಲಾಗುತ್ತದೆ
ಹೌದು ಗೆಳೆಯರೇ, ನೀವೇನಾದರೂ ರೈತರು ಅಥವಾ ದಿನಗೂಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಗಾರೆ ಕೆಲಸ ಹಾಗೂ ಇತರ ಯಾವುದೇ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು.
ನಿಮ್ಮ ವೃದ್ಧಾಪ್ಯ ಜೀವನ ತುಂಬಾ ಸುಖಮಯವಾಗಿ ಜೀವಿಸಲು ಹಾಗೂ ಆರ್ಥಿಕ ಭದ್ರತೆಯ ದೃಷ್ಟಿಯಿಂದ ಈ ಒಂದು ಯೋಜನೆ ತುಂಬಾ ಅನುಕೂಲವಾಗುತ್ತದೆ..
ಹೌದು ಗೆಳೆಯರೇ ಕೇಂದ್ರ ಸರ್ಕಾರ ಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರಿಗೆ ಅಂದರೆ ರೈತರು, ಕೃಷಿ ಕಾರ್ಮಿಕರು, ದಿನಗೂಲಿ ಕೆಲಸ ಮಾಡುವವರು, ಮನೆ ಕೆಲಸ ಮಾಡುವವರು, ಗಾರೆ ಕೆಲಸ, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ಹಾಗೂ ಇತರ ಯಾವುದೇ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಲಾಭ ಪಡೆಯಬಹುದು
ಇ ಶ್ರಮ್ ಕಾರ್ಡ್ ಯೋಜನೆಯ ಮೂಲಕ ಯಾವೆಲ್ಲ ಉಪಯೋಗಗಳು ಸಿಗಲಿವೆ..?
ಗ್ಯಾರೆಂಟಿ ₹3,000 ಪಿಂಚಣಿ ಹಣ ಸಿಗುತ್ತೆ: ಹೌದು ಸ್ನೇಹಿತರೆ ಪ್ರಸ್ತುತ ನೀವು ಇ ಶ್ರಮ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದರೆ ನಿಮಗೆ ವಯಸ್ಸಾದಂತ ಸಂದರ್ಭದಲ್ಲಿ ಅಥವಾ ನಿಮಗೆ 60 ವರ್ಷ ದಾಟಿದ ನಂತರ ನೀವು ಈ ಒಂದು ಯೋಜನೆ ಮೂಲಕ ತಿಂಗಳಿಗೆ ಗ್ಯಾರಂಟಿಯಾಗಿ 3000 ಪಿಂಚಣಿ ಪಡೆಯಬಹುದು ಹಾಗೂ ಒಂದು ಕುಟುಂಬದಲ್ಲಿ ಗಂಡ ಮತ್ತು ಹೆಂಡತಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ತಿಂಗಳಿಗೆ 6000 ಹಣ ಪಿಂಚಣಿ ರೂಪದಲ್ಲಿ ಪಡೆದುಕೊಳ್ಳಲು ಅವಕಾಶವಿದೆ
2 ಲಕ್ಷ ರೂಪಾಯಿವರೆಗೆ ಅಪಘಾತ ವಿಮೆ ಸಿಗುತ್ತೆ: ಇ ಶ್ರಮ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಿದರೆ ಸಾಕು ಅರ್ಜಿದಾರ ಅಥವಾ ಫಲಾನುಭವಿ ಯಾವುದೇ ಸಂದರ್ಭದಲ್ಲಿ ಮರಣ ಹೊಂದಿದರೆ ಅಂತ ಸಂದರ್ಭದಲ್ಲಿ ಆತನ ಕುಟುಂಬಕ್ಕೆ ಅಥವಾ ನಾಮಿನಿಗೆ ಎರಡು ಲಕ್ಷ ರೂಪಾಯಿವರೆಗೆ ಅಪಘಾತ ವಿಮೆ ನೀಡಲಾಗುತ್ತದೆ
ರೂ.1 ಲಕ್ಷವರೆಗೆ ಹಣಕಾಸು ನೆರವು: ಹೌದು ಗೆಳೆಯರೆ ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದರೆ ಕೆಲಸ ಮಾಡುವಂತಹ ಸಂದರ್ಭದಲ್ಲಿ ಅಥವಾ ಇತರೆ ಯಾವುದೇ ಸಂದರ್ಭದಲ್ಲಿ ಅಪಘಾತಕ್ಕೆ ಉಂಟಾದಾಗ ನಿಮಗೆ ಅಂಗವಿಕಲತೆ ಉಂಟಾದರೆ ಅಥವಾ ಅಪಘಾತಕ್ಕೆ ಒಳಗಾದರೆ ಅಂತ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಒಂದು ಲಕ್ಷ ರೂಪಾಯಿವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ
ಇ ಶ್ರಮ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು.?
- ಅರ್ಜಿದಾರ ವಯಸ್ಸು ಕನಿಷ್ಠ 18 ವರ್ಷದಿಂದ 40 ವರ್ಷದ ಒಳಗಡೆ ಇರಬೇಕು
- ಅರ್ಜಿದಾರರು ಅಸಂಘಟಿತ ವಲಯದ ಕೂಲಿ ಕಾರ್ಮಿಕರಾಗಿರಬೇಕು (ರೈತರು, ದಿನಗೂಲಿ ಕಾರ್ಮಿಕರು, ಆಟೋರಿಕ್ಷಾ ಚಾಲಕರು, ಬೀದಿಬದಿ ವ್ಯಾಪಾರಿಗಳು, ಇತರೆ ಸಣ್ಣಪುಟ್ಟ ಕೆಲಸ ಮಾಡುವ ಕಾರ್ಮಿಕ)
- ಅರ್ಜಿದಾರರ ವಾರ್ಷಿಕ ಆದಾಯ ಎರಡು ಲಕ್ಷ ರೂಪಾಯಿಗಿಂತ ಕಡಿಮೆ ಹೊಂದಿರಬೇಕಾಗುತ್ತದೆ
- ಅರ್ಜಿದಾರರು ಖಾಸಗಿ ಅಥವಾ ಸರ್ಕಾರಿ ಉದ್ಯೋಗಿಗಳಾಗಿದ್ದರೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವುದಿಲ್ಲ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳ ವಿವರ.?
- ಅರ್ಜಿದಾರ ಆಧಾರ್ ಕಾರ್ಡ್
- ಮೊಬೈಲ್ ನಂಬರ್
- ಬ್ಯಾಂಕ್ ಪಾಸ್ ಬುಕ್
- ಕಾರ್ಮಿಕ ಕಾರ್ಡ್ ಅಥವಾ ಜಾಬ್ ಕಾರ್ಡ್
- ವೋಟರ್ ಐಡಿ
- ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಇತರೆ ಅಗತ್ಯ ದಾಖಲಾತಿಗಳು
ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ನೀವು ಇ ಶ್ರಮ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಬಯಸುತ್ತಿದ್ದೀರಾ ಹಾಗಾದರೆ ನೀವು ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಈ ಶ್ರಮ ಕಾರ್ಡ್ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು ಅಥವಾ ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
https://register.eshram.gov.in/
ಸ್ನೇಹಿತರ ಇದೇ ರೀತಿ ನಿಮಗೆ ಪ್ರತಿದಿನ ಹೊಸ ವಿಷಯಗಳು ಹಾಗೂ ಸರ್ಕಾರಿ ಯೋಜನೆಗಳು ಮತ್ತು ಪ್ರತಿದಿನ ಸುದ್ದಿಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಆಸಕ್ತಿ ಇದ್ದರೆ ನೀವು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು