Crop damage due to rain : ಮಳೆಯಿಂದ ಬೆಳೆಹಾನಿ ಆದ ರೈತರಿಗೆ ಪರಿಹಾರ, ಇಲ್ಲಿದೆ ಪೂರ್ಣ ಮಾಹಿತಿ !

Crop damage due to rain : ಮಳೆಯಿಂದ ಬೆಳೆಹಾನಿ ಆದ ರೈತರಿಗೆ ಪರಿಹಾರ, ಇಲ್ಲಿದೆ ಪೂರ್ಣ ಮಾಹಿತಿ !

 

WhatsApp Group Join Now
Telegram Group Join Now       

ಪ್ರಸ್ತುತ ರಾಜ್ಯದಲ್ಲಿನ ಹಲವು ರೈತರ ಕೂಗು ಬೆಳೆ ಸಾಲ ಮನ್ನಾ ಮಾಡುವ ಕುರಿತಾಗಿದೆ. ಇದರ ಬಗ್ಗೆ ಕೆಲವೇ ದಿನದ ಹಿಂದೆ ನಡೆದ ಇಂಟರ್ವ್ಯೂ ಅಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಾಲಮನ್ನಾ ಮಾಡುವ ವಿಷಯದ ಕುರಿತು, ನೋಡೋಣ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಯಾವುದೇ ನಿಖರ ಹೇಳಿಕೆ ಇದರ ಬಗ್ಗೆ ನೀಡಿಲ್ಲ. ಆದರೆ ರಾಜ್ಯದಲ್ಲಿ ಅತಿಯಾದ ಮಳೆಯಿಂದಾಗಿ ರೈತರ ಬೆಳೆನಾಶ ಆದ ಕಾರಣ , ಬೆಳೆಹಾನಿ ಪರಿಹಾರ ನೀಡುವ ಬಗ್ಗೆ ಸ್ಪಷ್ಟ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

ಕಂದಾಯ ಇಲಾಖೆ .ಅತ್ತು ಕೃಷಿ ಇಲಾಖೆಯ ಜಂಟಿ ಸಮೀಕ್ಷೆ ನಡೆಸಿ ಸಮೀಕ್ಷೆಯ ವರದಿಯ ಆಧಾರದ ಮೇಲೆ, ರಾಜ್ಯದ ಅರ್ಹ ರೈತರಿಗೆ ಬೆಳೆಹಾನಿ ಪರಿಹಾರ ಶೀಘ್ರದಲ್ಲೇ ಒದಗಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಂಡಿದ್ದಾರೆ.

 

ಅತಿಯಾದ ಮಳೆಯಿಂದ ಬೆಳೆಹಾನಿ

ಈ ವರ್ಷ ಅತಿಯಾದ ಮಳೆ ಆಗಿರುವ ಕಾರಣ , ರಾಜ್ಯದಲ್ಲಿ ಜನಜೀವನ ಬಹಳ ಅಸ್ತವ್ಯಸ್ತವಾಗಿದೆ. ಹಲವು ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಮತ್ತು ದೇಶದ ಬೆನ್ನೆಲುಬು ಆಗಿರುವ ರೈತರು ಅತಿವೃಷ್ಟಿಯಿಂದ ಆಗಿರುವ ಬೆಳೆನಾಶ ಕಂಡು ಕಂಗಾಲಾಗಿದ್ದಾರೆ. ಅದ ಕಾರಣ ರಾಜ್ಯದ ಅರ್ಹ ರೈತರಿಗೆ ಬೆಳೆಹಾನಿ ಪರಿಹಾರ ತಕ್ಷಣ ಒದಗಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಇದಲ್ಲದೆ ಬೆಳೆವಿಮೆ ಇರದ ರೈತರಿಗೂ ಸಹ ಬೆಳೆಹಾನಿ ಪರಿಹಾರ ನೀಡಬೇಕಾಗಿ ಸರ್ಕಾರಕ್ಕೆ ಜನರು ಮನವಿ ಇಟ್ಟಿದ್ದಾರೆ.

 

ಬೆಳೆ ಹಾನಿ ಹಣ ಪಡೆಯಲು ಹೀಗೆ ಮಾಡಿ?

ರೈತರೇ ನಿಮ್ಮ ಬೆಳೆ ಅತಿಯಾದ ಮಳೆಯಿಂದ ಹಾನಿಗೊಳಗಾಗಿದ್ದರೆ, ನಿಮ್ಮ ಊರಿನ ಕುಲಕರ್ಣಿ (village accountant officer) ಗೆ ನಿಮ್ಮ ಹೊಲಕ್ಕೆ ಸಂಬಂಧಿಸಿದ ಕೆಳಗೆ ನೀಡಲಾದ ದಾಖಲೆಗಳನ್ನು ನೀಡಿ, ಬೆಳೆಹಾನಿ ಹಣ ಪಡೆಯಲು ಅರ್ಜಿ ಉಲ್ಲೇಖಿಸಿ. ಬೇಕಾಗುವ ದಾಖಲೆಗಳು ಹೀಗಿವೆ.

WhatsApp Group Join Now
Telegram Group Join Now       
  • ಹೊಲದ ಪಹಣಿ
  • ಹೊಲದ ಮಾಲೀಕನ ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಬೆಳೆಹಾನಿ ಬಗ್ಗೆ ಪೂರಕ ದಾಖಲೆ ( ಫೋಟೋ)
  • ಇತರೆ ( ಹೊಲಕ್ಕೆ ಸಂಬಂಧಿಸಿದ)

 

ರೈತರ ಬೆಳೆ ಸಾಲ ಮನ್ನಾ , ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಸರ್ಕಾರಕ್ಕೆ ರಾಜ್ಯದ ಹಲವು ರೈತರು ಬೆಳೆ ಸಾಲ ಮನ್ನಾ ಕುರಿತಾಗಿ ಮನವಿ ಮಾಡಿದ್ದಾರೆ. ರಾಜ್ಯದ ಎಲ್ಲ ಕಡೆಯೂ ಬೆಳೆ ಸಾಲ ಮನ್ನಾ ಮಾಡುವಂತೆ ರೈತರು ಬೇಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನೋಡೋಣ , ಇದರ ಬಗ್ಗೆ ಖಂಡಿತ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

 

Leave a Comment